ಎಸ್ಸಿ /ಎಸ್ಟಿ ಕಾಯ್ದೆ: ಸುಪ್ರಿಂ' ಆದೇಶ ತಿರಸ್ಕರಿಸಲು ಕೇಂದ್ರದ ಒಪ್ಪಿಗೆ

   

Last Updated : Aug 1, 2018, 07:46 PM IST
ಎಸ್ಸಿ /ಎಸ್ಟಿ ಕಾಯ್ದೆ: ಸುಪ್ರಿಂ' ಆದೇಶ ತಿರಸ್ಕರಿಸಲು ಕೇಂದ್ರದ ಒಪ್ಪಿಗೆ title=

ನವದೆಹಲಿ: ದಲಿತ ಸಂಘಟನೆಗಳು 9 ರಂದು ರಾಷ್ಟ್ರಾದ್ಯಂತ ಬಂದ್ ನೀಡುವ ಹಿನ್ನಲೆಯಲ್ಲಿ ಬುಧವಾರದಂದು ಕೇಂದ್ರ ಸಚಿವ ಸಂಪುಟ ಸಂಸತ್ತಿನಲ್ಲಿ ನಡೆಯುವ ಮಾನ್ಸೂನ್ ಅಧಿವೇಶನದಲ್ಲಿ ಪ.ಜಾತಿ ಮತ್ತು ಪ.ಪಂಗಡ (ಹಲ್ಲೆ ತಡೆಗಟ್ಟುವಿಕೆ )ಮಸೂದೆಯನ್ನು ಕಾಯ್ದೆ ಮೂಲ ನಿಬಂಧನೆಗಳನ್ವಯ ಪುನಃಸ್ಥಾಪಿಸಲು ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ದಲಿತ ಸಂಘಟನೆಗಳು ಮತ್ತು ಎಲ್ಜೆಪಿ (ಲೋಕ ಜನಶಕ್ತಿ ಪಾರ್ಟಿ) ಪಕ್ಷವು ಕೇಂದ್ರ ಸರ್ಕಾರಕ್ಕೆ ಗಡುವನ್ನು ನೀಡಿತ್ತು.  ಈ ಹಿನ್ನಲೆಯಲ್ಲಿ ಈಗ ದಲಿತ ಸಂಘಟನೆಗಳ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಈ ಹಿಂದಿನ ಕಾಯ್ದೆಯನ್ನೇ ಮುಂದುವರೆಸಿಕೊಂಡು ಹೋಗುವ ನಿರ್ಧಾರವನ್ನು ಬಂಧಿದೆ.

ಬಿಜೆಪಿ ಮೈತ್ರಿ ಪಕ್ಷವಾಗಿರುವ ಲೋಕ ಜನಶಕ್ತಿ ಪಕ್ಷವು ಮತ್ತು ದಲಿತ ಸಂಘಟನೆಗಳು ಈ ವಿಚಾರವಾಗಿ ಆಗಸ್ಟ್ 9 ರಂದು  'ಭಾರತ್ ಬಂಧ್' ಗೆ ಕರೆ ನೀಡಿದ್ದವು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (ಎನ್ಜಿಟಿ) ಅಧ್ಯಕ್ಷರಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಕೆ. ಗೋಯಲ್ ನೇಮಕಕ್ಕೆ ಸಹ ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. 

ಸುಪ್ರೀಂ ಕೋರ್ಟ್ ಮಾರ್ಚ್ 20 ರ ತೀರ್ಪಿನಲ್ಲಿ ಎಸ್ಸಿ / ಎಸ್ಟಿ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತಕ್ಷಣ ಬಂಧನಕ್ಕೊಳಪಡುವ ಅಂಶವನ್ನು ರದ್ದುಪಡಿಸಿತ್ತು. ಈ  ಕಾಯ್ದೆ ಪ್ರಮುಖವಾಗಿ ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ಹಲ್ಲೆಗಳಂತಹ ಘಟನೆಗಳಿಂದ ರಕ್ಷಿಸಲಿದೆ.
 

Trending News