ಕತ್ತೆ ಹಾಲು ಏಕೆ ದುಬಾರಿ ಗೊತ್ತಾ?: ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು ಇದರ ಪ್ರಯೋಜನ

ಕತ್ತೆಗಳನ್ನು ಹೊರೆ ಹೊರಲು ಮಾತ್ರ ಬಳಸಬಹುದೆಂದು ಹೆಚ್ಚಿನವರು ಭಾವಿಸಿರುತ್ತಾರೆ. ಆದರೆ ಕತ್ತೆ ಹಾಲಿನ ಪ್ರಯೋಜನಗಳನ್ನು ತಿಳಿದರೆ ನಿವೂ ನಿಜಕ್ಕೂ ಅಚ್ಚರಿ ಪಡುತ್ತೀರಿ.

Written by - Puttaraj K Alur | Last Updated : Dec 19, 2021, 08:00 PM IST
  • ಕತ್ತೆ ಹಾಲು ನಿಮ್ಮ ಚರ್ಮದ ಆರೈಕೆಗೆ ತುಂಬಾ ಒಳ್ಳೆಯದು
  • ಕತ್ತೆ ಹಾಲಿನಲ್ಲಿ ಕೊಬ್ಬು ಮತ್ತು ಪ್ರೋಟೀನ್ ಕಡಿಮೆ ಇರುತ್ತದೆ
  • ಕತ್ತೆಯ ಹಾಲನ್ನು ಕ್ರೀಮ್‌, ಮಾಯಿಶ್ಚರೈಸರ್‌ & ಸಾಬೂನು ತಯಾರಿಸಲು ಬಳಸಲಾಗುತ್ತದೆ
ಕತ್ತೆ ಹಾಲು ಏಕೆ ದುಬಾರಿ ಗೊತ್ತಾ?: ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು ಇದರ ಪ್ರಯೋಜನ title=
ಕತ್ತೆ ಹಾಲು ಏಕೆ ದುಬಾರಿ ಗೊತ್ತಾ?

ನವದೆಹಲಿ: ನೀವು ಪ್ರತಿ ಲೀಟರ್‌ಗೆ ಸರಾಸರಿ 50 ರೂ.ನಂತೆ ದೈನಂದಿನ ಬಳಕೆಗೆ ಹಾಲನ್ನು ಖರೀದಿಸುತ್ತೀರಿ. ಆದರೆ ಹಾಲಿನ ಬೆಲೆ ಲೀಟರ್‌ಗೆ ಸಾವಿರಾರು ರೂಪಾಯಿ ಇದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೌದು, ಇದು ನಿಜ. ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಕತ್ತೆ ಹಾಲನ್ನು ಮಾರಾಟ ಮಾಡಲಾಗುತ್ತದೆ. ಕರ್ನಾಟಕವೂ ಕೆಲವು ಕಡೆ ಕತ್ತೆ ಹಾಲು(Donkey's Milk) ಮಾರುವವರು ಇದ್ದಾರೆ. ಒಂದೇ ಒಂದು ಲೀಟರ್ ಕತ್ತೆಹಾಲು ಬೇಕೆಂದರೆ ನೀವು ಸಾವಿರಾರು ರೂ. ಬಿಚ್ಚಬೇಕು. ಅಷ್ಟಕ್ಕೂ ಕತ್ತೆ ಹಾಲು ಏಕೆ ದುಬಾರಿ ಎಂಬುದರ ಬಗ್ಗೆ ನಾವು ಇಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.   

ಕತ್ತೆ ಹಾಲು ತುಂಬಾ ಪ್ರಯೋಜನಕಾರಿ

ವರದಿಗಳ ಪ್ರಕಾರ ಕತ್ತೆಯ ಹಾಲನ್ನು ಔಷಧೀಯ ಮತ್ತು ಸೌಂದರ್ಯವರ್ಧಕ ಉತ್ಪನ್ನ(Beauty Products)ಗಳನ್ನು ತಯಾರಿಸಲು ಬಳಸಲಾಗುತ್ತದೆ. ಕತ್ತೆ ಹಾಲು ಜೀವಕೋಶಗಳನ್ನು ಗುಣಪಡಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಪ್ರಾಚೀನ ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು ಎಂದು ಹೇಳಲಾಗುತ್ತದೆ. ತನ್ನ ತ್ವಚೆಯನ್ನು ಕಾಂತಿಯುತವಾಗಿಡಲು ಆಕೆ ಹೀಗೆ ಮಾಡುತ್ತಿದ್ದಳಂತೆ.

ಇದನ್ನೂ ಓದಿ: 2022 ರಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಬಳ ಹೆಚ್ಚಳ : ಈ ಲೆಕ್ಕಾಚಾರ ಪರಿಶೀಲಿಸಿ

ಈ ಜನರಿಗೆ ಕತ್ತೆ ಹಾಲು ಪ್ರಯೋಜನಕಾರಿ

ಹಸು ಅಥವಾ ಎಮ್ಮೆಯ ಹಾಲಿನಿಂದ ಅಲರ್ಜಿ ಇರುವವರು ಕತ್ತೆ ಹಾಲು(Expensive Milk) ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ. ವರದಿಯ ಪ್ರಕಾರ ಕತ್ತೆ ಹಾಲು ಮನುಷ್ಯನ ಹಾಲಿನಂತಿರುತ್ತದೆ. ಕತ್ತೆ ಹಾಲಿನಲ್ಲಿ ಕೊಬ್ಬು ಮತ್ತು ಪ್ರೋಟೀನ್ ಕಡಿಮೆ ಇರುತ್ತದೆ. ಆದಾಗ್ಯೂ ಇದರಲ್ಲಿ ಲ್ಯಾಕ್ಟೋಸ್ ಅಧಿಕವಾಗಿರುತ್ತದೆ. ಕತ್ತೆಯ ಹಾಲು ಬೇಗ ಸಿಡಿಯುತ್ತದೆ ಆದರೆ ಇದರಿಂದ ಪನೀರ್ ತಯಾರಿಸಲು ಸಾಧ್ಯವಿಲ್ಲವಂತೆ.

ಇದು ಕತ್ತೆ ಹಾಲಿನ ಗುಣ

ತಜ್ಞರ ಪ್ರಕಾರ ಕತ್ತೆ ಹಾಲಿನಲ್ಲಿ ಎರಡು ವಿಶೇಷ ಗುಣಗಳಿವೆ. ಮೊದಲನೆಯದಾಗಿ ಕತ್ತೆಯ ಹಾಲು ಹೆಣ್ಣಿನ ಹಾಲಿನಂತೆ. ಇದು ಉತ್ಕರ್ಷಣ ನಿರೋಧಕ ಮತ್ತು ಪುನರುತ್ಪಾದಕ ಸಂಯುಕ್ತಗಳನ್ನು ಒಳಗೊಂಡಿದೆ. ಇದರಿಂದ ತ್ವಚೆಯು ಮೃದುವಾಗಿರುತ್ತದೆ. ಕತ್ತೆಯ ಹಾಲನ್ನು ಕ್ರೀಮ್‌ಗಳು, ಮಾಯಿಶ್ಚರೈಸರ್‌ಗಳು ಮತ್ತು ಸಾಬೂನುಗಳನ್ನು ತಯಾರಿಸಲು ಬಳಸಲಾಗುತ್ತದೆ. ಹಲವೆಡೆ ಕತ್ತೆ ಹಾಲಿನಿಂದ ತಯಾರಿಸಿದ ಸೌಂದರ್ಯವರ್ಧಕ(Cosmetics)ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಕತ್ತೆಗಳನ್ನು ಹೆಚ್ಚಾಗಿ ಹೊರೆ ಹೊರಲು ಬಳಸಲಾಗುತ್ತದೆ, ಆದರೆ ಕತ್ತೆ ಹಾಲಿನ ಈ ವಿಶೇಷತೆಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿರುತ್ತದೆ.

ಇದನ್ನೂ ಓದಿ: Aadhaar-voter ID Linking : ನಿಮ್ಮ ಆಧಾರ್ ಜೊತೆ Voter ID ಲಿಂಕ್ ಮಾಡುವುದು ತುಂಬಾ ಸುಲಭ : ಹೇಗೆ ಇಲ್ಲಿ ಪರಿಶೀಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News