ನವದೆಹಲಿ: ಮೈಸೂರಿನ ನಂಜನಗೂಡು ತಾಲೂಕಿನ ಹಾರೋಪುರದ ಸರ್ಕಾರಿ ಶಾಲೆ ಗೋಡೆಗೆ ರೈಲಿನ ಮಾದರಿಯಲ್ಲಿ ಚಿತ್ರ ಬಿಡಿಸಿದ್ದ ಫೋಟೊ ಕಳೆದ ವಾರ ಸಾಕಷ್ಟು ಸುದ್ದಿಮಾಡಿತ್ತು. ಇದೀಗ ಆ ಶಾಲೆಗೆ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
"ಸರ್ಕಾರಿ ಶಾಲೆಗೆ ರೈಲ್ವೆ ಭೋಗಿಯಂತೆ ಬಣ್ಣ ಬಳಿದಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದ ಮಕ್ಕಳು ಶಾಲೆ ಬಿಡುವುದು ಕಡಿಮೆಯಾಗುತ್ತದೆ. ಅಲ್ಲದೆ, ಪ್ರತಿನಿತ್ಯ ಮಕ್ಕಳು ಶಾಲೆಗೆ ಉತ್ಸುಕರಾಗಿ ಬರುತ್ತಾರೆ" ಎಂದು ಕೇಂದ್ರ ರೈವ್ಲೇ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ.
The innovative idea of painting a Govt. school to look like a 'train coach' is truly commendable. It has helped in securing full attendance from students who were irregular to classes & dropping out from the school.https://t.co/gtntmo910m pic.twitter.com/tlMRLjoDAH
— Piyush Goyal (@PiyushGoyal) July 16, 2018
ಸರ್ಕಾರಿ ಶಾಲೆಗಳ ಬಗ್ಗೆ ಮಕ್ಕಳ ಆಸಕ್ತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಮರಳಿ ಶಾಲೆಯತ್ತ ಸೆಳೆಯಲು ಅಲ್ಲಿನ ಶಿಕ್ಷಕ ವರ್ಗ ಈ ಉಪಾಯ ಮಾಡಿದೆ. ಈ ಶಾಲೆಯ ಮೂರು ಕೊಠಡಿಗಳಿಗೆ ಇಂಜಿನ್, ಬೋಗಿಗಳ ಮಾದರಿಯಲ್ಲಿ ಪೇಂಟಿಂಗ್ ಮಾಡಲಾಗಿದೆ. ಒಂದರಿಂದ ಏಳನೇ ತರಗತಿವರೆಗೆ ಒಟ್ಟು 55 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.