Viral Video: ಚಲಿಸುತ್ತಿರುವ ರೈಲಿನಿಂದ ಪ್ಲಾಟ್ಫಾರ್ಮ್ ಗೆ ಬಿದ್ದ ಪ್ರಯಾಣಿಕ, ಮುಂದೇನಾಯ್ತು ನೀವೇ ನೋಡಿ

Viral Video: ಈ ರೀತಿಯ ಘಟನೆಯೊಂದು ಮುಂಬೈನಲ್ಲಿ ಬೆಳಕಿಗೆ ಬಂದಿದೆ

Written by - Nitin Tabib | Last Updated : Mar 13, 2022, 09:23 PM IST
  • ಚಲಿಸುತ್ತಿರುವ ರೈಲಿನಿಂದ ಪ್ಲಾಟ್ಫಾರ್ಮ್ ಗೆ ಬಿದ್ದ ಪ್ರಯಾಣಿಕ
  • ರೈಲು ವೇಗದಲ್ಲಿ ಚಲಿಸುತ್ತಿದ್ದ ಕಾರಣ ಪ್ರಯಾಣಿಕನ ರಕ್ಷಣೆಗೆ ಧಾವಿಸಿದ ಆರ್.ಪಿ. ಎಫ್ ಪೇದೆ
  • ಮುಂದೇನಾಯ್ತು ತಿಳಿಯಲು ಸುದ್ದಿ ಓದಿ ಮತ್ತು ವಿಡಿಯೋ ವಿಕ್ಷೀಸಿ
Viral Video: ಚಲಿಸುತ್ತಿರುವ ರೈಲಿನಿಂದ ಪ್ಲಾಟ್ಫಾರ್ಮ್ ಗೆ ಬಿದ್ದ ಪ್ರಯಾಣಿಕ, ಮುಂದೇನಾಯ್ತು ನೀವೇ ನೋಡಿ title=
viral video(Video Grab)

Trending Video: ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರು ಚಲಿಸುತ್ತಿರುವ ರೈಲಿನಿಂದ ಇಳಿಯಲು ಅಥವಾ ಹತ್ತಲು ಪ್ರಯತ್ನಿಸುತ್ತಿರುವುದು ಆಗಾಗ್ಗೆ ನೋಡಿರಬಹುದು, ಇಂತಹ ಪರಿಸ್ಥಿತಿಯಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಮುಂಬೈನ (Mumbai) ವಡಾಲಾ ರೋಡ್ (Vadala Road Railway Station) ರೈಲು ನಿಲ್ದಾಣದಿಂದ ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ವಡಾಲಾ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಕಾಲು ಜಾರಿ ಪ್ಲಾಟ್ಫಾರ್ಮ್ ಗೆ ಬಿದ್ದಿದ್ದಾನೆ.

ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು (CCTV Footage) ಇದೀಗ ಬಹಿರಂಗಗೊಂಡಿದ್ದು, ವಿಡಿಯೋದಲ್ಲಿ ಪ್ರಯಾಣಿಕ ಬೋಗಿಯ ಗೇಟ್ ಬಳಿ ನೇತಾಡಲು ಪ್ರಯತ್ನಿಸುತ್ತಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಪ್ಲಾಟ್‌ಫಾರ್ಮ್ ಗೆ ಮೇಲೆ ಬಿದ್ದಿದ್ದಾನೆ. ರೈಲು ವೇಗವಾಗಿ ಚಲಿಸುತ್ತಿದ್ದ ಕಾರಣ ನಿಲ್ದಾಣದಲ್ಲಿ  ನಿಂತಿದ್ದ ಜನರು ಮತ್ತು ಆರ್‌ಪಿಎಫ್ ಜವಾನರು (RPF Constable) ಪ್ರಯಾಣಿಕನ ರಕ್ಷಣೆಗೆ ಧಾವಿಸಿದ್ದಾರೆ. ಆರ್‌ಪಿಎಫ್ ಜವಾನ ನೇತ್ರಪಾಲ್ ಸಿಂಗ್ (Netrapal Singh) ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಸಿಕ್ಕಿಬಿದ್ದ ಪ್ರಯಾಣಿಕರನ್ನು ಹಿಡಿದು ಹೊರಗೆಳೆದ ಕಾರಣ ಪ್ರಯಾಣಿಕನ ಜೀವ ಉಳಿದಿದೆ.

ಇದನ್ನೂ ಓದಿ-Viral video : ಮೊಟ್ಟೆ ಕದಿಯಲು ಬಂದವನ ಮೇಲೆ ದಾಳಿ ಮಾಡಿದ ನವಿಲು, ಎದ್ದು ಬಿದ್ದು ಓಡಿದ ಯುವಕ

ಎರಡು ತಿಂಗಳ ಹಿಂದೆ ಇದೇ ರೀತಿಯ ಘಟನೆ ಸಂಭವಿಸಿತ್ತು
ಕಳೆದ ಎರಡು ತಿಂಗಳ ಹಿಂದೆ ಮುಂಬೈನಲ್ಲಿ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ. ಮುಂಬೈನ ವಸಾಯಿ ರೋಡ್ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲನ್ನು ಹತ್ತಲು ವ್ಯಕ್ತಿಯೊಬ್ಬ ಪ್ರಯತ್ನಿಸುತ್ತಿದ್ದಾಗ, ಪ್ಲಾಟ್‌ಫಾರ್ಮ್ ಹಾಗೂ ರೈಲಿನ ಮದ್ಯದಲ್ಲಿರುವ ಅಂತರಕ್ಕೆ ಬಿದ್ದಿದ್ದಾರೆ. ವ್ಯಕ್ತಿ ಚೇತರಿಸಿಕೊಳ್ಳಲು ಪ್ರಯತ್ನಿಸುವ ಮೊದಲು ರೈಲು ವೇಗ ಪಡೆದುಕೊಂಡ ಕಾರಣ, ವ್ಯಕ್ತಿ 40 ರಿಂದ 50 ಮೀಟರ್ ಎಳೆಯಲ್ಪಟ್ಟಿದ್ದ, ಇದರ ನಂತರ, ಇಬ್ಬರು ಆರ್‌ಪಿಎಫ್ ಸಿಬ್ಬಂದಿ ಆತನನ್ನು ಹಿಡಿದು ಹೊರಕ್ಕೆ ಎಳೆದು ಆತನ ಜೀವ ಉಳಿಸಿದ್ದರು.

ಇದನ್ನೂ ಓದಿ-Thirsty Snake Video: ಅಂಗೈಯಲ್ಲಿ ನೀರಿಡಿದು ಹಾವಿನ ಬಾಯಾರಿಕೆ ನೀಗಿಸಿದ ವ್ಯಕ್ತಿ! ವಿಡಿಯೋ ವೈರಲ್

ಈ ವಿಡಿಯೋ ಅನ್ನು ಟ್ವೀಟ್ ಮಾಡುವ ಮೂಲಕ ಪ್ರಯಾಣಿಕರಿಗೆ ಮನವಿ ಮಾಡಿರುವ ಮುಂಬೈ ವಿಭಾಗದ DRM, ಚಲಿಸುತ್ತಿರುವ ರೈಲನ್ನು ಹತ್ತದಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ-Watch:ಭಾರೀ ಮಳೆಯ ಬೆನ್ನಲ್ಲೇ ವಿಲಕ್ಷಣ 'ಏಲಿಯನ್ ತರಹದ' ಜೀವಿ ಪತ್ತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News