Viral Video: ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಹಣ ಹಂಚುತ್ತಿರುವ ವಿಡಿಯೋ ವೈರಲ್..!

ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ವಾಪಸ್ ಬರುತ್ತಿದ್ದಾಗ ತೇಜಸ್ವಿಯರು ಮಹಿಳೆಯರಿಗೆ ಹಣ ಹಂಚಿದ್ದಾರೆ ಎಂದು ಜೆಡಿಯು ಎಂಎಲ್‌ಸಿ ಹೇಳಿದ್ದಾರೆ.

Written by - Puttaraj K Alur | Last Updated : Sep 10, 2021, 11:38 AM IST
  • ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮಹಿಳೆಯರಿಗೆ ಹಣ ಹಂಚುತ್ತಿರುವ ವಿಡಿಯೋ ವೈರಲ್
  • ಹಣ ಹಂಚುವ ಬದಲು ಬಡವರಿಗೆ ಕಬಳಿಸಿಕೊಂಡಿರುವ ಭೂಮಿ ಹಂಚಿ ಎಂದ ಜೆಡಿಯು ಎಂಎಲ್‌ಸಿ ನೀರಜ್ ಕುಮಾರ್
  • ತೇಜಸ್ವಿ ಯಾದವ್ ಬಡವರಿಗೆ ಸಹಾಯ ಮಾಡುವುದರಲ್ಲಿ ಏನು ತಪ್ಪಿಲ್ಲ ಎಂದು ತಿರುಗೇಟು ನೀಡಿದ ಆರ್‌ಜೆಡಿ
Viral Video: ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಹಣ ಹಂಚುತ್ತಿರುವ ವಿಡಿಯೋ ವೈರಲ್..! title=
ಮಹಿಳೆಯರಿಗೆ ಹಣ ಹಂಚಿದ ತೇಜಸ್ವಿ ಯಾದವ್ (Photo Courtesy: Twitter/@neerajkumarmlc)

ನವದೆಹಲಿ: ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್(Tejashwi Yadav) ಮಹಿಳೆಯರಿಗೆ ಹಣ ಹಂಚುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ವಿಡಿಯೋದಲ್ಲಿ ತೇಜಸ್ವಿ ತನ್ನ ಕಾರಿನಲ್ಲಿ ಕುಳಿತ್ತಿರುತ್ತಾರೆ. ಈ ವೇಳೆ ಅವರ ಬಳಿ ಬಂದ ಮಹಿಳೆಯರಿಗೆ ಅವರು 500 ರೂ. ಮುಖಬೆಲೆಯ ನೋಟುಗಳನ್ನು ನೀಡಿದ್ದಾರೆ. ಆರ್‌ಜೆಡಿ ನಾಯಕ ನೀಡಿದ ಹಣವನ್ನು ಮಹಿಳೆಯರು ಸ್ವೀಕರಿಸಿ ಅವರಿಗೆ ಕೈಮುಗಿದಿದ್ದಾರೆ.

ಗುರುವಾರ ಸಂಜೆ ಗೋಪಾಲಗಂಜ್‌ನಲ್ಲಿ ತೇಜಸ್ವಿಯವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿಅವರು ಮಹಿಳೆಯರಿಗೆ ಹಣ ಹಂಚುತ್ತಿರುವ ವಿಡಿಯೋವನ್ನು ಜೆಡಿಯು ಎಂಎಲ್‌ಸಿ ನೀರಜ್ ಕುಮಾರ್(JDU MLC Neeraj Kumar)ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ವಾಪಸ್ ಬರುತ್ತಿದ್ದಾಗ ತೇಜಸ್ವಿಯರು ಮಹಿಳೆಯರಿಗೆ ಹಣ ಹಂಚಿದ್ದಾರೆ ಎಂದು ಜೆಡಿಯು ಎಂಎಲ್‌ಸಿ ಹೇಳಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಈ ವಿಡಿಯೋದಲ್ಲಿ ತೇಜಸ್ವಿಯರು ಬಡ ಮಹಿಳೆಯರಿಗೆ ತಾನು ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರ ಮಗ ಎಂದು ಪರಿಚಯಿಸಿಕೊಂಡಿದ್ದಾರೆ. ‘ನಾನು ಲಾಲೂ ಜೀ ಅವರ ಮಗ ತೇಜಸ್ವಿ ಯಾದವ್’ ಎಂದು ಅವರು ಹೇಳಿರುವುದನ್ನು ವಿಡಿಯೋದಲ್ಲಿಕಾಣಬಹುದಾಗಿದೆ.

ಇದನ್ನೂ ಓದಿ: PM Kisan ಯೋಜನೆ ಅಡಿ ಈಗ ರೈತರಿಗೆ ಸಿಗಲಿದೆ 6000 ಬದಲಿಗೆ,12000 ರೂ.! 

ಈ ವಿಡಿಯೋವನ್ನು ಬಿಡುಗಡೆ ಮಾಡಿದ ಜೆಡಿಯು ನಾಯಕ ನೀರಜ್ ಕುಮಾರ್, ತೇಜಸ್ವಿ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಜೆಡಿಯು ನಾಯಕ ತೇಜಸ್ವಿ ತನ್ನದೇಯಾದ ಗುರುತು ಹೊಂದಿಲ್ಲವೆಂಬುದು ಈ ವಿಡಿಯೋದಿಂದ ತಿಳಿಯುತ್ತದೆ. ಏಕೆಂದರೆ ಅವರು ಸಹಾನುಭೂತಿಯ ಆಧಾರದ ಮೇಲೆ ನಾಯಕರಾಗಿ ಉಳಿದಿದ್ದಾರೆ. ಅವರ ತಂದೆ ಲಾಲೂ ಪ್ರಸಾದ್‌(Lalu Prasad Yadav) ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆಂದು ಕುಟುಕಿದ್ದಾರೆ. ‘ಬಡವರಿಗೆ ಹೀಗೆ ಹಣ ನೀಡುವ ಬದಲು ಲಾಲೂ ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಮಂತ್ರಿಯಾಗಿದ್ದಾಗ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ ವಿತರಿಸಬೇಕು’ ಅಂತಾ ನೀರಜ್ ಆಗ್ರಹಿಸಿದ್ದಾರೆ.

‘ಲಾಲೂ ಪ್ರಸಾದ್ ಯಾದವ್ ಕೂಡ ಬಡವರನ್ನು ವಂಚಿಸಿದ್ದಾರೆ, ಆದರೆ ತೇಜಸ್ವಿ ಯಾದವ್(Tejashwi Yadav) ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸಹಾನುಭೂತಿಯ ಆಧಾರದ ಮೇಲೆ ತೇಜಸ್ವಿ ಉನ್ನತ ಹುದ್ದೆ ಪಡೆದಿದ್ದಾರೆ. ಆದರೆ ಅವರು ಇನ್ನೂ ತಂದೆಯ ಹೆಸರಿನಲ್ಲಿಯೇ ಗುರುತಿಸಿಕೊಳ್ಳುತ್ತಿದ್ದಾರೆ. ಅವರೇ ಸ್ವತಃ ಅದನ್ನು ಒಪ್ಪಿಕೊಳ್ಳುತ್ತಾರೆ. ತೇಜಸ್ವಿ ಬಡವರಿಗೆ ಏನನ್ನಾದರೂ ನೀಡಬೇಕಾದರೆ ಲಾಲೂ ಪ್ರಸಾದ್ ಕುಟುಂಬದ ಹೆಸರಿನಲ್ಲಿರುವ ಭೂಮಿಯನ್ನು ವಾಪಸ್ ನೀಡಬೇಕಿತ್ತು’ ಎಂದು ನೀರಜ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: Jallianwala Bagh Smarak : ನವೀಕರಿಸಿದ 'ಜಲಿಯನ್ ವಾಲಾ ಬಾಗ್ ಸ್ಮಾರಕ' ಇಂದು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ ಪ್ರಧಾನಿ ಮೋದಿ 

ಮಹಿಳೆಯರಿಗೆ ತೇಜಸ್ವಿ ಹಣ ಹಂಚಿರುವ ವಿಡಿಯೋ ವೈರಲ್(Video Viral) ಆಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ(RJD), ‘ಬಡವರಿಗೆ ಸಹಾಯ ಮಾಡುವುದರಲ್ಲಿ ತಪ್ಪೇನಿದೆ’ ಅಂತಾ ಸ್ಪಷ್ಟೀಕರಣ ನೀಡಿದೆ. ಪಂಚಾಯತ್ ಚುನಾವಣೆಗಳ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬಿಹಾರ ಸರ್ಕಾರವು ದೊಡ್ಡ ಪ್ರಮಾಣದ ವರ್ಗಾವಣೆಯನ್ನು ಮಾಡುತ್ತಿದೆ. ತೇಜಸ್ವಿ ಬಡವರಿಗೆ ಸಹಾಯ ಮಾಡುವುದರಲ್ಲಿ ಏನು ತಪ್ಪಿಲ್ಲ’ ಎಂದು ಆರ್‌ಜೆಡಿ ತಿರುಗೇಟು ನೀಡಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News