ಡಿಎಂಕೆ ನಮ್ಮ ಜೊತೆ ಮಾತುಕತೆ ನಡೆಸಿದೆ-ತಮಿಳುನಾಡು ಬಿಜೆಪಿ ಅಧ್ಯಕ್ಷೆ

ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಕಾಂಗ್ರೆಸೇತರ ಅಥವಾ ಬಿಜೆಪಿಯೇತರ ಸರ್ಕಾರ ಸಾಧ್ಯವಿಲ್ಲವೆಂದು ಹೇಳಿದ ಬೆನ್ನಲ್ಲೇ ಈಗ ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಲ್ಸೈ ಸುಂದರ್ ರಾಜನ್  ಡಿಎಂಕೆ ನಮ್ಮ ಜೊತೆ ಮಾತುಕತೆ ನಡೆಸಿದೆ ಎಂದು ಹೇಳಿದ್ದಾರೆ.

Last Updated : May 14, 2019, 05:25 PM IST
ಡಿಎಂಕೆ ನಮ್ಮ ಜೊತೆ ಮಾತುಕತೆ ನಡೆಸಿದೆ-ತಮಿಳುನಾಡು ಬಿಜೆಪಿ ಅಧ್ಯಕ್ಷೆ title=
photo:ANI

ನವದೆಹಲಿ: ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಕಾಂಗ್ರೆಸೇತರ ಅಥವಾ ಬಿಜೆಪಿಯೇತರ ಸರ್ಕಾರ ಸಾಧ್ಯವಿಲ್ಲವೆಂದು ಹೇಳಿದ ಬೆನ್ನಲ್ಲೇ ಈಗ ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಲ್ಸೈ ಸುಂದರ್ ರಾಜನ್  ಡಿಎಂಕೆ ನಮ್ಮ ಜೊತೆ ಮಾತುಕತೆ ನಡೆಸಿದೆ ಎಂದು ಹೇಳಿದ್ದಾರೆ.

ಅವರು ನಮ್ಮ ಜೊತೆ ಸಂಪರ್ಕಿಸುತ್ತಿದ್ದಾರೆ, ಬಿಜೆಪಿ ಈಗ ಗೆಲುವು ಸಾಧಿಸಲು ಸನ್ನದ್ದವಾಗಿದೆ.ಎಲ್ಲ ಚುನಾವಣಾ ನಿರೀಕ್ಷೆಗಳು ಬಿಜೆಪಿ ಗೆಲುವಿನ ಬಗ್ಗೆ ಹೇಳುತ್ತೇವೆ ಎಲ್ಲೇ ಹೋದರು ಕೂಡ ಬಿಜೆಪಿ ಗೆಲ್ಲುತ್ತಿದೆ ಎಂದು  ಹೇಳಿದರು. ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಅವರನ್ನು ತೃತೀಯ ರಂಗದ ರಚನೆ ಸಾಧ್ಯತೆ ವಿಚಾರವಾಗಿ ಭೇಟಿ ಮಾಡಿದ್ದ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಬೇಡಿಕೆಯನ್ನು ಸ್ಟಾಲಿನ್ ಸಾರಾಸಾಗಾಟಾಗಿ ತಳ್ಳಿ ಹಾಕಿದ್ದರು.

ಈಗಾಗಲೇ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಡಿಎಂಕೆ ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ.ಈ  ಹಿನ್ನಲೆಯಲ್ಲಿ ಸ್ಟಾಲಿನ್ ಬಿಜೆಪಿ ಅಥವಾ ಕಾಂಗ್ರೆಸೇತರ ಸರ್ಕಾರ ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರು.

ಈ ಬೆನ್ನಲ್ಲೇ ಈಗ ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಲ್ಸೈ ಸುಂದರ್ ರಾಜನ್ ಡಿಎಂಕೆ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಹೇಳಿರುವುದು ಈಗ ಅಚ್ಚರಿ ಮೂಡಿಸಿದೆ.

Trending News