ಪೆಟ್ರೋಲ್ ದರವನ್ನು ಟ್ವೀಟ್ ಮೂಲಕ ಪರಿಹರಿಸಲು ಸಾಧ್ಯವಿಲ್ಲ-ಅರುಣ್ ಜೈಟ್ಲಿ

ಪೆಟ್ರೋಲ್ ದರ ಏರಿಕೆ ಲೆಕ್ಕಾಚಾರದಲ್ಲಿ ತೊಡಗಿರುವ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಅರುಣ್ ಜೈಟ್ಲಿ ತೈಲ ದರವನ್ನು  ಟ್ವೀಟ್ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು ಅವರು ವ್ಯಂಗವಾಡಿದ್ದಾರೆ.

Last Updated : Oct 6, 2018, 04:30 PM IST
ಪೆಟ್ರೋಲ್ ದರವನ್ನು ಟ್ವೀಟ್ ಮೂಲಕ ಪರಿಹರಿಸಲು ಸಾಧ್ಯವಿಲ್ಲ-ಅರುಣ್ ಜೈಟ್ಲಿ  title=

ನವದೆಹಲಿ: ಪೆಟ್ರೋಲ್ ದರ ಏರಿಕೆ ಲೆಕ್ಕಾಚಾರದಲ್ಲಿ ತೊಡಗಿರುವ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಅರುಣ್ ಜೈಟ್ಲಿ ತೈಲ ದರವನ್ನು  ಟ್ವೀಟ್ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು ಅವರು ವ್ಯಂಗವಾಡಿದ್ದಾರೆ.

ಕೇಂದ್ರ ಹಣಕಾಸು ಸಚಿವ  ಅರುಣ್ ಜೈಟ್ಲಿ  ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸುದೀರ್ಘ ಪೋಸ್ಟ್ ನಲ್ಲಿ ಪ್ರತಿಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ."ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಯ ಹೆಚ್ಚಳದ ವಿಚಾರವಾಗಿ ಎತ್ತಿರುವ ಸವಾಲುಗಳನ್ನು ಕೆಲವು ವಿರೋಧ ನಾಯಕರ ಟ್ವೀಟ್ಗಳು ಅಥವಾ ದೂರದರ್ಶನ ಬೈಟ್ಗಳಿಂದ ಪರಿಹರಿಸಲಾಗುವುದಿಲ್ಲ, ಈ ಸಮಸ್ಯೆ ತುಂಬಾ ಗಂಭೀರವಾಗಿದೆ" ಎಂದು ಜೇಟ್ಲಿ ಹೇಳಿದ್ದಾರೆ. 

ಗುರುವಾರ ಕೇಂದ್ರವು ರೂ 1.50 ತೆರಿಗೆಯನ್ನು ಕಡಿತಗೊಳಿಸಿದೆ ಮತ್ತು ತೈಲ ಮಾರ್ಕೆಟಿಂಗ್ ಕಂಪನಿಗಳು 1 ರೂ ಕಡಿಮೆ ಮಾಡಿವೆ. ಅಲ್ಲದೆ  ತೈಲ ಮತ್ತು ಇಂಧನಗಳ ಮೇಲೆ ಇರುವ ವ್ಯಾಟ್  ತೆರಿಗೆಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರವು  ರಾಜ್ಯಗಳನ್ನು ಕೇಳಿಕೊಂಡಿದೆ ಅದರನ್ವಯ ಹಲವು ರಾಜ್ಯಗಳು ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಿವೆ.

ಗುರುವಾರದಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಬಗ್ಗೆ ಪ್ರಸ್ತಾಪಿಸುತ್ತಾ ರೂಪಾಯಿ ಅದು ಮುರಿಯುತ್ತಿಲ್ಲ ಬದಲಾಗಿ ಈಗಾಗಲೇ ಮುರಿದುಹೋಗಿದೆ ಎಂದು ಅವರು ವ್ಯಂಗವಾಡಿದ್ದರು.

Trending News