ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ 63 ವರ್ಷಗಳಾಗಿದ್ದರೂ ಇಷ್ಟೊಂದು ಫಿಟ್ ಅಂಡ್ ಫೈನ್ ಆಗಿ ಲವಲವಿಕೆಯಿಂದ ಓಡಾಡೋಡು ಕಂಡು ಹಲವರಿಗೆ ಅಚ್ಚರಿಯಾಗಿರಬಹುದು. ಅಷ್ಟೇ ಏಕೆ ಅವರ ದೇಹದ ಫಿಟ್‌ನೆಸ್ ಸೀಕ್ರೆಟ್ ಏನು ಎಂಬ ಕುತೂಹಲವೂ ನಿಮ್ಮನ್ನು ಕಾಡಿರಬಹುದು. ಆದರೀಗ ಆ ಸೀಕ್ರೆಟ್ ಏನು ಎಂಬುದು ಬಹಿರಂಗವಾಗಿದೆ.
ಹೌದು, ಮಮತಾ ಬ್ಯಾನರ್ಜಿ ಅವರು ಸದಾ ಆಕ್ಟೀವ್ ಆಗಿರಲು, ದೇಹದ ಫಿಟ್ ನೆಸ್ ಕಾಪಾಡಿಕೊಳ್ಳಲು ಪ್ರತಿನಿತ್ಯ ಬ್ಯಾಡ್ಮಿಂಟನ್ ಆಡ್ತಾರಂತೆ. ಹೀಗಂತ ಮಮತಾ ಬ್ಯಾನರ್ಜಿ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾವು ಬ್ಯಾಡ್ಮಿಂಟನ್ ಆಡುತ್ತಿರುವ ವೀಡಿಯೋವನ್ನು ಕೂಡ ಶೇರ್ ಮಾಡಿ, 'ನಮಗೆ ಕ್ರೀಡೆ ಎಂದರೆ ಬಹಳ ಇಷ್ಟ' ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
We love sports.
A token game in a village... pic.twitter.com/rSb61JZN4d— Mamata Banerjee (@MamataOfficial) January 4, 2019
ಸಾರ್ವಜನಿಕ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಬೋಲ್ಪುರ ಗ್ರಾಮಕ್ಕೆ ಹೋಗಿದ್ದರು. ಅಲ್ಲಿ, ಬ್ಯಾಡ್ಮಿಂಟನ್ ಕೋರ್ಟ್'ಗೆ ಇಳಿದು ತಾವೂ ಬ್ಯಾಡ್ಮಿಂಟನ್ ಆಡಿದ್ದಾರೆ. ಅಷ್ಟೇ ಅಲ್ಲ, ಅಲ್ಲಿ ತಮ್ಮನ್ನು ತಾವು ಫಿಟ್ ಆಗಿ ಇರಿಸಿಕೊಳ್ಳಲು ತಾವು ಬ್ಯಾಡ್ಮಿಂಟನ್ ಆಡುವುದಾಗಿಯೂ, ಪ್ರತಿನಿತ್ಯ ಅವರು 20 ನಿಮಿಷ ವಾಕ್ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ.