ಟ್ರಕ್'ಗೆ ಢಿಕ್ಕಿ ಹೊಡೆದು ಹಳಿ ತಪ್ಪಿದ ರಾಜಧಾನಿ ಎಕ್ಸ್ ಪ್ರೆಸ್

ಹಜ್ರತ್ ನಿಜಾಮುದ್ದೀನ್-ತ್ರಿವೆಂಡ್ರಮ್ ರಾಜಧಾನಿ ಎಕ್ಸ್ಪ್ರೆಸ್ ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದೆ.

Last Updated : Oct 18, 2018, 11:43 AM IST
ಟ್ರಕ್'ಗೆ ಢಿಕ್ಕಿ ಹೊಡೆದು ಹಳಿ ತಪ್ಪಿದ ರಾಜಧಾನಿ ಎಕ್ಸ್ ಪ್ರೆಸ್ title=

ಭೋಪಾಲ್: ಮಧ್ಯಪ್ರದೇಶದ ಝಾಬುವಾ ಜಿಲ್ಲೆಯ ಥಾಂಡ್ಲಾ ಸಮೀಪ ಮೂಲಕ ಹಾದುಹೋಗುವ ವೇಳೆ ರೈಲ್ವೇ ಕ್ರಾಸಿಂಗ್ ಬಳಿ ಗೂಡ್ಸ್ ಟ್ರಕ್ ಗೆ ಹಜ್ರತ್ ನಿಜಾಮುದ್ದೀನ್-ತ್ರಿವೆಂಡ್ರಮ್ ರಾಜಧಾನಿ ಎಕ್ಸ್ಪ್ರೆಸ್ ರೈಲು ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಟ್ರಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.

ಗುರುವಾರ ಬೆಳಗ್ಗೆ ಹಜ್ರತ್ ನಿಜಾಮುದ್ದೀನ್-ತ್ರಿವೆಂಡ್ರಮ್ ರಾಜಧಾನಿ ಎಕ್ಸ್ಪ್ರೆಸ್ನ B7 ಮತ್ತು B8 ಕೋಚ್ ಗಳು ಹಳಿತಪ್ಪಿವೆ. ಆದಾಗ್ಯೂ, ಯಾವುದೇ ಪ್ರಯಾಣಿಕರಿಗೆ ಗಾಯಗಳಾದ ಬಗ್ಗೆ  ವರದಿಯಾಗಿಲ್ಲ.

ಎಲ್ಲಾ ಪ್ರಯಾಣಿಕರನ್ನು ಇತರ ಕೋಚ್ ಗಳಿಗೆ ಸ್ಥಳಾಂತರಿಸಲಾಗಿದೆ. ಈ ಘಟನೆಯು ಸುಮಾರು 6.44 ರ ವೇಳೆಗೆ ಸಂಭವಿಸಿದೆ ಎಂದು ರೈಲ್ವೆ ಸಚಿವಾಲಯದ ಮಾಧ್ಯಮ ಮತ್ತು ಸಾಂಸ್ಥಿಕ ಸಂವಹನ ನಿರ್ದೇಶಕ ರಾಜೇಶ್ ದತ್ ಬಾಜ್ಪೈ ಹೇಳಿದರು.

Trending News