ರಾಜಸ್ತಾನದ 40 ರ ಹರೆಯದ ಮಹಿಳೆಯ ಮೇಲೆ ಗ್ಯಾಂಗ್ ರೇಪ್

    

Last Updated : Mar 10, 2018, 08:55 PM IST
ರಾಜಸ್ತಾನದ 40 ರ ಹರೆಯದ ಮಹಿಳೆಯ ಮೇಲೆ ಗ್ಯಾಂಗ್ ರೇಪ್  title=
ಸಾಂದರ್ಭಿಕ ಚಿತ್ರ

ಬರಾನ್: ರಾಜಾಸ್ಥಾನದ ಕೋಟಾ ನಗರದ  ಹತ್ತಿರ ಮಹಿಳೆಯೊಬ್ಬಳು ಪಟ್ಟಣದಿಂದ ಗ್ರಾಮಕ್ಕೆ ತೆರಳುವಾಗ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಆರೋಪಿಸಿ 40 ರ ಹರೆಯದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

ಮಹಿಳೆಯು ಹೇಳುವಂತೆ ಅತ್ಯಾಚಾರದ ಕೃತ್ಯವನ್ನು ಆರೋಪಿಗಳು  ಮೊಬೈಲ್ ಮೂಲಕ ರೆಕಾರ್ಡ್ ಮಾಡಿ ಅದನ್ನು ಇತರ ಮೊಬೈಲ್ ಫೋನ್ ಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಅವರು ದೂರು ನೀಡಿದ್ದಾರೆ.

ಈಗಾಗಲೇ ಈ ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಬರಾನ್ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

Trending News