MP: ಮತಎಣಿಕೆ ಕೇಂದ್ರದಲ್ಲಿ Wifi ಇಲ್ಲ, ವಿರೋಧ ಪಕ್ಷದ ಆರೋಪಕ್ಕೆ EC ಸ್ಪಷ್ಟನೆ

ಎಣಿಕೆಯ ಸಮಯದಲ್ಲಿ ಎಲ್ಲಾ ಮತಎಣಿಕೆ ಕೇಂದ್ರಗಳಲ್ಲಿ  ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲೆಡೆ ಸಿ.ಟಿ.ಟಿ.ವಿ ಕ್ಯಾಮೆರಾಗಳು ಸ್ಥಾಪಿಸಲ್ಪಟ್ಟಿವೆ.

Last Updated : Dec 10, 2018, 11:21 AM IST
MP: ಮತಎಣಿಕೆ ಕೇಂದ್ರದಲ್ಲಿ Wifi ಇಲ್ಲ, ವಿರೋಧ ಪಕ್ಷದ ಆರೋಪಕ್ಕೆ EC ಸ್ಪಷ್ಟನೆ title=

ಭೋಪಾಲ್: ಮಧ್ಯಪ್ರದೇಶ ಸೇರಿದಂತೆ ದೇಶದ ಎಲ್ಲಾ ಐದು ರಾಜ್ಯಗಳಲ್ಲಿ ಮತದಾನ ಮುಗಿದ ಬಳಿಕ ಮತ ಎಣಿಕೆಗೆ ಸಿದ್ಧತೆ ಆರಂಭವಾಗಿದೆ. ಏತನ್ಮಧ್ಯೆ ಚುನಾವಣಾ ಆಯೋಗ ಮತ್ತು ಬಿಜೆಪಿ ಸರ್ಕಾರ ಇವಿಎಂಗಳನ್ನು ಚಾಲನೆ ಮಾಡುವ ಮತ್ತು ಸ್ಟ್ರಾಂಗ್ ರೂಂ ಸುತ್ತಮುತ್ತ ವೈಫೈ ಚಾಲನೆಯಲ್ಲಿದೆ ಎಂದು ವಿರೋಧ ಪಕ್ಷದವರು ಪ್ರತಿಪಾದಿಸಿದ್ದಾರೆ. ಈ ಆರೋಪವನ್ನು ತಳ್ಳಿಹಾಕಿರುವ ಚುನಾವಣಾ ಆಯೋಗ, ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಅದೇ ಸಮಯದಲ್ಲಿ ಸ್ಟ್ರಾಂಗ್ ರೂಂ ನಲ್ಲಿ ವೈಫೈ ಬಳಕೆಯನ್ನು ಸಹ ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ. ಎಣಿಕೆಯ ಸಮಯದಲ್ಲಿ ಎಲ್ಲಾ ಮತಎಣಿಕೆ ಕೇಂದ್ರಗಳಲ್ಲಿ  ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲೆಡೆ ಸಿ.ಟಿ.ಟಿ.ವಿ ಕ್ಯಾಮೆರಾಗಳು ಸ್ಥಾಪಿಸಲ್ಪಟ್ಟಿವೆ ಎಂದು  ಮುಖ್ಯ ಚುನಾವಣಾ ಅಧಿಕಾರಿ ಹೇಳಿದರು.

ಸ್ಟ್ರಾಂಗ್ ರೂಮ್ ಸುತ್ತಲೂ ವೈಫೈ ಬಳಕೆ ಬಗ್ಗೆ ಭಾನುವಾರ ವಿರೋಧ ಪಕ್ಷದ ನಾಯಕ ಟ್ವೀಟ್ ಮಾಡಿದ್ದರು. ಟ್ವೀಟ್ ನಲ್ಲಿ ಸ್ಟ್ರಾಂಗ್ ರೂಮ್ ಪ್ರದೇಶದ ಸುತ್ತಲೂ ವೈಫೈ ಬಳಕೆಗೆ ಗಮನ ಸೆಳೆದಿದ್ದರು. 'ಇಂದೋರ್ ಮತ್ತು ಇನ್ನಿತರ ಸ್ಥಳಗಳಲ್ಲಿ ಸ್ಟ್ರಾಂಗ್ ರೂಮ್ ಸುತ್ತ ವೈಫೈ ಚಾಲನೆಯಲ್ಲಿದೆ. ಈ ರೀತಿಯಾಗಿ ಸ್ಟ್ರಾಂಗ್ ರೂಂ ಸುತ್ತಮುತ್ತ ವೈಫೈ ಬಳಕೆ ಮತಗಣನೆ ಬಗ್ಗೆ ಸಂದೇಹ ತರುವಂತಹದ್ದು ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ಈ ಸಮಯದಲ್ಲಿ ಇಂಟರ್ನೆಟ್ ಬಳಕೆ ಏಕೆ? ಇದರಿಂದ ಇವಿಎಂ ಚಿಪ್ಪನ್ನು ಸುಲಭವಾಗಿ ಪ್ರವೇಶಿಸಬಹುದೇ? ಇದು ತುಂಬಾ ಗಂಭೀರ ವಿಷಯ.'

ಇನ್ನೊಂದೆಡೆ, ಮತಎಣಿಕೆ ಕೇಂದ್ರಗಳಲ್ಲಿ ಯಾವುದೇ ಸಚಿವ, ಮೇಯರ್, ಪುರಸಭೆ ಅಧ್ಯಕ್ಷರು ಅಥವಾ ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ನ್ಯಾಯಯುತವಾಗಿ ಆಯೋಗವು ನೇಮಕ ಮಾಡುವುದಿಲ್ಲ. ಅಷ್ಟೇ ಅಲ್ಲ ಅವರನ್ನು ಮತ ಎಣಿಕೆ ಕೇಂದ್ರಗಳ ಸುತ್ತ ಓಡಾಡುವುದನ್ನು ಅನುಮತಿಸುವುದಿಲ್ಲ. ಎಣಿಕೆಯ ಕೇಂದ್ರಗಳಲ್ಲಿ ಯಾವುದೇ ರೀತಿಯ ಅಪರಾಧವನ್ನು ತಡೆಯಲು ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಆಯೋಜಿಸಲಾಗಿದೆ. ಆದ್ದರಿಂದ ಅನುಮಾನಾಸ್ಪದ ವ್ಯಕ್ತಿಯು ಅನುಮತಿಯಿಲ್ಲದೆ ಪ್ರವೇಶಿಸಲು ಸಾಧ್ಯವಿಲ್ಲ.

ಇದಕ್ಕಾಗಿಗೆ ಕೇಂದ್ರಕ್ಕೆ ಭೇಟಿ ನೀಡುವ ಪ್ರತಿ ವ್ಯಕ್ತಿಯ ಮೇಲೂ ಎಚ್ಚರಿಕೆಯಿಂದಿದ್ದು, ಗುರುತಿನ ಕಾರ್ಡ್ ತೋರಿಸಿದ ನಂತರ ಮತಕೆಂದ್ರ ಪ್ರವೇಶಕ್ಕೆ ಮಾತ್ರ ಅನುಮತಿಸಲಾಗುತ್ತದೆ. ಎಣಿಕೆಯ ಕೇಂದ್ರದಲ್ಲಿ ಭಾಗಿಯಾಗಿರುವ ಯಾವುದೇ ಉದ್ಯೋಗಿಗೆ ಮೊಬೈಲ್ ಅನುಮತಿಸಲಾಗುವುದಿಲ್ಲ. ಅಡಿಶನ್ ಅಬ್ಸರ್ವರ್ ಹೊರತಾಗಿ ರಿಟರ್ನಿಂಗ್, ಅಸಿಸ್ಟೆಂಟ್ ರಿಟರ್ನಿಂಗ್ ಅಧಿಕಾರಿಗಳಿಗೆ ಮಾತ್ರ ಮೊಬೈಲ್ ಬಳಸುವ ಅವಕಾಶವಿದೆ. ಇದಲ್ಲದೆ, ಕೇಂದ್ರದೊಳಗೆ  ಯಾವುದೇ ರೀತಿಯ ಅಂತರ್ಜಾಲ ಬಳಕೆಗೆ ನಿಷೇಧವಿದೆ.

Trending News