ಜನನದ ನಂತರ ಹುಟ್ಟುವ, ಸಾವಿನ ಮೊದಲು ನಶಿಸುವ ಮಾನವನ ದೇಹದ ಅಂಗ ಯಾವುದು?

General Knowledge Trending Quiz: ಕೆಲವೊಮ್ಮೆ ತೀರಾ ವಿರಳವಾದ ವಿಷಯಗಳ ಬಗ್ಗೆ ನಮಗೆ ಅರಿವು ಹೆಚ್ಚಾಗಿ ಇರುವುದಿಲ್ಲ, ಅಂತಹ ಕೆಲ ಸಂಗತಿಗಳ ಬಗ್ಗೆ ನಾವಿಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

Written by - Bhavishya Shetty | Last Updated : Oct 2, 2023, 04:39 PM IST
    • ಮಾನವ ದೇಹದ ಯಾವ ಭಾಗವು ದುರ್ಬಲವಾಗಿದೆ?
    • ಬೆಳವಣಿಗೆಯನ್ನು ನಿಲ್ಲಿಸುವ ದೇಹದ ಕೊನೆಯ ಭಾಗ ಯಾವುದು?
    • ಇಂತಹ ಕೆಲ ಸಂಗತಿಗಳ ಬಗ್ಗೆ ನಾವಿಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.
ಜನನದ ನಂತರ ಹುಟ್ಟುವ, ಸಾವಿನ ಮೊದಲು ನಶಿಸುವ ಮಾನವನ ದೇಹದ ಅಂಗ ಯಾವುದು? title=
General Knowledge

General Knowledge Trending Quiz: ಪ್ರತಿಯೊಬ್ಬ ವ್ಯಕ್ತಿಗೂ ತಿಳಿದಿರಬೇಕಾದ ಪ್ರಮುಖ ಸಂಗತಿಗಳನ್ನು ಸಾಮಾನ್ಯ ಜ್ಞಾನ ಎಂದು ಕರೆಯಲಾಗುತ್ತದೆ. ಹೆಸರೇ ಹೇಳುವಂತೆ, ಸಾಮಾನ್ಯ ವಿಷಯಗಳ ಬಗ್ಗೆ ವ್ಯಕ್ತಿಗಿರುವ ಜ್ಞಾನವೇ ಜನರಲ್ ನಾಲೆಡ್ಜ್ ಎನ್ನಲಾಗುತ್ತದೆ. ಆದರೆ ಈ ಬಗ್ಗೆ ತಿಳಿದುಕೊಳ್ಳುವುದು ಸುಲಭದ ಕೆಲಸವಲ್ಲ. ಕೆಲವೊಮ್ಮೆ ತೀರಾ ವಿರಳವಾದ ವಿಷಯಗಳ ಬಗ್ಗೆ ನಮಗೆ ಅರಿವು ಹೆಚ್ಚಾಗಿ ಇರುವುದಿಲ್ಲ, ಅಂತಹ ಕೆಲ ಸಂಗತಿಗಳ ಬಗ್ಗೆ ನಾವಿಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಇದನ್ನೂ ಓದಿ: ಕೊನೆಗೂ ಅಭಿಮಾನಿಗಳ ಆಸೆ ಪೂರೈಸಿದ ಅಡೀಡಸ್! ಟೀಂ ಇಂಡಿಯಾ ವಿಶ್ವಕಪ್ ಜೆರ್ಸಿಯಲ್ಲಿ ಈ ಬದಲಾವಣೆ

ಪ್ರಶ್ನೆ 1 - ದೇಹದ ಯಾವ ಭಾಗವು ಯಾವಾಗಲೂ ಬೆಳೆಯುತ್ತಲೇ ಇರುತ್ತದೆ?

ಉತ್ತರ 1 – ಈ ಪ್ರಶ್ನೆಗೆ ಎರಡು ಉತ್ತರಗಳಿವೆ. ಒಂದು ಕಿವಿ, ಮತ್ತೊಂದು ಮೂಗು. ಕಿವಿ ಮತ್ತು ಮೂಗಿನ ಆಕಾರವು ವಯಸ್ಸಿನೊಂದಿಗೆ ಬದಲಾಗುತ್ತಲೇ ಇರುತ್ತದೆ.

ಪ್ರಶ್ನೆ 2 - ಮಾನವ ದೇಹದ ಯಾವ ಭಾಗವು ದುರ್ಬಲವಾಗಿದೆ?

ಉತ್ತರ 2 - ಮೆದುಳು ನಮ್ಮ ದೇಹದ ಅತ್ಯಂತ ದುರ್ಬಲ ಮತ್ತು ಪ್ರಮುಖ ಭಾಗವಾಗಿದೆ.

ಪ್ರಶ್ನೆ 3 - ಬೆಳವಣಿಗೆಯನ್ನು ನಿಲ್ಲಿಸುವ ದೇಹದ ಕೊನೆಯ ಭಾಗ ಯಾವುದು?

ಉತ್ತರ 3 – ಮಾನವನ ದೇಹದ ಬೆಳವಣಿಗೆಯ ಕೊನೆಯ ಭಾಗ ಬೆನ್ನುಮೂಳೆಯಾಗಿದೆ.

ಪ್ರಶ್ನೆ 4 - ಸಾವಿನ ನಂತರ ಚಿನ್ನವನ್ನು ಏಕೆ ಬಾಯಿಯಲ್ಲಿ ಇಡಲಾಗುತ್ತದೆ?

ಉತ್ತರ 4 - ತುಳಸಿ ಮತ್ತು ಗಂಗಾಜಲದ ಜೊತೆಗೆ, ಕೆಲವು ಸ್ಥಳಗಳಲ್ಲಿ ಚಿನ್ನದ ತುಂಡನ್ನು ಸಹ ವ್ಯಕ್ತಿಯ ಮರಣದ ಸಮಯದಲ್ಲಿ ಬಾಯಿಯಲ್ಲಿ ಇಡಲಾಗುತ್ತದೆ. ಈ ರೀತಿ ಮಾಡುವುದರಿಂದ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ ಎಂಬುದು ನಂಬಿಕೆ.

ಪ್ರಶ್ನೆ 5 - ಜನನದ ನಂತರ ಹುಟ್ಟುವ, ಸಾವಿನ ಮೊದಲು ನಶಿಸುವ ಮಾನವನ ದೇಹದ ಈ ಅಂಗ ಯಾವುದು?

ಉತ್ತರ 5 - ಹಲ್ಲುಗಳು ಜನನದ ನಂತರ ಹುಟ್ಟುವ, ಸಾವಿನ ಮೊದಲು ನಶಿಸುವ ಮಾನವನ ದೇಹದ ಭಾಗವಾಗಿದೆ

ಇದನ್ನೂ ಓದಿ: ಮುಸ್ಲಿಂ ಯುವಕನ ಮೇಲೆ ದೈವದ ಆವಾಹನೆ! 18 ವರ್ಷಗಳ ಬಳಿಕ ನಡೆದ ದೈವಿಕ ಪವಾಡ

ಪ್ರಶ್ನೆ 6 - ಪ್ರಪಂಚದಲ್ಲಿ ಅತಿ ಹೆಚ್ಚು ಚಂಡಮಾರುತಗಳನ್ನು ಎದುರಿಸಿದ ದೇಶ ಯಾವುದು?

ಉತ್ತರ 6 – ಅಮೆರಿಕ ಪ್ರಪಂಚದಲ್ಲಿಯೇ ಅತಿ ಹೆಚ್ಚು ಚಂಡಮಾರುತಗಳನ್ನು ಎದುರಿಸಿದ ದೇಶವಾಗಿದೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News