Yogi Adityanath : ಸಿಎಂ ಯೋಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಹೂರ್ತ ಫಿಕ್ಸ್!

ಹೋಳಿಗೂ ಮುನ್ನವೇ ಪ್ರಮಾಣ ವಚನದ ಬಗ್ಗೆ ಪಕ್ಷದ ಹೈಕಮಾಂಡ್ ಚಿಂತನೆ ನಡೆಸುತ್ತಿದ್ದು, ಒಮ್ಮತ ಬಂದ ನಂತರ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಲಾಗುತ್ತಿದೆ.

Written by - Channabasava A Kashinakunti | Last Updated : Mar 11, 2022, 01:54 PM IST
  • ಮಾರ್ಚ್ 15 ರಂದು ಸಿಎಂ ಯೋಗಿ ಪ್ರಮಾಣ ವಚನ
  • ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸಮಾರಂಭದಲ್ಲಿ ಭಾಗಿ
  • ಚುನಾವಣೆಯಲ್ಲಿ 255 ಸ್ಥಾನಗಳನ್ನು ಗೆದ್ದು ಬಿಗಿದ ಬಿಜೆಪಿ
Yogi Adityanath : ಸಿಎಂ ಯೋಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಹೂರ್ತ ಫಿಕ್ಸ್! title=

ಲಖನೌ : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (BJP) ಭರ್ಜರಿ ಜಯಗಳಿಸಿದ ನಂತರ ಈಗ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಹೋಳಿ ಹಬ್ಬಕ್ಕೂ ಮುನ್ನ ಯೋಗಿ ಆದಿತ್ಯನಾಥ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೋಳಿಗೂ ಮುನ್ನವೇ ಪ್ರಮಾಣ ವಚನದ ಬಗ್ಗೆ ಪಕ್ಷದ ಹೈಕಮಾಂಡ್ ಚಿಂತನೆ ನಡೆಸುತ್ತಿದ್ದು, ಒಮ್ಮತ ಬಂದ ನಂತರ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಲಾಗುತ್ತಿದೆ.

ಮಾರ್ಚ್ 15 ರಂದು ಸಿಎಂ ಯೋಗಿ ಪ್ರಮಾಣ ವಚನ 

ಯುಪಿ ಚುನಾವಣೆ(UP Election Result 2022)ಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ನಂತರ ಯೋಗಿ ಸಚಿವ ಸಂಪುಟದ ಪ್ರಮಾಣವಚನದ ಬಗ್ಗೆ ಸುದ್ದಿ ಹರಿದಾಡುತ್ತಿವೆ ಮತ್ತು ಹೋಳಿಗಿಂತ ಮೊದಲು ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಹೇಳಲಾಗುತ್ತಿದೆ, ಏಕೆಂದರೆ ಹೋಳಿ ಮಾರ್ಚ್ 17 ಮತ್ತು 18 ರಂದು, ಆದರೆ MLC ನಾಮನಿರ್ದೇಶನಕ್ಕೆ ಮಾರ್ಚ್ 19 ಕೊನೆಯ ದಿನಾಂಕವಾಗಿದೆ. ಮೂಲಗಳ ಪ್ರಕಾರ, ಒಮ್ಮತಕ್ಕೆ ಬಂದರೆ ಮಾರ್ಚ್ 15 ರಂದು ಅಂದರೆ ಮಂಗಳವಾರ ಸಿಎಂ ಯೋಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಬಹುದು.

ಇದನ್ನೂ ಓದಿ : PM Modi : ಪಂಚ ರಾಜ್ಯ ಚುನಾವಣೆ ನಂತರ ಗುಜರಾತ್‌ಗೆ ಪ್ರಧಾನಿ ಮೋದಿ ಎಂಟ್ರಿ! ಮುಂದಿನ ಪ್ಲಾನ್ ಏನು?

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸಮಾರಂಭದಲ್ಲಿ ಭಾಗಿ

ಮೂಲಗಳ ಪ್ರಕಾರ ಪ್ರಮಾಣ ವಚನ ಸಮಾರಂಭ ಅದ್ಧೂರಿಯಾಗಿ ನಡೆಯುವ ನಿರೀಕ್ಷೆ ಇದೆ. ಸಮಾರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ(Narendra Modi and Amit Shah) ಭಾಗವಹಿಸಬಹುದು. ಬಿಜೆಪಿಯ ಅನೇಕ ಕೇಂದ್ರ ಸಚಿವರು ಮತ್ತು ಹಿರಿಯ ನಾಯಕರ ಸಮ್ಮುಖದಲ್ಲಿ ಸಮಾರಂಭ ನಡೆಯಬಹುದು. ಇದಲ್ಲದೇ ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳ ಮುಖ್ಯಮಂತ್ರಿಗಳೂ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು.

255 ಸ್ಥಾನಗಳನ್ನು ಗೆದ್ದ ಬಿಜೆಪಿ 

ಉತ್ತರ ಪ್ರದೇಶ ಚುನಾವಣಾ ಆಯೋಗವು 403 ಸ್ಥಾನಗಳಿಗೆ ಚುನಾವಣಾ ಫಲಿತಾಂಶಗಳನ್ನು ತಡರಾತ್ರಿ ಪ್ರಕಟಿಸಿತು, ಇದರಲ್ಲಿ ಭಾರತೀಯ ಜನತಾ ಪಕ್ಷ(BJP)ವು ಅದರ ಮಿತ್ರಪಕ್ಷಗಳೊಂದಿಗೆ 273 ಸ್ಥಾನಗಳನ್ನು ಗೆದ್ದು ಸಂಪೂರ್ಣ ಬಹುಮತವನ್ನು ಗಳಿಸಿದೆ. ಚುನಾವಣೆಯಲ್ಲಿ ಬಿಜೆಪಿ 255 ಸ್ಥಾನಗಳನ್ನು ಗೆದ್ದರೆ, ಅಪ್ನಾ ದಳ 12 ಮತ್ತು ನಿಶಾದ್ ಪಕ್ಷ 6 ಸ್ಥಾನಗಳನ್ನು ಗೆದಿದ್ದೆ. ಉತ್ತರ ಪ್ರದೇಶದ ಪ್ರಮುಖ ಪ್ರತಿಪಕ್ಷ ಸಮಾಜವಾದಿ ಪಕ್ಷವು 111 ಸ್ಥಾನಗಳನ್ನು ಗೆದ್ದಿದೆ. ಎಸ್‌ಪಿಯ ಮಿತ್ರಪಕ್ಷವಾದ ರಾಷ್ಟ್ರೀಯ ಲೋಕದಳ ಎಂಟು ಸ್ಥಾನಗಳಲ್ಲಿ ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷವು ಆರು ಸ್ಥಾನಗಳನ್ನು ಗೆದ್ದಿದೆ. ಚುನಾವಣಾ ಆಯೋಗದ ಪ್ರಕಾರ ಬಿಜೆಪಿ ಶೇ.41.29 ಮತಗಳನ್ನು ಪಡೆದರೆ, ಸಮಾಜವಾದಿ ಪಕ್ಷ ಶೇ.32.06 ಮತ್ತು ಬಹುಜನ ಸಮಾಜ ಪಕ್ಷ ಶೇ.12.88 ಮತಗಳನ್ನು ಪಡೆದಿವೆ.

ಇದನ್ನೂ ಓದಿ : Punjab Assembly Elections 2022: ಪಂಜಾಬ್ ಚುನಾವಣೆಯ ಭವಿಷ್ಯ ನುಡಿದಿದ್ದ ಜೋಫ್ರಾ ಆರ್ಚರ್!

 ಗೆದ್ದು ಬಿಗಿದ ಸಿಎಂ ಯೋಗಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) (ಗೋರಖ್‌ಪುರ ಸದಾರ್‌ನಿಂದ ಯೋಗಿ ಆದಿತ್ಯನಾಥ್ ಗೆಲುವು) ಗೋರಖ್‌ಪುರ ಸಿಟಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಆದರೆ, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕೌಶಂಬಿ ಜಿಲ್ಲೆಯ ಸಿರತು ಕ್ಷೇತ್ರದಲ್ಲಿ ಏಳು ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲು ಅನುಭವಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News