UP Election Result 2022: ಯುಪಿ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸುವ ಅಸಾದುದ್ದೀನ್ ಓವೈಸಿ (Asaduddin Owaisi) ಅವರ ನಿರ್ಧಾರ ಸರಿಯಾಗಿಲ್ಲ ಎಂದು ಸಾಬೀತಾಗಿದೆ. ಈ ಚುನಾವಣೆಗಳಲ್ಲಿ ಯುಪಿಯ ಜನರು ಓವೈಸಿಯವರ ಪಕ್ಷವಾದ AIMIM ಅನ್ನು ಪ್ರಬಲವಾಗಿ ತಿರಸ್ಕರಿಸಿದ್ದಾರೆ.
ಶೇಕಡಾ ಅರ್ಧಕ್ಕಿಂತ ಕಡಿಮೆ ಮತಗಳನ್ನು ಪಡೆದ ಪಕ್ಷ
ಗುರುವಾರ ಪ್ರಕಟವಾದ ಚುನಾವಣಾ ಫಲಿತಾಂಶದಲ್ಲಿ (Five State Assembly Elections 2022 Results) AIMIMನ ಬಹುತೇಕ ಅಭ್ಯರ್ಥಿಗಳು 5 ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಸಂಜೆ 4 ಗಂಟೆಯವರೆಗೆ ನಡೆದ ಮತ ಎಣಿಕೆಯಲ್ಲಿ ಓವೈಸಿ ಅವರ ಪಕ್ಷವು ಯುಪಿಯಲ್ಲಿ ಶೇಕಡಾ ಅರ್ಧಕ್ಕಿಂತ ಕಡಿಮೆ ಮತಗಳನ್ನು ಪಡೆದಿರುವುದು ಕಂಡುಬಂದಿದೆ.
ಅಭ್ಯರ್ಥಿಗಳು 5 ಸಾವಿರಕ್ಕೂ ತಲುಪಿಲ್ಲ
ಚುನಾವಣಾ ಆಯೋಗದ ಪ್ರಕಾರ, ಸಂಜೆ 4 ಗಂಟೆಯವರೆಗೆ, AIMIM ಅಭ್ಯರ್ಥಿಗಳಾದ ಕಮರ್ ಕಮಲ್ ಅಜಂಗಢದಿಂದ 1368 ಮತಗಳನ್ನು, ಉಮೈರ್ ಮದನಿ ಅವರು ದೇವ್ಬಂದ್ ಕ್ಷೇತ್ರದಿಂದ 3145 ಮತಗಳನ್ನು, ಜೌನ್ಪುರದಿಂದ ಅಭಯರಾಜ್ಗೆ 1340 ಮತಗಳನ್ನು ಮತ್ತು ಕಾನ್ಪುರ ಕ್ಯಾಂಟ್ನಿಂದ ಮುಯಿನುದ್ದೀನ್ 754 ಮತಗಳನ್ನು ಪಡೆದಿದ್ದಾರೆ. ಇದೇ ರೀತಿ, ಸಲ್ಮಾನ್ ಲಕ್ನೋ ಸೆಂಟ್ರಲ್ನಿಂದ 463, ಮೊರಾದಾಬಾದ್ನಿಂದ ಬಾಕಿ ರಶೀದ್ಗೆ 1266, ಮೀರತ್ನಿಂದ ಇಮ್ರಾನ್ ಅಹ್ಮದ್ಗೆ 2405, ಮೊರಾದಾಬಾದ್ ಗ್ರಾಮಾಂತರದಿಂದ ಮೊಹೀದ್ ಫರ್ಗಾನಿಗೆ 1771 ಮತ್ತು ನಿಜಾಮಾಬಾದ್ನಿಂದ ಅಬ್ದುರ್ ರೆಹಮಾನ್ ಅನ್ಸಾರಿಗೆ 2116 ಮತಗಳು ಬಂದಿವೆ. ಮುಜಾಫರ್ ನಗರದಿಂದ ಮೊಹಮ್ಮದ್. ಇಂತೇಜಾರ್ 2642, ಸಂದಿಲದಿಂದ ಮೊ.ರಫೀಕ್ 1363, ತಾಂಡಾದಿಂದ ಇರ್ಫಾನ್ 4886, ಸಿರತುದಿಂದ ಯಾರ್ ಮೊಹಮ್ಮದ್ 571 ಮತ್ತು ಬಹ್ರೈಚ್ ನಿಂದ ರಶೀದ್ ಜಮೀಲ್ 1747 ಮತ ಪಡೆದಿದ್ದಾರೆ.
ಇದನ್ನೂ ಓದಿ-ಪಂಚರಾಜ್ಯಗಳ ಚುನಾವಣೆ; ಕಾಂಗ್ರೆಸ್ ಗೆ ಸರಣಿ ಸೋಲು: ರಾಜ್ಯ ಕೈ ನಾಯಕರಿಗೆ ಎಚ್ಚರಿಕೆಯ ಗಂಟೆ!
ಓವೈಸಿ ಯುಪಿಯಲ್ಲಿ 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು
ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ, AIMIM ಯುಪಿಯಲ್ಲಿ ಇದುವರೆಗೆ ಶೇಕಡಾ 0.43 ಮತಗಳನ್ನು ಪಡೆದಿದೆ. ಯುಪಿ ವಿಧಾನಸಭಾ ಚುನಾವಣೆಯಲ್ಲಿ AIMIM ಒಟ್ಟು 100 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿಕೊಂಡಿತ್ತು. ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಓವೈಸಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಯುಪಿಯ ಮುಸ್ಲಿಮರು ಸೇರಿದಂತೆ ಸಾಮಾನ್ಯ ಮತದಾರರು ಅವರನ್ನು ತೀವ್ರವಾಗಿ ತಿರಸ್ಕರಿಸಿದ್ದಾರೆ ಎಂಬುದು ಗುರುವಾರ ಹೊರಬಿದ್ದ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಇದನ್ನೂ ಓದಿ-ಪಂಚರಾಜ್ಯ ಫಲಿತಾಂಶ.. ಆತ್ಮಾವಲೋಕನಕ್ಕೆ ಶೀಘ್ರದಲ್ಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ!
2017ರಲ್ಲಿ 37 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.
ಅಸಾದುದ್ದೀನ್ ಓವೈಸಿ ಅವರು 2017 ರ ಯುಪಿ ವಿಧಾನಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಆ ಸಮಯದಲ್ಲಿ ಅವರು ರಾಜ್ಯದ 38 ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಈ ಪೈಕಿ 37 ಸ್ಥಾನಗಳಲ್ಲಿ ಅವರ ಅಭ್ಯರ್ಥಿಗಳು ಡಿಪಾಸಿಟ್ ಕಳೆದುಕೊಂಡಿದ್ದರು. ಈ ಬಾರಿಯೂ ಅವರ ಬಹುತೇಕ ಅಭ್ಯರ್ಥಿಗಳು 5 ಸಾವಿರ ಮತಗಳಿಗಿಂತ ಕಡಿಮೆಯೇ ಇದ್ದಾರೆ.
ಇದನ್ನೂ ಓದಿ-Old ನಿಂದ Obsolete ಅಂಚಿನಲ್ಲಿ Congress ಪಕ್ಷ, ಗಾಂಧಿ ಕುಟುಂಬಕ್ಕೂ ಮುಂದೆ ಹೋಗಿ ಯೋಚಿಸಬೇಕಿದೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.