ಸಾವರ್ಕರ್ ಸೆಲ್ಯುಲಾರ್ ಜೈಲನ್ನು ತೀರ್ಥಸ್ಥಾನವನ್ನಾಗಿಸಿದರು: ಗೃಹ ಸಚಿವ ಅಮಿತ್ ಶಾ

  ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಜೈಲಿಗೆ ಭೇಟಿ ನೀಡಿದ ನಂತರ ಸಾವರ್ಕರ್ ಅವರನ್ನು ಬ್ರಿಟಿಷ್ ಸರ್ಕಾರವು ಶಿಕ್ಷೆ ಅನುಭವಿಸುತ್ತಿದ್ದಾಗ, ಸ್ವಾತಂತ್ರ್ಯ ಹೋರಾಟಗಾರ ಸೆಲ್ಯುಲಾರ್ ಜೈಲನ್ನು 'ತೀರ್ಥಸ್ಥಾನ'ವಾಗಿ ಪರಿವರ್ತಿಸಿದರು ಎಂದು ಹೇಳಿದ್ದಾರೆ.

Written by - Zee Kannada News Desk | Last Updated : Oct 15, 2021, 07:09 PM IST
  • ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಜೈಲಿಗೆ ಭೇಟಿ ನೀಡಿದ ನಂತರ ಸಾವರ್ಕರ್ ಅವರನ್ನು ಬ್ರಿಟಿಷ್ ಸರ್ಕಾರವು ಶಿಕ್ಷೆ ಅನುಭವಿಸುತ್ತಿದ್ದಾಗ, ಸ್ವಾತಂತ್ರ್ಯ ಹೋರಾಟಗಾರ ಸೆಲ್ಯುಲಾರ್ ಜೈಲನ್ನು 'ತೀರ್ಥಸ್ಥಾನ'ವಾಗಿ ಪರಿವರ್ತಿಸಿದರು ಎಂದು ಹೇಳಿದ್ದಾರೆ.
  • ಶುಕ್ರವಾರದಂದು ಅವರು ವಿನಾಯಕ ಸಾವರ್ಕರ್ (Vinayak Savarkar) ಅವರಿಗೆ ಗೌರವ ಸಲ್ಲಿಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿರುವ ಅವರ ಕೊಡುಗೆಯನ್ನು ಶ್ಲಾಘಿಸಿದರು.
 ಸಾವರ್ಕರ್ ಸೆಲ್ಯುಲಾರ್ ಜೈಲನ್ನು ತೀರ್ಥಸ್ಥಾನವನ್ನಾಗಿಸಿದರು: ಗೃಹ ಸಚಿವ ಅಮಿತ್ ಶಾ title=
file photo

ನವದೆಹಲಿ:  ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಜೈಲಿಗೆ ಭೇಟಿ ನೀಡಿದ ನಂತರ ಸಾವರ್ಕರ್ ಅವರನ್ನು ಬ್ರಿಟಿಷ್ ಸರ್ಕಾರವು ಶಿಕ್ಷೆ ಅನುಭವಿಸುತ್ತಿದ್ದಾಗ, ಸ್ವಾತಂತ್ರ್ಯ ಹೋರಾಟಗಾರ ಸೆಲ್ಯುಲಾರ್ ಜೈಲನ್ನು 'ತೀರ್ಥಸ್ಥಾನ'ವಾಗಿ ಪರಿವರ್ತಿಸಿದರು ಎಂದು ಹೇಳಿದ್ದಾರೆ.

ಶುಕ್ರವಾರದಂದು ಅವರು ವಿನಾಯಕ ಸಾವರ್ಕರ್ (Vinayak Savarkar) ಅವರಿಗೆ ಗೌರವ ಸಲ್ಲಿಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿರುವ ಅವರ ಕೊಡುಗೆಯನ್ನು ಶ್ಲಾಘಿಸಿದರು.

ಸಾವರ್ಕರ್ ಸೆಲ್ಯುಲಾರ್ ಜೈಲನ್ನು 'ತೀರ್ಥಸ್ಥಾನ'ವಾಗಿ ಪರಿವರ್ತಿಸಿ ಜಗತ್ತಿಗೆ ಸಂದೇಶವನ್ನು ನೀಡಿದರು, ನೀವು ಎಷ್ಟು ಬೇಕಾದರೂ ಹಿಂಸಿಸಬಹುದು, ಆದರೆ ಅವರ ಹಕ್ಕುಗಳನ್ನು ತಡೆಯಲು ಸಾಧ್ಯವಿಲ್ಲ - 'ನನ್ನ ದೇಶವನ್ನು ಸ್ವತಂತ್ರಗೊಳಿಸುವುದು ನನ್ನ ಜನ್ಮಸಿದ್ಧ ಹಕ್ಕು' ಎನ್ನುವುದನ್ನು ಸಾವರ್ಕರ್ ಇದನ್ನು ಇಲ್ಲಿ ಸಾಧಿಸಿದರು, ಎಂದು 'ಶಾ ಹೇಳಿದರು.

ಇದೇ ವೇಳೆ ಎರಡು ಬಾರಿ 'ಕಾಲಾ ಪಾಣಿ'ಗೆ ಕಳುಹಿಸಿದ ಕ್ರಾಂತಿಕಾರಿ ಸಚಿನ್ ಸನ್ಯಾಲ್ ಅವರನ್ನು ಶ್ಲಾಘಿಸಿದ ಅವರು."ಇಂದು ನಾನು ಸಚಿನ್ ಸನ್ಯಾಲ್ ಅವರ ಸೆಲ್‌ಗೆ ಭೇಟಿ ನೀಡಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದೆ.ನನ್ನಂತಹ ವ್ಯಕ್ತಿಗೆ ಇದು ಭಾವನಾತ್ಮಕ ಕ್ಷಣ. ಬಹುಶಃ ಈ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಎರಡು ಬಾರಿ 'ಕಾಲಾಪಾಣಿ'ಗೆ ಕಳುಹಿಸಲ್ಪಟ್ಟವರು ಒಬ್ಬರೇ "ಎಂದು ಶಾ ಹೇಳಿದರು.ಸ್ವಾತಂತ್ರ್ಯ ಚಳುವಳಿಯಲ್ಲಿ ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಕೊಡುಗೆಗಳನ್ನು ಅವರು ಸ್ಮರಿಸಿದರು.

ಇದನ್ನೂ ಓದಿ: ಗೋವಾದ 10ನೇ ತರಗತಿಯ ಪಠ್ಯ ಪುಸ್ತಕದಲ್ಲಿ ನೆಹರು ಬದಲಿಗೆ ಸಾವರ್ಕರ್ ಚಿತ್ರ; NSUI ಆಕ್ಷೇಪ

'ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಪಶ್ಚಿಮ ಬಂಗಾಳ ಉತ್ತಮ ಕೊಡುಗೆ ನೀಡಿದೆ.ನಾನು ಇಲ್ಲಿಗೆ ಬಂದಾಗ, 1938 ರವರೆಗೆ ಇಲ್ಲಿ ಇರಿಸಲಾಗಿರುವ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳ ಪಟ್ಟಿಯನ್ನು ನಾನು ಗೌರವಯುತವಾಗಿ ಓದಿದ್ದೇನೆ.ಬಂಗಾಳ ಮತ್ತು ಪಂಜಾಬ್ ಅತಿ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ಹೊಂದಿದ ಹೆಮ್ಮೆ ಹೊಂದಿವೆ, "ಎಂದು ಅವರು ಹೇಳಿದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಷಾ ಮೂರು ದಿನಗಳ ಭೇಟಿ ನೀಡಿದ್ದು, ಅಲ್ಲಿ ಅವರು ವಿವಿಧ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಚಾಲನೆ ನೀಡಲಿದ್ದಾರೆ.ಅವರು ಇಂದು ಮಧ್ಯಾಹ್ನ 3.45 ರ ಸುಮಾರಿಗೆ ಪೋರ್ಟ್ ಬ್ಲೇರ್‌ಗೆ ಬಂದರು.ಅವರನ್ನು ಲೆಫ್ಟಿನೆಂಟ್ ಗವರ್ನರ್ ಅಡ್ಮಿರಲ್ ಡಿ ಕೆ ಜೋಶಿ ಮತ್ತು ಸಂಸದ ಕುಲದೀಪ್ ರಾಯ್ ಶರ್ಮಾ ಮತ್ತು ಸ್ಥಳೀಯ ಆಡಳಿತದ ಅಧಿಕಾರಿಗಳೊಂದಿಗೆ ವೀರ್ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

.

Trending News