ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಬೀಳಲಿದೆ 1000 ರೂ. ದಂಡ

ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಮಾಡುವವರಿಗೆ ಹಾಕುವ ದಂಡವನ್ನು ಹೆಚ್ಚಿಸಲು ರೈಲ್ವೆ ಇಲಾಖೆ ಯೋಜಿಸಿದೆ.

Last Updated : Jun 29, 2018, 03:39 PM IST
ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಬೀಳಲಿದೆ 1000 ರೂ. ದಂಡ title=

ನವದೆಹಲಿ:  ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಮಾಡುವವರಿಗೆ ಹಾಕುವ ದಂಡವನ್ನು ಹೆಚ್ಚಿಸಲು ರೈಲ್ವೆ ಇಲಾಖೆ ಯೋಜಿಸಿದೆ. ಹೌದು, ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ 1,000 ರೂಪಾಯಿವರೆಗೆ ದಂಡವಿಧಿಸಲು ಯೋಜಿಸಲಾಗುತ್ತಿದೆ. ವಾಸ್ತವವಾಗಿ, ಪಶ್ಚಿಮ ರೈಲ್ವೇ(westren railway) ಪ್ರಯಾಣಿಕರಿಂದ ನಾಲ್ಕು ಪಟ್ಟು ದಂಡವನ್ನು ಸಂಗ್ರಹಿಸುವ ವಿಷಯ ಪ್ರಸ್ತಾಪಿಸಿದೆ.

ಪ್ರಸ್ತುತ ಟಿಕೆಟ್ ಇಲ್ಲದೆ ಪ್ರಯಾಣಿಸುವವರಿಗೆ 250 ರೂ. ದಂಡ ವಿಧಿಸಲಾಗುತ್ತಿದ್ದು, ಅದನ್ನು 1,000 ಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಪಶ್ಚಿಮ ರೈಲ್ವೆಯು ರೈಲ್ವೇ ಬೋರ್ಡ್ಗೆ ದೆಹಲಿಗೆ ಈ ಪ್ರಸ್ತಾಪವನ್ನು ಕಳುಹಿಸಿದೆ. ಕಳೆದ ವಾರ ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವಿನಿ ಲೋಹಾನಿ ಮುಂಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪ್ರಸ್ತಾಪವನ್ನು ನೀಡಲಾಯಿತು. ಈ ಪ್ರಸ್ತಾಪದ ಬಗ್ಗೆ ಚರ್ಚಿಸುವುದಾಗಿ ರೈಲ್ವೆ ಇಲಾಖೆ ಆಶ್ವಾಸನೆ ನೀಡಿದೆ.

ಮಾಹಿತಿ ಪ್ರಕಾರ ಪಾಶ್ಚಿಮಾತ್ಯ ರೈಲ್ವೆಯಲ್ಲಿ ಏಪ್ರಿಲ್ನಲ್ಲಿ ಟಿಕೆಟ್ ಇಲ್ಲದೆ 3.94 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇದರಲ್ಲಿ ಬುಕಿಂಗ್ ಇಲ್ಲದೆಯೇ ಸಾಮಾನು ಸಾಗಿಸುತ್ತಿದ್ದ ಪ್ರಯಾಣಿಕರೂ ಸೇರಿದ್ದಾರೆ. ಈ ಪ್ರಯಾಣಿಕರಿಗೆ ರೈಲ್ವೇ 15 ಸಾವಿರ ರೂ. ಪೆನಾಲ್ಟಿ ವಿಧಿಸಿದೆ. ಇದು ಏಪ್ರಿಲ್ 2017 ರಲ್ಲಿ ವಿಧಿಸಲಾದ ದಂಡಕ್ಕಿಂತ 26 ಪ್ರತಿಶತ ಹೆಚ್ಚಾಗಿದೆ. ಪೆನಾಲ್ಟಿ ಮೊತ್ತದ ಹೆಚ್ಚಳವು ಟಿಕೆಟ್ ರಹಿತ ಪ್ರಯಾಣಿಸುವವರ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ ಎಂದು ರೈಲ್ವೆ ನಿರೀಕ್ಷಿಸುತ್ತದೆ.

ಟಿಕೆಟ್ ರಹಿತ ಪ್ರಯಾಣಿಸುವವರಿಗೆ 250ರೂ. ದಂಡ ವಿಧಿಸುವ ಮೊದಲು 50 ರೂ. ದಂಡ ವಿಧಿಸಲಾಗುತ್ತಿತ್ತು. 2002ರಲ್ಲಿ ದಂಡವನ್ನು 50 ರೂ. ಯಿಂದ 250ರೂ.ಗೆ ಹೆಚ್ಚಿಸಲಾಯಿತು. 

Trending News