ನವದೆಹಲಿ: ಬಾಲಿವುಡ್ ನ ಖ್ಯಾತ ನಟಿ ರಾಧಿಕಾ ಆಪ್ಟೆ ಇತ್ತೀಚೆಗೆ ನೆಹ ಧುಪಿಯಾ ಅವರ ಚಾಟ್ ಶೋನ ಚಿತ್ರೀಕರಣದಲ್ಲಿ ತಮಿಳು ಸೂಪರ್ ಸ್ಟಾರ್ ಒಬ್ಬನ ಕೆನ್ನೆ ಬಾರಿಸಿರುವ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಈ ಕುರಿತಾಗಿ ಪ್ರಸ್ತಾಪಿಸಿರುವ ರಾಧಿಕಾ ತಮಿಳು ಚಲನಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಆ ತಮಿಳು ನಟನು ಸೆಟ್ ನಲ್ಲಿ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದನು ಅದಕ್ಕೆ ಅವನ ಕೆನ್ನೆಗೆ ಬಾರಿಸಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.
ರಾಧಿಕಾ ಹೇಳುವಂತೆ "ಅದು ಸೆಟ್ನಲ್ಲಿ ನನ್ನ ಮೊದಲ ದಿನ, ಪ್ರಸಿದ್ಧ ದಕ್ಷಿಣ ಭಾರತದ ನಟನು ನನ್ನ ಪಾದಗಳಿಗೆ ಸ್ಪರ್ಶಿಸಲು ಆರಂಭಿಸಿದಾಗ ನಾನು ಸಹಜವಾಗಿ ಅವರಿಗೆ ಕಪಾಳ ಮೋಕ್ಷ ಮಾಡಿದ್ದೇನೆ " ಎಂದು ಅವರು ತಿಳಿಸಿದ್ದಾರೆ. ನೆಹಾ ಧುಪಿಯಾ ರವರ ಈ ಚಾಟ್ ನಲ್ಲಿ ನಟಿ ರಾಧಿಕಾ ಆಪ್ಟೆ ಜೊತೆ ರಾಜ್ ಕುಮಾರ್ ರಾವ್ ಕೂಡಾ ಸಾಥ್ ನೀಡಿದರು.