ಪ್ರಕಾಶ್ ರೈ ರಂತಹ ವ್ಯಕ್ತಿಗಳು ಸಂಸತ್ತಿಗೆ ಅಗತ್ಯವಿದೆ- ಅರವಿಂದ್ ಕೇಜ್ರಿವಾಲ್

ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊಸದಾಗಿ ರಾಜಕೀಯಕ್ಕೆ ಪ್ರವೇಶಿಸಿರುವ ನಟ ಪ್ರಕಾಶ್ ರೈ ರನ್ನು ಭೇಟಿ ಮಾಡಿ ಹಲವಾರು ವಿಷಯಗಳ ಕುರಿತಾಗಿ ಚರ್ಚೆ ನಡೆಸಿದರು.

Last Updated : Jan 10, 2019, 09:21 PM IST
ಪ್ರಕಾಶ್ ರೈ ರಂತಹ ವ್ಯಕ್ತಿಗಳು ಸಂಸತ್ತಿಗೆ ಅಗತ್ಯವಿದೆ- ಅರವಿಂದ್ ಕೇಜ್ರಿವಾಲ್ title=
Photo courtesy: Twitter

ನವದೆಹಲಿ: ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊಸದಾಗಿ ರಾಜಕೀಯಕ್ಕೆ ಪ್ರವೇಶಿಸಿರುವ ನಟ ಪ್ರಕಾಶ್ ರೈ ರನ್ನು ಭೇಟಿ ಮಾಡಿ ಹಲವಾರು ವಿಷಯಗಳ ಕುರಿತಾಗಿ ಚರ್ಚೆ ನಡೆಸಿದರು.

ಈ ಭೇಟಿಯ ಬಳಿಕ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್ " ನಮಗೆ ಸಂಸತ್ತಿನಲ್ಲಿ ಪ್ರಕಾಶ್ ರೈ ರಂತಹ ವ್ಯಕ್ತಿಗಳ ಅವಶ್ಯವಿದೆ. ಪ್ರಕಾಶ್ ಜಿ ಇವತ್ತು ನಿಮ್ಮ ಜೊತೆ ಮೀಟಿಂಗ್ ನಡೆಸಿದ್ದು ಉತ್ತಮವಾಗಿತ್ತು, ನೀವು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಸಂಸತ್ತಿನಲ್ಲಿ ಸ್ವತಂತ್ರ ಹಾಗೂ ಪಕ್ಷಾತೀತ ಧ್ವನಿಗಳ ಅವಶ್ಯಕತೆ ಇದೆ" ಎಂದು ಟ್ವೀಟ್ ಮಾಡಿದ್ದಾರೆ.

ಕಳೆದ ಒಂದು ವಾರದ ಹಿಂದಷ್ಟೇ ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಪ್ರಕಾಶ್ ರೈ ಪ್ರಸ್ತಾಪಿಸಿದ್ದರು. ಈ ನಿರ್ಧಾರಕ್ಕೆ ಆಮ್ ಆದ್ಮಿ ಪಕ್ಷವು ಕೂಡ ಬೆಂಬಲ ನೀಡಿತ್ತು. ಇನ್ನೊಂದೆಡೆ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಕೂಡ ಪ್ರಕಾಶ್ ರೈ ಅವರ ರಾಜಕೀಯ ಪ್ರವೇಶದ ನಿರ್ಧಾರವನ್ನು ಸ್ವಾಗತಿಸಿದ್ದರು.

ಈಗ ದಕ್ಷಿಣ ಭಾರತದಲ್ಲಿ ಇತ್ತೀಚಿಗಷ್ಟೇ ರಾಜಕೀಯ ಪ್ರವೇಶಿಸಿದ ರಜನಿಕಾಂತ್, ಕಮಲ್ ಹಾಸನ್ ಅವರ ಸಾಲಿಗೆ ಹೊಸ ಸೇರ್ಪಡೆಯಾಗಿ ಈಗ ಪ್ರಕಾಶ್ ರೈ ಸೇರಿದ್ದಾರೆ. ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ನಂತರ ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ರಾಜಕೀಯ ವಿಚಾರಗಳಿಗೆ ತೆರೆದುಕೊಂಡ ರೈ ಈಗ ಅಧಿಕೃತವಾಗಿ ಚುನಾವಣೆಗೆ ನಿಲ್ಲುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ.

Trending News