Aadhaar Alert: ಆಧಾರ್ ಕಾರ್ಡ್ ಗೆ ಸಂಭಂದಿಸಿದಂತೆ ಹೊಸ ಸೇವೆ ಆರಂಭಿಸಿದ UIDAI

ಯುಐಡಿಎಐ ಆಧಾರ್ ಗೆ ಸಂಬಂಧಿಸಿದ ಕೆಲವು ಹೊಸ ಸೇವೆಗಳನ್ನು ಪ್ರಾರಂಭಿಸಿದೆ, ಅದನ್ನು ನೀವು ಎಸ್ಎಂಎಸ್ ಮೂಲಕ ಪಡೆಯಬಹುದು. ಇದಕ್ಕಾಗಿ ನೀವು ಇಂಟರ್ನೆಟ್‌ನ ಯುಐಡಿಎಐ ವೆಬ್‌ಸೈಟ್ ತೆರೆಯುವ ಅಗತ್ಯವಿಲ್ಲ ಅಥವಾ ಆಧಾರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿಲ್ಲ. ಇದಕ್ಕಾಗಿ ಸ್ಮಾರ್ಟ್‌ಫೋನ್ ಅಗತ್ಯವಿಲ್ಲ, ಇಂಟರ್ನೆಟ್ ಸೌಲಭ್ಯವನ್ನು ಹೊಂದಿರದ ಸರಳ ಫೀಚರ್ ಫೋನ್‌ನಿಂದಲೂ ಯಾರಾದರೂ ಈ ಸೇವೆಗಳನ್ನು ಪಡೆಯಬಹುದು.

Written by - Channabasava A Kashinakunti | Last Updated : Jul 16, 2021, 11:14 AM IST
  • ಯುಐಡಿಎಐ ಆಧಾರ್ ಗೆ ಸಂಬಂಧಿಸಿದ ಕೆಲವು ಹೊಸ ಸೇವೆಗಳನ್ನು ಪ್ರಾರಂಭ
  • ನೀವು ಎಸ್ಎಂಎಸ್ ಮೂಲಕ ಹೊಸ ಸೇವೆಗಳನ್ನು ಪಡೆಯಬಹುದು
  • ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಸಹಾಯವಾಣಿ ಸಂಖ್ಯೆ 1947 ಗೆ ಎಸ್‌ಎಂಎಸ್
Aadhaar Alert: ಆಧಾರ್ ಕಾರ್ಡ್ ಗೆ ಸಂಭಂದಿಸಿದಂತೆ ಹೊಸ ಸೇವೆ ಆರಂಭಿಸಿದ UIDAI title=

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರತಿ ಸಣ್ಣ ಹಳ್ಳಿ ಮತ್ತು ಪಟ್ಟಣಗಳಿಗೆ ಇಂಟರ್ನೆಟ್ ತಲುಪಿದೆ. ಅಗ್ಗದ ಇಂಟರ್ನೆಟ್ ಡೇಟಾ ಮತ್ತು ಮೊಬೈಲ್ ಫೋನ್‌ಗಳ ಕಾರಣದಿಂದಾಗಿ, ಸ್ಮಾರ್ಟ್‌ಫೋನ್‌ಗಳು ಈಗ ಎಲ್ಲರ ಕೈಯಲ್ಲಿ ಬಂದಿವೆ. ಪ್ರತಿಯೊಂದು ಮಾಹಿತಿ ಬೆರಳ ತುದಿಯಲ್ಲಿ ಸಿಗುತ್ತಿದೆ. ಇಷ್ಟೆಲ್ಲಾ ಇದ್ರೂ, ಇಂಟರ್ನೆಟ್ ಬಗ್ಗೆ ತಿಳಿಯದ ತುಂಬಾ ಜನರಿದ್ದಾರೆ. ಇಂತಹ ಜನರಿಗೆ, ಯುಐಡಿಎಐ ಅನೇಕ ಹೊಸ ಸೌಲಭ್ಯಗಳನ್ನು ಒದಗಿಸುತ್ತಿದೆ.

ಯುಐಡಿಎಐನ ಹೊಸ ಎಸ್ಎಂಎಸ್ ಸೌಲಭ್ಯ :

ಯುಐಡಿಎಐ(UIDAI) ಆಧಾರ್ ಗೆ ಸಂಬಂಧಿಸಿದ ಕೆಲವು ಹೊಸ ಸೇವೆಗಳನ್ನು ಪ್ರಾರಂಭಿಸಿದೆ, ಈ ಸೇವೆಯನ್ನ ನೀವು ನಿಮ್ಮ ಮೊಬೈಲ್ ಎಸ್ಎಂಎಸ್ ಮೂಲಕ ಪಡೆಯಬಹುದು. ಇದಕ್ಕಾಗಿ ನೀವು ಇಂಟರ್ನೆಟ್‌ನ ಯುಐಡಿಎಐ ವೆಬ್‌ಸೈಟ್ ಗೆ ಹೋಗುವ ಅಗತ್ಯವಿಲ್ಲ ಅಥವಾ ಆಧಾರ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿಲ್ಲ. ಇದಕ್ಕಾಗಿ ಸ್ಮಾರ್ಟ್‌ಫೋನ್ ಅಗತ್ಯವಿಲ್ಲ, ಇಂಟರ್ನೆಟ್ ಸೌಲಭ್ಯವನ್ನು ಹೊಂದಿರದ ಸರಳ ಫೀಚರ್ ಫೋನ್‌ನಿಂದಲೂ ಯಾರಾದರೂ ಈ ಸೇವೆಗಳನ್ನು ಪಡೆಯಬಹುದು.

ಇದನ್ನೂ ಓದಿ : Navjot Singh Sidhu : ಕಾಂಗ್ರೆಸ್ ಗೆದ್ದರೆ ಸಿಧು ಮುಂದಿನ ಪಂಜಾಬ್ ಸಿಎಂ!

ಈ ಸೇವೆಯೊಂದಿಗೆ, ಬಳಕೆದಾರರು ಆಧಾರ್‌ಗೆ ಸಂಬಂಧಿಸಿದ ಅನೇಕ ಸೇವೆಗಳನ್ನು ಪಡೆಯಬಹುದು, ಉದಾಹರಣೆಗೆ ವರ್ಚುವಲ್ ಐಡಿ (VID) ಪಡೆಯಲು ಅಥವಾ ರೀ ಪ್ರಿಂಟ್ ಪಡೆಯಲು ಮತ್ತು ಆಧಾರ್ ಕಾರ್ಡ್ ಅನ್ನು ಲಾಕ್ ಅಥವಾ ಅನ್ಲಾಕ್ ಮಾಡುವುದು, ಬಯೋಮೆಟ್ರಿಕ್ ಲಾಕಿಂಗ್ ಮತ್ತು ಅನ್ಲಾಕಿಂಗ್ ಮಾಡಬೇಕಾದುದೆಂದರೆ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಿಂದ ಸಹಾಯವಾಣಿ ಸಂಖ್ಯೆ 1947 ಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ನಿಮಗೆ ಬೇಕಾದ ಯಾವುದೇ ಸೌಲಭ್ಯ ಅಥವಾ ಸೇವೆಗಳನ್ನ ನೀವು ಅಪಡೆಯಬಹುದು.

ಇದನ್ನೂ ಓದಿ : COVID Third Wave: ಈ ತಿಂಗಳಿನಲ್ಲಿ ದೇಶಕ್ಕೆ ಅಪ್ಪಳಿಸಲಿದೆಯಂತೆ ಕರೋನಾ ಮೂರನೇ ಅಲೆ, ICMR ಹೇಳಿದ್ದೇನು?

ವರ್ಚುವಲ್ ಐಡಿಯನ್ನು ಹೇಗೆ ರಚಿಸುವುದು :

ವರ್ಚುವಲ್ ಐಡಿಯನ್ನು ಕ್ರಿಯೇಟ್ ಮಾಡಲು, ಮೊಬೈಲ್‌ನ ಮೆಸೇಜ್ ಬಾಕ್ಸ್ ಗೆ ಹೋಗಿ GVID (Space) ಮತ್ತು ನಿಮ್ಮ ಆಧಾರ್ ನಂಬರ್ (Aadhar Card)ಯ ಕೊನೆಯ 4 ಸಂಖ್ಯೆಗಳನ್ನ ನಮೂದಿಸಿ ಮತ್ತು ಅದನ್ನು 1947 ಸಂಖ್ಯೆಗೆ SMS ಕಳುಹಿಸಿ.

- ನಿಮ್ಮ ವಿಐಡಿ ಪಡೆಯಲು RVID (ಸ್ಪೇಸ್) ಎಂದು ಟೈಪ್ ಮಾಡಿ ಮತ್ತು ನಿಮ್ಮ ಆಧಾರ್ ನ ಕೊನೆಯ ನಾಲ್ಕು ಸಂಖ್ಯೆಗಳನ್ನ ನಮೂದಿಸಿ.

- ನೀವು ಒಟಿಪಿ(OTP)ಯನ್ನು ಎರಡು ರೀತಿಯಲ್ಲಿ ಪಡೆಯಬಹುದು. ಒಂದು ನಿಮ್ಮ ಆಧಾರ್ ಸಂಖ್ಯೆಯ ಮೂಲಕ, ಎರಡನೆಯದು ನಿಮ್ಮ ವಿಐಡಿ ಮೂಲಕ.

ಇದನ್ನೂ ಓದಿ : SBI ಎಚ್ಚರಿಕೆಯನ್ನು ನಿರ್ಲಕ್ಷಿಸಬೇಡಿ, ಇನ್‌ಬಾಕ್ಸ್‌ನಲ್ಲಿ ಬರುವ ಈ ಲಿಂಕ್‌ಗಳ ಬಗ್ಗೆ ಹುಷಾರಾಗಿರಿ

- ಆಧಾರ್‌ನಿಂದ ಒಟಿಪಿ ಪ್ರಕಾರ- GETOTP (ಸ್ಪೇಸ್) ಮತ್ತು ನಿಮ್ಮ ಆಧಾರ್‌ನ ಕೊನೆಯ ನಾಲ್ಕು ಸಂಖ್ಯೆಗಳನ್ನ ನಮೂದಿಸಿ.

- ವಿಐಡಿ ಟು ಒಟಿಪಿ ಪ್ರಕಾರಕ್ಕಾಗಿ - GETOTP (ಸ್ಪೇಸ್) ಮತ್ತು ನಿಮ್ಮ ಅಧಿಕೃತ ವರ್ಚುವಲ್ ID ಯ ಕೊನೆಯ 6 ಸಂಖ್ಯೆಗಳನ್ನ SMS ನಲ್ಲಿ ನಮೂದಿಸಿ

ಆಧಾರ್ ಅನ್ನು ಲಾಕ್ ಮಾಡಿ ಮತ್ತು ಅನ್ಲಾಕ್ ಮಾಡಿ :

ಕೇವಲ ಒಂದು SMS ಮೂಲಕ ನಿಮ್ಮ ಆಧಾರ್ ಅನ್ನು ನೀವು ಲಾಕ್(Aadhar Lock) ಮಾಡಬಹುದು ಅಥವಾ ಅನ್ಲಾಕ್ ಮಾಡಬಹುದು. ಇದರ ಪ್ರಯೋಜನವೆಂದರೆ ನಿಮ್ಮ ಆಧಾರ್ ಅನ್ನು ಯಾವುದೇ ವ್ಯಕ್ತಿಯು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ನಿಮಗೆ ಬೇಕಾದಾಗ ನೀವು ಅದನ್ನು ಲಾಕ್ ಮಾಡಬಹುದು ಮತ್ತು ನೀವು ಅದನ್ನು ಬಳಸಲು ಬಯಸಿದಾಗ ಅದನ್ನು ಅನ್ಲಾಕ್ ಮಾಡಬಹುದು. ನಿಮ್ಮ ಆಧಾರ್ ಅನ್ನು ಲಾಕ್ ಮಾಡಲು, ನೀವು ವಿಐಡಿ ಹೊಂದಿರಬೇಕು.

ಇದನ್ನೂ ಓದಿ : ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಹಿರಾನಗರ್ ಸೆಕ್ಟರ್‌ನಲ್ಲಿ ಡ್ರೋನ್ ಪತ್ತೆ, ಹೈಅಲರ್ಟ್ ಜಾರಿ

SMS ಮೂಲಕ ಲಾಕಿಂಗ್ ಪ್ರಕ್ರಿಯೆ : 

1. ಮೊದಲ SMS ನಲ್ಲಿ, TEXT ಗೆ ಹೋಗಿ GETOTP (SPACE) ಮತ್ತು ನಿಮ್ಮ ಆಧಾರ್ ಕೊನೆಯ ನಾಲ್ಕು ಸಂಖ್ಯೆಗಳನ್ನ ನಮೂದಿಸಿ.
2. ಒಟಿಪಿ ಪಡೆದ ಕೂಡಲೇ ಎರಡನೇ SMS ಕಳುಹಿಸಬೇಕು. ನಿಮ್ಮ ಆಧಾರ್ (SPACE) 6 ಅಂಕಿಯ OTP ಯ ಕೊನೆಯ 4 ಸಂಖ್ಯೆಗಳನ್ನ ಈ LOCKUID (SPACE) ನಮೂದಿಸಿ

ಇದನ್ನೂ ಓದಿ : Online Education:ಮೊಬೈಲ್ ನೆಟ್ ವರ್ಕ್ ಗಾಗಿ ಬೆಟ್ಟವೆಲ್ಲಾ ಅಲೆದಾಡುವ ಕಾಶ್ಮೀರಿ ವಿದ್ಯಾರ್ಥಿಗಳು

SMS ಮೂಲಕ ಅನ್-ಲಾಕಿಂಗ್ ಪ್ರಕ್ರಿಯೆ : 

1: SMS ಗೆ ಹೋಗಿ GETOTP (SPACE) ಎಂದು ಟೈಪ್ ಮಾಡಿ ನಂತರ ನಿಮ್ಮ VID ಯ ಕೊನೆಯ 6 ಅಂಕೆಗಳನ್ನು ನಮೂದಿಸಿ.
2: ಅದರಲ್ಲಿ ಮತ್ತೊಂದು SMS ಕಳುಹಿಸಿ ನಿಮ್ಮ VID (SPACE) ನ ಕೊನೆಯ 6 ಅಂಕೆಗಳನ್ನು UNLOCK (SPACE) ಎಂದು ಬರೆಯಿರಿ 6 ಅಂಕಿಯ OTP ಅನ್ನು ನಮೂದಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News