Vaccination: 12 ರಿಂದ 14 ವರ್ಷದ ಮಕ್ಕಳಿಗೆ ಯಾವಾಗ ಸಿಗಲಿದೆ ಲಸಿಕೆ? ಸರ್ಕಾರದ ನಿರ್ಧಾರ ಏನು ಗೊತ್ತಾ

Vaccination: ಭಾರತದಲ್ಲಿ ಕರೋನಾ ವೈರಸ್  (Coronavirus)  ವಿರುದ್ಧ ಲಸಿಕೆ ಅಭಿಯಾನವು  (Vaccination) ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಈ ನಡುವೆ 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ದೊಡ್ಡ ಸುದ್ದಿ ಬಂದಿದೆ. 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕೃತ ಮೂಲಗಳು ಬಹಿರಂಗಪಡಿಸಿವೆ.

Written by - Yashaswini V | Last Updated : Jan 18, 2022, 10:30 AM IST
  • ಜನವರಿ 3 ರಂದು 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಲಾಗಿದೆ
  • ಭಾರತದಲ್ಲಿ 158 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ
  • ಕಳೆದ 24 ಗಂಟೆಗಳಲ್ಲಿ 80 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ
Vaccination: 12 ರಿಂದ 14 ವರ್ಷದ ಮಕ್ಕಳಿಗೆ ಯಾವಾಗ ಸಿಗಲಿದೆ ಲಸಿಕೆ? ಸರ್ಕಾರದ ನಿರ್ಧಾರ ಏನು ಗೊತ್ತಾ title=
Vaccination For Children

Vaccination: ಭಾರತದಲ್ಲಿ ಕೊರೊನಾವೈರಸ್ ವಿರುದ್ಧ ಲಸಿಕೆ ಅಭಿಯಾನವು ತ್ವರಿತಗತಿಯಲ್ಲಿ ನಡೆಯುತ್ತಿದೆ. ಈ ನಡುವೆ 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ದೊಡ್ಡ ಸುದ್ದಿ ಬಂದಿದೆ. 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕೃತ ಮೂಲಗಳು ಬಹಿರಂಗಪಡಿಸಿವೆ.

ವದಂತಿಯನ್ನು ನಿರಾಕರಿಸಿದ ಸರ್ಕಾರ :
ವಾಸ್ತವವಾಗಿ, 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು (Corona Vaccine For Kids) ಮಾರ್ಚ್ ತಿಂಗಳಿನಿಂದ ಪ್ರಾರಂಭಿಸಬಹುದು ಎಂದು ಹೇಳಲಾದ ಸುದ್ದಿಯನ್ನು ಸರ್ಕಾರ ನಿರಾಕರಿಸಿದೆ. ಇದರಿಂದಾಗಿ, 12 ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ಡೋಸ್ ನೀಡುವ ವಿಚಾರದಲ್ಲಿ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.

ಇದನ್ನೂ ಓದಿ- ಋತುಚಕ್ರದ ಮೇಲೆ ಪರಿಣಾಮ ಬೀರುತ್ತಾ ಕೋವಿಡ್-19 ಲಸಿಕೆ? ಹೀಗೆನ್ನುತ್ತೆ ಅಧ್ಯಯನ

ದೇಶದಲ್ಲಿ 3.5 ಕೋಟಿಗೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಲಾಗಿದೆ:
ಭಾರತದಲ್ಲಿ, ಜನವರಿ 3 ರಂದು, 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ಪ್ರಾರಂಭಿಸಲಾಯಿತು. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಇದುವರೆಗೆ 15 ರಿಂದ 18 ವರ್ಷ ವಯಸ್ಸಿನ 3.5 ಕೋಟಿಗೂ ಹೆಚ್ಚು ಮಕ್ಕಳಿಗೆ ಕರೋನಾ ಲಸಿಕೆಯನ್ನು ಮೊದಲ ಡೋಸ್ ನೀಡಲಾಗಿದೆ. 

ಇದನ್ನೂ ಓದಿ- UAE: ಈ ದೇಶದಲ್ಲಿಲ್ಲ ಓಮಿಕ್ರಾನ್‌ನ ಟೆನ್ಷನ್!

ದೇಶದಲ್ಲಿ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದೆ:
ಇದಲ್ಲದೆ, ಇದುವರೆಗೆ ಭಾರತದಲ್ಲಿ 158.04 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ (Corona Vaccine) ಡೋಸ್ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಸುಮಾರು 80 ಲಕ್ಷ ಜನರಿಗೆ ಲಸಿಕೆ ಡೋಸ್ ನೀಡಲಾಗಿದೆ.

ಮತ್ತೊಂದೆಡೆ, ಕರೋನವೈರಸ್ ಪ್ರಕರಣಗಳ ಬಗ್ಗೆ ಹೇಳುವುದಾದರೆ, ಕಳೆದ 24 ಗಂಟೆಗಳಲ್ಲಿ, ದೇಶಾದ್ಯಂತ 2 ಲಕ್ಷ 38 ಸಾವಿರದ 18 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು ಈ ವೈರಸ್‌ನಿಂದ 310 ಜನರು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ, 1 ಲಕ್ಷದ 57 ಸಾವಿರದ 421 ಜನರು ಚೇತರಿಸಿಕೊಂಡಿದ್ದಾರೆ. ಪ್ರಸ್ತುತ, ದೇಶದಲ್ಲಿ ಕರೋನಾ ಸಕ್ರಿಯ ಪ್ರಕರಣಗಳ ಸಂಖ್ಯೆ 17 ಲಕ್ಷ 36 ಸಾವಿರ 628 ಆಗಿದೆ. ಅದೇ ಸಮಯದಲ್ಲಿ, ದೈನಂದಿನ ಸಕಾರಾತ್ಮಕತೆಯ ದರವು ಶೇಕಡಾ 14.43 ಕ್ಕೆ ಏರಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News