Viral Video: ವೈನ್ ಶಾಪ್‌ ಒಳಗೆ ನುಗ್ಗಿ, ಬಾಟಲಿ ತೆರೆದು ಮದ್ಯ ಸೇವಿಸಿದ ಕೋತಿ

Viral Video: ವಿಡಿಯೋದಲ್ಲಿ, ಕೋತಿಯು ಮೊದಲು ವೈನ್ ಶಾಪ್‌ಗೆ ನುಗ್ಗಿ ಮದ್ಯದ ಬಾಟಲಿಯನ್ನು ಹಿಡಿದಿದೆ. ಬಳಿಕ ತನ್ನ ಬಾಯಿಯಿಂದ ಬಾಟಲಿಯ ಮುಚ್ಚಳವನ್ನು ತೆರೆದು, ನಂತರ ಅದನ್ನು ನಿಧಾನವಾಗಿ ಕುಡಿಯಲು ಪ್ರಾರಂಭಿಸಿದೆ. 

Edited by - Zee Kannada News Desk | Last Updated : Dec 27, 2021, 02:29 PM IST
  • ವೈನ್ ಶಾಪ್‌ಗೆ ನುಗ್ಗಿ ಮದ್ಯದ ಬಾಟಲಿ ಕೈಗೆತ್ತಿಕೊಂಡ ಕೋತಿ
  • ಬಾಯಿಯಿಂದ ಬಾಟಲಿಯ ಮುಚ್ಚಳವನ್ನು ತೆರೆದು, ಮದ್ಯ ಸೇವಿಸಿದ ಮಂಗ
  • ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಯ್ತು ವಿಡಿಯೋ
 Viral Video: ವೈನ್ ಶಾಪ್‌ ಒಳಗೆ ನುಗ್ಗಿ, ಬಾಟಲಿ ತೆರೆದು ಮದ್ಯ ಸೇವಿಸಿದ ಕೋತಿ  title=
ಕೋತಿ

ಮಂಗವೊಂದು ಮದ್ಯದ ಅಂಗಡಿಯೊಳಗೆ ಕುಳಿತು ಬಾಟಲಿಯಲ್ಲಿ ಮದ್ಯ ಸೇವಿಸುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ (Monkey Drinks Alcohol) ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರ ಗಮನಸೆಳೆದಿದೆ. 

ವರದಿಯೊಂದರ ಪ್ರಕಾರ ಈ ಘಟನೆ ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ನಡೆದಿದೆ. ವಿಡಿಯೋದಲ್ಲಿ, ಕೋತಿಯು ಮೊದಲು ವೈನ್ ಶಾಪ್‌ಗೆ ನುಗ್ಗಿ (Monkey Enters Liquor Shop) ಮದ್ಯದ ಬಾಟಲಿಯನ್ನು ಹಿಡಿದಿದೆ. ಬಳಿಕ ತನ್ನ ಬಾಯಿಯಿಂದ ಬಾಟಲಿಯ ಮುಚ್ಚಳವನ್ನು ತೆರೆದು, ನಂತರ ಅದನ್ನು ನಿಧಾನವಾಗಿ ಕುಡಿಯಲು ಪ್ರಾರಂಭಿಸಿದೆ. 

ಅಂಗಡಿಯವನು ಮಂಗನನ್ನು ಕಂಡು ವಿಚಲಿತರಾಗಿದ್ದಾರೆ. ಅದಕ್ಕೆ ಬಿಸ್ಕಟ್ ಅನ್ನು ಸಹ ನೀಡುತ್ತಾರೆ. ಆದಾಗ್ಯೂ, ಕೋತಿಯು ಮದ್ಯ  ಕುಡಿಯುವುದರಲ್ಲಿ ನಿರತವಾಗಿದೆ. ಮನುಷ್ಯರಂತೆಯೇ, ಕೋತಿಯು ನಂತರ ಬಾಟಲಿಯನ್ನು ಹಿಡಿದುಕೊಂಡು ತನ್ನ ಗಂಟಲಿಗೆ ಮದ್ಯವನ್ನು ಗುಟುಕು ಹಾಕುತ್ತದೆ. ಈ ದೃಶ್ಯ ನೆಟ್ಟಿಗರ ಗಮನಸೆಳೆಯುತ್ತಿದೆ.

ಗಮನಾರ್ಹವಾಗಿ, ಕೋತಿಗಳು ಮನುಷ್ಯರನ್ನು ಅನುಕರಿಸುವಲ್ಲಿ ಅತ್ಯುತ್ತಮವಾಗಿವೆ. ಅವು ಸುಲಭವಾಗಿ ಮನುಷ್ಯರಿಂದ ವಿಷಯಗಳನ್ನು ಕಲಿಯಬಹುದು ಮತ್ತು ಅವರ ಕ್ರಿಯೆಗಳನ್ನು ಅನುಕರಿಸಬಹುದು. ಈ ಹಿಂದೆಯೂ ಕೋತಿಗಳು ಮದ್ಯ ಸೇವಿಸಿರುವ ಇಂತಹ ಹಲವು ಫನ್ನಿ ವಿಡಿಯೋಗಳು ಮುನ್ನೆಲೆಗೆ ಬಂದಿವೆ. ಮದ್ಯ ಸೇವಿಸಿ ಕೋತಿಗಳು ಗಲಾಟೆ ಎಬ್ಬಿಸಿದ ಹಲವು ಘಟನೆಗಳು ಸಹ ಬೆಳಕಿಗೆ ಬಂದಿವೆ.

ಇದನ್ನೂ ಓದಿ: ರಾಜ್ಯದಲ್ಲಿ ನ್ಯೂ ಇಯರ್ ಪಾರ್ಟಿಗೆ ಬ್ರೇಕ್! ಅಕ್ಕಪಕ್ಕದ ರಾಜ್ಯಗಳಿಗೆ ಪಾರ್ಟಿ ಪ್ರಿಯರು ಎಸ್ಕೇಪ್.?

ನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News