Viral Video: ನಾಮಪತ್ರ ಸಲ್ಲಿಸಲು ಲೇಟಾಗಿದ್ದಕ್ಕೆ ಭರ್ಜರಿ ರನ್ನಿಂಗ್ ಮಾಡಿದ ಅಭ್ಯರ್ಥಿ..!

ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ಫೆಫ್ನಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉಪೇಂದ್ರ ತಿವಾರಿ ಸ್ಪರ್ಧಿಸುತ್ತಿದ್ದಾರೆ.

Written by - Zee Kannada News Desk | Last Updated : Feb 5, 2022, 02:33 PM IST
  • ಉತ್ತರ ಪ್ರದೇಶದ ಮೊದಲ ಹಂತದ ಮತದಾನ ಸಮೀಪಿಸುತ್ತಿದ್ದಂತೆ ಚುನಾವಣಾ ಕಣ ರಂಗೇರುತ್ತಿದೆ
  • ತಡವಾಗಿದ್ದಕ್ಕೆ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಸಚಿವ ಉಪೇಂದ್ರ ತಿವಾರಿ
  • ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫೆ.10ರಿಂದ 7 ಹಂತಗಳಲ್ಲಿ ನಡೆಯಲಿದೆ
Viral Video: ನಾಮಪತ್ರ ಸಲ್ಲಿಸಲು ಲೇಟಾಗಿದ್ದಕ್ಕೆ ಭರ್ಜರಿ ರನ್ನಿಂಗ್ ಮಾಡಿದ ಅಭ್ಯರ್ಥಿ..! title=
ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಉಪೇಂದ್ರ ತಿವಾರಿ

ಉತ್ತರಪ್ರದೇಶ: ಉತ್ತರ ಪ್ರದೇಶದ ಮೊದಲ ಹಂತದ ಮತದಾನ(UP Assembly Polls) ಸಮೀಪಿಸುತ್ತಿದ್ದಂತೆ ಚುನಾವಣಾ ಕಣ ರಂಗೇರುತ್ತಿದೆ. ಯುಪಿ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ(BJP) ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಇನ್ನಿತರ ಪಕ್ಷಗಳು ಕೂಡ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

ನಾಮಪತ್ರ ಸಲ್ಲಿಸಲು ರನ್ನಿಂಗ್ ಮಾಡಿದ ಅಭ್ಯರ್ಥಿ!

ದಿನದಿಂದ ದಿನಕ್ಕೆ ಉತ್ತರಪ್ರದೇಶ ಚುನಾವಣಾ ರಣಕಣ(UP election 2022) ರಂಗೇರುತ್ತಿದ್ದು, ಸಿಎಂ ಯೋಗಿ ಆದಿತ್ಯನಾತ್(Yogi Adityanath) ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಮಧ್ಯೆ ಉತ್ತರಪ್ರದೇಶದ ಕ್ರೀಡಾ ಸಚಿವ ಉಪೇಂದ್ರ ತಿವಾರಿ(Upendra Tiwari) ನಾಮಪತ್ರ ಸಲ್ಲಿಸಲು ತಡವಾದ ಕಾರಣ ರನ್ನಿಂಗ್ ಮಾಡಿದ್ದಾರೆ. ಇವರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಹಿಜಾಬ್ ಹೆಸರಿನಲ್ಲಿ ಭಾರತದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿಯುತ್ತಿದ್ದೇವೆ: ರಾಹುಲ್ ಗಾಂಧಿ

ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ಫೆಫ್ನಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉಪೇಂದ್ರ ತಿವಾರಿ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆ ಅವರು ಬಲ್ಲಿಯಾ ಕಲೆಕ್ಟರೇಟ್‍ನಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ(Nomination Papers) ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಲೇಟಾದ ಕಾರಣ ಅವರು ರಸ್ತೆಯಲ್ಲಿಯೇ ಭರ್ಜರಿ ರನ್ನಿಂಗ್ ಮಾಡಿದ್ದಾರೆ. ಅವರು ಓಡೋಡಿ ಬಂದು ನಾಮಪತ್ರ ಸಲ್ಲಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ. ನಾಮಪತ್ರ ಸಲ್ಲಿಸಲು ಓಡೋಡಿ ಬರುತ್ತಿದ್ದ ತಿವಾರಿ ಕೇಸರಿ ಶಾಲು ಹಾಗೂ ಹಾರವನ್ನು ಧರಿಸಿದ್ದರು. ಬಲ್ಲಿಯಾ ಕಲೆಕ್ಟರೇಟ್ ಕಚೇರಿಯ ಮುಖ್ಯ ಗೇಟ್‍ನಿಂದ ನಾಮನಿರ್ದೇಶನ ಸಭಾಂಗಣಕ್ಕೆ ಓಡುತ್ತಿರುವ ದೃಶ್ಯ ವೈರಲ್ ಆಗಿದೆ.

ಫೆಫ್ನಾ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ(UP Election Nomination) ಸಲ್ಲಿಸಲು ಫೆ.11 ಕೊನೆ ದಿನವಾಗಿದೆ.  ಆದರೆ ತಿವಾರಿ ಶುಕ್ರವಾರ(ಫೆ.4)ದ ಗಡುವಿನಲ್ಲಿ ಅಂದರೆ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ನೀಡಲು ಬಯಸಿದ್ದರು. ತಡವಾದ ಕಾರಣ ಅವರು ಓಡೋಡಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಅವರ ಜೊತೆಗೆ ರಕ್ಷಣಾ ಸಿಬ್ಬಂದಿಯೂ ಓಡೋಡಿ ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Post Office Schemes: ಈ ಅದ್ಭುತ ಯೋಜನೆಯಲ್ಲಿ 7,500 ರೂ. ಹೂಡಿಕೆ ಮಾಡಿ, ಮಿಲಿಯನೇರ್ ಆಗಿ..!

ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ನೆಟಿಜನ್ಸ್ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಟ್ರೋಲ್ ಕೂಡ ಮಾಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ(UP election 2022) ಫೆ.10ರಿಂದ 7 ಹಂತಗಳಲ್ಲಿ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News