ಬಿಜೆಪಿ ವಾಜಪೇಯಿ ಹೆಸರಿನಲ್ಲಿ ಯಾಕೆ ಹೊಸ ಸ್ಟೇಡಿಯಂ ನಿರ್ಮಿಸಲಿಲ್ಲ?- ಅಖಿಲೇಶ್ ಯಾದವ್

ಲಕ್ನೋದಲ್ಲಿರುವ ಸ್ಟೇಡಿಯಂಗೆ ವಾಜಪೇಯಿ ಹೆಸರನ್ನು ನಾಮಕಾರಣ ಮಾಡಿರುವ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಪ್ರಶ್ನಿಸಿರುವ ಅಖಿಲೇಶ್ ಯಾದವ್ ಯಾಕೆ ವಾಜಪೇಯಿ ಹೆಸರಿನಲ್ಲಿ ಹೊಸ ಸ್ಟೇಡಿಯಂ ನಿರ್ಮಿಸಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

Last Updated : Nov 7, 2018, 05:39 PM IST
 ಬಿಜೆಪಿ ವಾಜಪೇಯಿ ಹೆಸರಿನಲ್ಲಿ ಯಾಕೆ ಹೊಸ ಸ್ಟೇಡಿಯಂ ನಿರ್ಮಿಸಲಿಲ್ಲ?- ಅಖಿಲೇಶ್ ಯಾದವ್ title=

ನವದೆಹಲಿ: ಲಕ್ನೋದಲ್ಲಿರುವ ಸ್ಟೇಡಿಯಂಗೆ ವಾಜಪೇಯಿ ಹೆಸರನ್ನು ನಾಮಕಾರಣ ಮಾಡಿರುವ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಪ್ರಶ್ನಿಸಿರುವ ಅಖಿಲೇಶ್ ಯಾದವ್ ಯಾಕೆ ವಾಜಪೇಯಿ ಹೆಸರಿನಲ್ಲಿ ಹೊಸ ಸ್ಟೇಡಿಯಂ ನಿರ್ಮಿಸಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿ ಸ್ಟೇಡಿಯಂನ್ನು ನಾಮಕಾರಣ ಮಾಡಿದ್ದಕ್ಕೆ ಸಂತಸವಾಗಿದೆ. ಅವರು ಸ್ಟೇಡಿಯಂನ್ನು ನಿರ್ಮಿಸದಿದ್ದರೂ ಪರವಾಗಿಲ್ಲ ಕನಿಷ್ಠ ಇದನ್ನಾದರೂ ಮಾಡಿದೆ. ಆದ್ಯಾಗ್ಯೂ ಬಿಜೆಪಿ ವಾಜಪೇಯಿ ಅವರ ಗ್ರಾಮದಲ್ಲಿ ಇದಕ್ಕಿಂತಲೂ ಉತ್ತಮವಾದ ಸ್ಟೇಡಿಯಂನ್ನು ನಿರ್ಮಿಸಬಹುದು ಎಂದು ಅವರು ತಿಳಿಸಿದ್ದಾರೆ.

ಸೋಮವಾರದಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟ್ವೆಂಟಿ -20 ಕ್ರಿಕೆಟ್ ಪಂದ್ಯಕ್ಕೂ ಮೊದಲು ಯೋಗಿ ಆದಿತ್ಯನಾಥ್ ಸರ್ಕಾರ ಏಕಾನಾ ಅಂತರಾಷ್ಟ್ರೀಯ ಕ್ರೀಡಾಂಗಣವನ್ನು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಸ್ಟೇಡಿಯಂ ಎಂದು ಮರುನಾಮಕರಣ ಮಾಡಿದ ಹಿನ್ನಲೆಯಲ್ಲಿ ಅಖಿಲೇಶ್ ಯಾದವ್ ಅವರ ಹೇಳಿಕೆ ಬಂದಿದೆ.

ಬಿಜೆಪಿಯು ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸುವ ಪಕ್ಷ  ಆದರೆ ಕನಿಷ್ಠ ಅದಕ್ಕೆ ದೇವರ ಮೇಲೆಯೂ ನಿಷ್ಠೆಯಿಲ್ಲ, ಏಕೆಂದರೆ ಎಕಾನಾ ಎಂದರೆ ವಿಷ್ಣು ಎಂದರ್ಥ ಎಂದು ಅಖಿಲೇಶ್ ಬಿಜೆಪಿ ನಡೆಗೆ ಕಿಡಿಕಾರಿದರು. ಬಿಜೆಪಿಯನ್ನು ಅಟಲ್ ಜಿ ವನ್ನು ಪ್ರಾಮಾಣಿಕವಾಗಿ ಗೌರವಿಸುತ್ತಿದ್ದರೆ ಬತೇಶ್ವರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಬೇಕು  ಅಲ್ಲದೆ ಈ ಪ್ರದೇಶದಲ್ಲಿ ಯಮುನಾ ನದಿಯು ಕೊಳಚೆಯಂತಾಗಿದ್ದು ಇದನ್ನು ಅಭಿವೃದ್ದಿ ಮಾಡಲು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲವೆಂದು ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟರು.

 

Trending News