Indians Rescue From Afghanistan: ಅಫ್ಘಾನಿಸ್ಥಾನ ರಕ್ಷಣಾ ಕಾರ್ಯಾಚರಣೆಗೆ 'Devi Shakti' ಹೆಸರು, ಈ ಹೆಸರೇ ಯಾಕೆ?

Operation Devi Shakti - ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನಿಗಳು (Taliban) ವಶಕ್ಕೆ ಪಡೆದ ನಂತರ, ಭಾರತ ಸರ್ಕಾರವು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೆಲಸ ಮಾಡುತ್ತಿದೆ. ವರದಿಗಳ ಪ್ರಕಾರ, ಇದುವರೆಗೆ 750 ಕ್ಕೂ ಹೆಚ್ಚು ಭಾರತೀಯರು (Indians Rescue From Afghanistan), ಇತರ ದೇಶಗಳ ಜನರು ಸೇರಿದಂತೆ, ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಂಡಿದ್ದಾರೆ. ಇದೀಗ ಭಾರತ ಸರ್ಕಾರ ಈ ಕಾರ್ಯಾಚರಣೆಗೆ 'ದೇವಿ ಶಕ್ತಿ' ಎಂದು ಹೆಸರನ್ನಿಟ್ಟಿದೆ.

Written by - Nitin Tabib | Last Updated : Aug 24, 2021, 03:15 PM IST
  • ಟ್ವೀಟ್ ಮಾಡುವ ಮೂಲಕ 'ಆಪರೇಶನ್ ದೇವಿ ಶಕ್ತಿ' ಮುಂದುವರೆದಿದೆ ಎಂದ ವಿದೇಶಾಂಗ ಸಚಿವ ಎಸ್. ಜೈಶಂಕರ್.
  • ಈ ಕಾರ್ಯಾಚರಣೆಗೆ 'ದೇವಿ ಶಕ್ತಿ' ಎಂಬ ಹೆಸರನ್ನೇ ಏಕೆ ಇಡಲಾಗಿದೆ.
  • ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರ ಕುತೂಹಲ ಮತ್ತು ಊಹೆಗಳು ತೀವ್ರ.
Indians Rescue From Afghanistan: ಅಫ್ಘಾನಿಸ್ಥಾನ ರಕ್ಷಣಾ ಕಾರ್ಯಾಚರಣೆಗೆ 'Devi Shakti' ಹೆಸರು, ಈ ಹೆಸರೇ ಯಾಕೆ? title=
Operation Devi Shakti (File Photo)

Operation Devi Shakti - ಅಫ್ಘಾನಿಸ್ತಾನವನ್ನು (Afghanistan) ತಾಲಿಬಾನಿಗಳು (Taliban) ವಶಕ್ಕೆ ಪಡೆದ ನಂತರ, ಭಾರತ ಸರ್ಕಾರವು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೆಲಸ ಮಾಡುತ್ತಿದೆ. ವರದಿಗಳ ಪ್ರಕಾರ, ಇದುವರೆಗೆ 750 ಕ್ಕೂ ಹೆಚ್ಚು ಭಾರತೀಯರು (Indians Rescue From Afghanistan), ಇತರ ದೇಶಗಳ ಜನರು ಸೇರಿದಂತೆ, ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಂಡಿದ್ದಾರೆ. ಇದೀಗ ಭಾರತ ಸರ್ಕಾರ ಈ ಕಾರ್ಯಾಚರಣೆಗೆ 'ದೇವಿ ಶಕ್ತಿ' ಎಂದು ಹೆಸರನ್ನಿಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸುಬ್ರಮಣ್ಯಮ್ ಜೈಶಂಕರ್ (S.Jaishankar), 'ಆಪರೇಶನ್ ದೇವಿ ಶಕ್ತಿ (Operation Devi Shakti)ಚಾಲನೆಯಲ್ಲಿದೆ, 78 ಜನರು ಕಾಬೂಲ್ ನಿಂದ ದುಶಾಂಬೆ ಮೂಲಕ ಆಗಮಿಸಿದ್ದಾರೆ. ಭಾರತೀಯ ವಾಯುಪಡೆ, ಏರ್ ಇಂಡಿಯಾ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ತಂಡಕ್ಕೆ ಅವರ ಅವಿರತ ಪ್ರಯತ್ನಕ್ಕೆ ಅಭಿನಂದನೆಗಳು' ಎಂದಿದ್ದಾರೆ. 

ಇದನ್ನೂ ಓದಿ-Taliban: ಜೀನ್ಸ್ ಧರಿಸಿದರೆ ಥಳಿತ, ನೇಲ್ ಪಾಲಿಶ್ ಹಾಕಿದರೆ ಸಿಗಲಿದೆ ಭಯಾನಕ ಶಿಕ್ಷೆ

ಆದರೆ, ಈ ರಕ್ಷಣಾ ಕಾರ್ಯಾಚರಣೆಗೆ 'ದೇವಿ ಶಕ್ತಿ' ಎಂದೇ ಏಕೆ ಹೆಸರನ್ನಿಡಲಾಗಿದೆ? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು. ಈ ಕುರಿತು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಮುಂದೆ ಬಂದಿಲ್ಲ. ಆದರೆ, ಈ ಆಪರೇಶನ್ ನಲ್ಲಿ ಶಾಮೀಲಾಗಿರುವ ಜನರಿಂದ ತಿಳಿದು ಬಂದ ಮಾಹಿತಿಯ ಪ್ರಕಾರ ಈ ಕಾರ್ಯಾಚರಣೆಯು ಅಮಾಯಕ ಹಾಗೂ ನಿರ್ದೋಷ ಜನರನ್ನು ಹಿಂಸೆಯಿಂದ ಕಾಪಾಡುವ ಒಂದು ಪ್ರಯತ್ನವಾಗಿದೆ. ಅಂದರೆ, ದೇವಿ ದುರ್ಗೆ ರಾಕ್ಷೆಸರಿಂದ ನಿರ್ದೋಷ ಜನರನ್ನು ಕಾಪಾಡುವ ರೀತಿಯಲ್ಲಿಯೇ ಈ ಕಾರ್ಯಾಚರಣೆ ಇದೆ. ಪ್ರಧಾನಿ ನರೇಂದ್ರ ಮೋದಿ ದುರ್ಗಾ ದೇವಿಯ ಆರಾಧಕರಾಗಿದ್ದಾರೆ ಹಾಗೂ ಪ್ರತಿ ವರ್ಷ ನವರಾತ್ರಿಯ ಸಂದರ್ಭದಲ್ಲಿ ಅವರು ವೃತ ಕೈಗೊಳ್ಳುತ್ತಾರೆ ಎಂಬುದು ಇಲ್ಲಿ ಉಲ್ಲೇಖನೀಯ. 

ಇದನ್ನೂ ಓದಿ-Taliban: ಪಂಜಶೀರ್ ಅನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ ತಾಲಿಬಾನ್‌ಗೆ ದೊಡ್ಡ ಹಿನ್ನಡೆ

ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಜನರು ಇದನ್ನು ತಮ್ಮದೇ ಆದ ರೀತಿಯಲ್ಲಿ ಡಿಕೋಡ್ ಮಾಡುವ ಪ್ರಯತ್ನದಲ್ಲಿದ್ದಾರೆ. ಈ ಕಾರ್ಯಾಚರಣೆ ಅಫ್ಘಾನಿಸ್ಥಾನದಲ್ಲಿ ಸಿಲುಕಿಕೊಂಡ ಜನರ ಜೀವನದಲ್ಲಿ ಒಂದು ಭರವಸೆ ಹಾಗೂ ಖುಷಿಯನ್ನು ತರುತ್ತಿದೆ. ಅಂದರೆ, ಇದು ಕೆಟ್ಟದರ ಮೇಲೆ ವಿಜಯವನ್ನು ಎತ್ತಿ ತೋರಿಸುತ್ತಿದೆ. ಹೀಗಾಗಿ ಈ ಕಾರ್ಯಾಚರಣೆಯನ್ನು 'ಆಪರೇಶನ್ ದೇವಿ ಶಕ್ತಿ' ಎಂದು ಕರೆಯಲಾಗುತ್ತಿದೆ ಎಂದು ಜನರು ಚರ್ಚಿಸುತ್ತಿದ್ದಾರೆ.

ಇದನ್ನೂ ಓದಿ-Why Enactment Of CAA Necessary: ಅಫ್ಘಾನಿಸ್ಥಾನದಲ್ಲಿ ಹಿಂದೂ-ಸಿಖ್ಖರ ಪಲಾಯನ ಕುರಿತು ಮೋದಿ ಸರ್ಕಾರ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News