Viral Video: ಮದುವೆಯ ದಿನ ಇದ್ದಕ್ಕಿದ್ದಂತೆ ಪುಶ್-ಅಪ್ ಹೊಡೆಯಲು ಆರಂಭಿಸಿದ ವಧು, ವೀಡಿಯೊ ವೈರಲ್

Viral Video - ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮದುವೆಯ ವಿಡಿಯೋಗಳು ಸಕತ್ ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ವಧು ಅಥವಾ ವರ ಯಾವುದೋ ಒಂದು ಕರಾಮತ್ತು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುತ್ತಾರೆ. 

Written by - Nitin Tabib | Last Updated : Aug 3, 2021, 12:50 PM IST
  • ಮದುವೆಯ ದಿನ ಲೆಹಂಗಾ ತೊಟ್ಟ ವಧುವಿನ ವಿಡಿಯೋ ವೈರಲ್
  • ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡ ವ್ಯಕ್ತಿ.
  • ವೀಡಿಯೊ ವಿಕ್ಷೀಸಲು ಮರೆಯಬೇಡಿ.
Viral Video: ಮದುವೆಯ ದಿನ  ಇದ್ದಕ್ಕಿದ್ದಂತೆ ಪುಶ್-ಅಪ್ ಹೊಡೆಯಲು ಆರಂಭಿಸಿದ ವಧು, ವೀಡಿಯೊ ವೈರಲ್  title=
Bride PushUp Viral Video (File Photo)

Viral Video - ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಮದುವೆಯ ವಿಡಿಯೋಗಳು ಸಕತ್ ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ವಧು ಅಥವಾ ವರ ಯಾವುದೋ ಒಂದು ಕರಾಮತ್ತು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುತ್ತಾರೆ. ಇಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ವಧು ಮದುವೆಯ ದಿನ ಪುಶ್ ಅಪ್ ಹೊಡೆಯುತ್ತಿರುವುದು ಕಂಡುಬರುತ್ತಿದೆ.

ತನ್ನ ಇನ್ಸ್ಟಾಗ್ರಾಮ್ (Instagram Viral Video) ಖಾತೆಯಲ್ಲಿ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮದುವೆಯಾಗಲು ಹೊರಟಿರುವ ಯುವತಿ ಆಕರ್ಷಕ ಲೆಹಂಗಾ ತೊಟ್ಟಿದ್ದಾಳೆ ಹಾಗೂ ಆಕೆ ಪುಶ್ - ಅಪ್ ಮಾಡುತ್ತಿದ್ದಾಳೆ.

ವಧು ಪುಶ್ಅಪ್ (Bride PushUp Video) ಮಾಡುತ್ತಿರುವುದನ್ನು ನೋಡಿದ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ, ಯುವತಿ ಧರಿಸಿರುವ ಲೆಹಂಗಾ ತುಂಬಾ ಭಾರ ಇರುವಂತಿದೆ ಮತ್ತು ಅದರಲ್ಲೂ ಕೂಡ ವ್ಯಾಯಾಮ ಮಾಡುವುದು ಕಷ್ಟಕರ. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋಗೆ (Trending Video) ಭಾರಿ ವೀಕ್ಷಣೆಗಳು ದೊರೆಯುತ್ತಿವೆ.

ಇದನ್ನೂ ಓದಿ-Tokyo Olympics 2020: ಮ್ಯಾಚ್ ಗೂ ಮುನ್ನ ಜುಡೋ ಅಥ್ಲೀಟ್ ಗೆ ಕೋಚ್ ನಿಂದ ಕಪಾಳಮೋಕ್ಷ, ಆಶ್ಚರ್ಯಕ್ಕೊಳಗಾದ ಪ್ರೇಕ್ಷಕರು

ವಿಡಿಯೋ ಅನ್ನು ಹಂಚಿಕೊಂಡವರು ಕ್ಯಾಪ್ಶನ್ ನಲ್ಲಿ ಹಲವು ಹ್ಯಾಶ್ ಟ್ಯಾಗ್ ನೀಡಿದ್ದಾರೆ. ಇದರಲ್ಲಿ ಅವರು ಲೆಹಂಗಾ, ಮೇಕಪ್, ಫೋಟೋಗ್ರಾಫಿಯವರು ಸೇರಿದಂತೆ ಇತರರಿಗೂ ಕೂಡ ಕ್ರೆಡಿಟ್ ನೀಡಿದ್ದಾರೆ.

ಇದನ್ನೂ ಓದಿ-Viral Video: ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಸಿಕ್ಕಿತು ಚಿನ್ನದಂತಹ ಸ್ವಾಗತ..!

ಶಾರೀರಿಕ ಸೌಷ್ಟ್ಯವನ್ನು ಕಾಯ್ದುಕೊಳ್ಳಲು ಜನರು ಜಿಮ್ ನಲ್ಲಿ ಎಕ್ಸರ್ಸೈಜ್ ಅಥವಾ ಪಾರ್ಕ್ ನಲ್ಲಿ ವಾಕಿಂಗ್/ರನ್ನಿಂಗ್ ನಡೆಸುತ್ತಾರೆ. ಆದರೆ, ಈ ವಧು ತನ್ನ ಸ್ವಂತ ಮದುವೆಯಲ್ಲಿ ಎಕ್ಸರ್ಸೈಜ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಲ್-ಚಲ್ (Instagram Trending Video) ಸೃಷ್ಟಿಸಿದ್ದಾಳೆ.

ಇದನ್ನೂ ಓದಿ-Viral Video:ಬಸ್ ಮೇಲ್ಛಾವಣಿ ಮೇಲೆ ಪ್ರಯಾಣಿಕರು, ಬ್ರೇಕ್ ಹಾಕಿದ ಡ್ರೈವರ್, ಮುಂದೇನಾಯ್ತು ನೀವೇ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News