ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಫ್ರೆಂಚ್ ರಾಷ್ಟ್ರಪತಿ ಅಮೆನುಯೆಲ್ ಮ್ಯಾಕ್ರೋನ್ ಅವರನ್ನು ವಿಶ್ವಸಂಸ್ಥೆಯ ಅತ್ಯುನ್ನತ ಗೌರವ ನೀಡಿ ಗೌರವಿಸಲಾಗುತ್ತಿದೆ. ಪ್ರಧಾನಿ ಮೋದಿ ಮತ್ತು ಫ್ರೆಂಚ್ ರಾಷ್ಟ್ರಪತಿ ಅಮೆನುಯೆಲ್ ಮ್ಯಾಕ್ರೋನ್ ಪಾಲಿಸಿ ಲೀಡರ್ಶಿಪ್ ವಿಭಾಗದಲ್ಲಿ 'ಚಾಂಪಿಯನ್ ಆಫ್ ದಿ ಅರ್ಥ್' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ಪ್ರಮುಖ ಕೃತಿಗಳಿಗಾಗಿ ಪ್ರಧಾನಿ ಮೋದಿ ಮತ್ತು ಫ್ರಾನ್ಸ್ ರಾಷ್ಟ್ರಪತಿ ಅಮೆನುಯೆಲ್ ಮ್ಯಾಕ್ರೋನ್ ಅವರಿಗೆ ಈ ಗೌರವ ನೀಡಲಾಗಿದೆ.
ಈ ಗೌರವಾರ್ಥ ಘೋಷಣೆಯ ಕುರಿತು, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಪ್ರಧಾನಿ ಮೋದಿ ಯುಎನ್ 'ಚಾಂಪಿಯನ್ ಆಫ್ ದಿ ಅರ್ತ್' ಪ್ರಶಸ್ತಿಯನ್ನು ಪಡೆದಿದ್ದಾರೆ ಎಂಬುದು ಪ್ರತಿ ಭಾರತೀಯರಿಗೂ ಹೆಮ್ಮೆಯ ವಿಷಯವೆಂದು ಹೇಳಿದ್ದಾರೆ. ಯುಎನ್ನ ಈ ಅತ್ಯುನ್ನತ ಗೌರವವು ಬದಲಾವಣೆ ಪರಿಣಾಮ ಬೀರುವ ಪ್ರಯತ್ನದ ಜನರಿಗೆ ನೀಡಲಾಗಿದೆಯೆಂದು ಶಾ ಹೇಳಿದರು.
It is a matter of great pride for every Indian that PM @narendramodi has been awarded the UN Champions of the Earth Award in the Policy Leadership category. This is the UN’s highest recognition for people whose actions have had a transformative impact on the environment.
— Amit Shah (@AmitShah) September 26, 2018
ಪರಿಸರಕ್ಕೆ ಜಾಗತಿಕ ಒಪ್ಪಂದಕ್ಕಾಗಿ ಫ್ರೆಂಚ್ ರಾಷ್ಟ್ರಪತಿ ಅಮೆನುಯೆಲ್ ಮ್ಯಾಕ್ರೋಸ್ ಅವರಿಗೆ ಹಾಗೂ 2022 ರ ಹೊತ್ತಿಗೆ ಪ್ಲ್ಯಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಪ್ರತಿಜ್ಞೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು.
ವಾಣಿಜ್ಯೋದ್ಯಮ ವಿಷನ್ ವಿಭಾಗದಲ್ಲಿ ಕೊಚಿನ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಪ್ರಶಸ್ತಿ ಪಡೆದುಕೊಂಡಿದೆ. "ಸಮರ್ಥನೀಯ ಶಕ್ತಿಯ ಬಳಕೆ" ನಾಯಕತ್ವಕ್ಕಾಗಿ ಈ ವಿಮಾನ ನಿಲ್ದಾಣವನ್ನು ಪ್ರಶಂಸಿಸಲಾಯಿತು. ಸಮಾಜದ ವೇಗವು ಹೆಚ್ಚಾಗುವುದರಿಂದ, ವಿಶ್ವದ ಮೊದಲ ಪೂರ್ಣ ಸೌರಶಕ್ತಿಚಾಲಿತ ವಿಮಾನನಿಲ್ದಾಣವು ಗ್ರೀನ್ ಬಿಸಿನೆಸ್ ಉತ್ತಮ ವ್ಯವಹಾರವಾಗಿದೆ ಎಂದು ಸಾಬೀತಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.