WhatsApp ಅನ್ನು Facebook Messenger ನಲ್ಲಿ ಏಕೀಕರಣಗೊಳಿಸಲು ಮುಂದಾದ Facebook

Facebook ಕೈಗೊಳ್ಳಲಿರುವ ಈ ನಿರ್ಣಯದಿಂದ WhatsApp ಬಳಕೆದಾರರಿಗೆ ಹಾನಿ ಉಂಟಾಗುವ ಸಾಧ್ಯತೆ ಇದೆ.

Last Updated : Jul 12, 2020, 11:27 AM IST
WhatsApp ಅನ್ನು Facebook Messenger ನಲ್ಲಿ ಏಕೀಕರಣಗೊಳಿಸಲು ಮುಂದಾದ Facebook title=

ನವದೆಹಲಿ: ಫೇಸ್‌ಬುಕ್ ಶೀಘ್ರದಲ್ಲೇ ತನ್ನ ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ ವಾಟ್ಸಾಪ್ ಅನ್ನು ಸಂಯೋಜಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ, ವಾಟ್ಸಾಪ್ ಬಳಸುವ ಬಳಕೆದಾರರಿಗೆ ಸಾಕಷ್ಟು ಹಾನಿ ಉಂಟಾಗುವ ಸಾಧ್ಯತೆ ಇದೆ. ಏಕೆಂದರೆ ಇದರಿಂದ, ನೀವು ವಾಟ್ಸಾಪ್ ಅಥವಾ ಮೆಸೆಂಜರ್‌ನಲ್ಲಿ ಮಾಡಿದ ಚಾಟ್‌ಗಳನ್ನು ಫೇಸ್‌ಬುಕ್ ಒಡೆತನದ ಎಲ್ಲಾ ಅಪ್ಲಿಕೇಶನ್‌ಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ವಿಶ್ವದ ಸಾಮಾಜಿಕ ಮಾಧ್ಯಮಗಳ ದೈತ್ಯ ಕಂಪನಿ ಫೇಸ್‌ಬುಕ್ ತನ್ನ ಎರಡು ಜನಪ್ರಿಯ ಆನ್‌ಲೈನ್ ಚಾಟ್ ಅಪ್ಲಿಕೇಶನ್‌ಗಳ ನಡುವೆ ಸಂವಹನವನ್ನು ಸಕ್ರಿಯಗೊಳಿಸಲು ಯೋಜನೆ ರೂಪಿಸುತ್ತಿದೆ ಎಂದು ವಾಟ್ಸಾಪ್ ವೈಶಿಷ್ಟ್ಯಗಳ ಟ್ರ್ಯಾಕ್ ಮಾಡುವ WABetaInfo ವರದಿ ಮಾಡಿದೆ. ಈ ಸುದ್ದಿ ಒಂದು ವೇಳೆ ನಿಜ ಎಂದು ಸಾಬೀತಾದರೆ, ಶೀಘ್ರದಲ್ಲೇ ಹೊಸ ವಿಶಿಷ್ಟ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಂತೆಯೇ, ಫೇಸ್‌ಬುಕ್ ಮೆಸೆಂಜರ್ ಮೂಲಕ ವಾಟ್ಸಾಪ್‌ನಲ್ಲಿ ಚಾಟ್ ಮಾಡಬಹುದು. ಆದಾಗ್ಯೂ, ಡೇಟಾ ಎನ್‌ಕ್ರಿಪ್ಶನ್ ಮತ್ತು ಬಳಕೆದಾರರ ಸುರಕ್ಷತೆಗೆ ಧಕ್ಕೆಯಾಗದಂತೆ ಫೇಸ್‌ಬುಕ್ ಈ ಏಕೀಕರಣ ಯೋಜನೆ ಹೇಗೆ ಪೂರ್ಣಗೊಳಿಸಲಿದೆ ಎಂಬುದರ ಮೇಲೆ ಇದೀಗ ಎಲ್ಲರ ಕೇಂದ್ರೀಕರಿಸಿದೆ.

ಹೇಗೆ ನಡೆಯಲಿದೆ ಈ ಸಂಯೋಜನೆ
ಮೊದಲು ಫೇಸ್ಬುಕ್ ವಾಟ್ಸ್ ಆಪ್ ನ ಕೋಡ್ ರೆಫೆರೆನ್ಸ್ ಬಳಸಿ ವಾಟ್ಸ್ ಆಪ್ ನಲ್ಲಿ ಯಾವುದಾದರು ಕಾಂಟ್ಯಾಕ್ಟ್ ಬ್ಲಾಕ್ ಇದೆಯಾ ಎಂಬುದನ್ನು ಪರಿಶೀಲಿಸಲಿದೆ. ಇದಲ್ಲದೆ. ಪುಶ್ ನೋಟಿಫಿಕೇಶನ್ ಗೆ ಬಳಕೆಯಾಗುವ ಸೌಂಡ್ ಹಾಗೂ ಯಾವುದೇ ಚಾಟ್ ನ ಸಂಪೂರ್ಣ ಡಿಟೇಲ್ಸ್ ಕೂಡ ಪತ್ತೆಹಚ್ಚಬಹುದು. ಕೋಡ್ ಮೂಲಕ ಈ ಏಕೀಕರಣ ಪ್ರಕ್ರಿಯೆಯ ಮೂಲಕ ಯಾವುದೇ ಕಾಂಟಾಕ್ಟ್ ನ ಫೋನ್ ನಂಬರ್, ಮೆಸ್ಸೇಜ್ ಕೌಂಟರ್, ಆರ್ಕೈವ್ ಚಾಟ್ ನಂತಹ ಮಾಹಿತಿ ಕೂಡ ಸಿಗುವ ಸಾಧ್ಯತೆ ಇದೆ. ಫೇಸ್ ಬುಕ್ ಮೆಸೆಂಜರ್ ಆಯ್ದ ಕೆಲ ವಾಟ್ಸ್ ಆಪ್ ಗ್ರೂಪ್ ಗಳ ಸದಸ್ಯರು ಹಾಗೂ ಕಾಂಟಾಕ್ಟ್ ಗಳ ಪ್ರೊಫೈಲ್ ಪಿಕ್ಚರ್ ಕೂಡ ನೋಡಬಹುದು.

ಸಂದೇಶಗಳನ್ನು ಎನ್‌ಕ್ರಿಪ್ಟ್ ಮಾಡಲು ಮತ್ತು ಡೀಕ್ರಿಪ್ಟ್ ಮಾಡಲು ಫೇಸ್‌ಬುಕ್ ಈಗಾಗಲೇ ವಾಟ್ಸಾಪ್ ಬಳಸುವ ಸಿಗ್ನಲ್ ಪ್ರೋಟೋಕಾಲ್‌ಗಳನ್ನು ಕಳುಹಿಸಬಹುದು ಎಂದು WABetaInfo ಅಂದಾಜು ವ್ಯಕ್ತಪಡಿಸಿದೆ. ಈ ವೈಶಿಷ್ಟ್ಯದೊಂದಿಗೆ ಡಿಸೇಬಲ್ ಆಯ್ಕೆ ಇರಲಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ವೈಶಿಷ್ಟ್ಯದ ಸಂಕೀರ್ಣತೆಯಿಂದಾಗಿ, ಮುಂಬರುವ ಸಮಯದಲ್ಲಿ ಫೇಸ್‌ಬುಕ್ ಈ ವೈಶಿಷ್ಟ್ಯವನ್ನು ಸಂಪೂರ್ಣವಾಗಿ ನಿಲ್ಲಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Facebook, WhatsAppನ ಸಂದೇಶಗಳನ್ನು ಸಂಗ್ರಹಿಸುತ್ತಿಲ್ಲ. ಆದರೆ, ಲೋಕಲ್ ಡೇಟಾಬೇಸ್ ಕೋಡ್ ಗಳು ಇದರ ಮೇಲೆ ಕಾರ್ಯನಿರ್ವಹಿಸುತ್ತಿವೆ ಎಂದು ಟ್ರ್ಯಾಕರ್ ವರದಿ ಮಾಡಿದೆ. WABetaInfo ವ್ಯಕ್ತಪಡಿಸಿರುವ ಅಂದಾಜಿನ ಪ್ರಕಾರ ಫೇಸ್ಬುಕ್ ಸಿಂಗಲ್ ಪ್ರೋಟೋಕಾಲ್ ಟು ಎನ್ಕ್ರಿಪ್ಟ್ ಅಂಡ್ ಡಿಕ್ರಿಪ್ಟ್ ಮೆಸೇಜ್ ಅನ್ನುಅಳವಡಿಸಿಕೊಳ್ಳುವ ಸಾದ್ಯತೆ ಇದ್ದು, ಇದನ್ನು ವಾಟ್ಸ್ ಆಪ್ ಈಗಾಗಲೇ ಬಳಸುತ್ತಿದೆ. ಆದರೆ ಇದರಲ್ಲಿ ಡಿಸೇಬಲ್ ಆಪ್ಶನ್ ಇರಲಿದೆಯೋ ಅಥವಾ ಇಲ್ಲ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ. ತುಂಬಾ ಕ್ಲಿಷ್ಟಕರ ವೈಶಿಷ್ಟ್ಯವಾಗಿರುವ ಕಾರಣ ಫೇಸ್ ಬುಕ್ ಈ ವೈಶಿಷ್ಟ್ಯದ ಜೊತೆಗೆ ಮುಂಬರುವ ದಿನಗಳಲ್ಲಿ ಡಿಸೇಬಲ್ ಆಪ್ಶನ್ ವಿಕಲ್ಪ ಕೂಡ ನೀಡುವ ಸಾಧ್ಯತೆ ಇದೆ.

Trending News