ನವದೆಹಲಿ: ಟಿವಿಎಸ್ ಮೋಟರ್ಸ್ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಕ್ರಯೋನ್ ಅನ್ನು ಪರಿಚಯಿಸುವ ಪರಿಕಲ್ಪನೆ ಹೊಂದಿತ್ತು. ಟಿವಿಎಸ್ ಕ್ರಯಾನ್ 5.1 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0 ರಿಂದ 60 ಕಿಲೋಮೀಟರುಗಳಷ್ಟು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ಕೂಟರಿನ ಬ್ಯಾಟರಿ 60 ನಿಮಿಷಗಳಲ್ಲಿ 80 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ ಎಂದು ಕಂಪನಿ ತಿಳಿಸಿದೆ. ಈ ವಾಹನವು ಲಿಥಿಯಂ-ಆಯನ್ ಬ್ಯಾಟರಿಯನ್ನು ಹೊಂದಿದೆ. ಇದು 12 ಕಿಲೋವ್ಯಾಟ್ ತ್ವರಿತ ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಪ್ರಬಲ ಸ್ಕೂಟರ್
ಕಂಪನಿಯ ಪ್ರಕಾರ, ಈ ಹೊಸ ಸ್ಕೂಟರ್ ಒಂದು ಕಾರ್ಯಕ್ಷಮತೆ-ಆಧಾರಿತ ವಿದ್ಯುತ್ ಪರಿಕಲ್ಪನೆಯ ಸ್ಕೂಟರ್ ಆಗಿದೆ. ಟಿವಿಎಸ್ ಅನ್ನು ಕ್ರಿಯೋನ್ ಆಗಿ ಪರಿಚಯಿಸಲಾಗಿದೆ. ಕಂಪನಿಯು ಅದನ್ನು ಒಂದು ಪ್ರಬಲ ಸಾಮರ್ಥ್ಯವುಳ್ಳ ಸ್ಕೂಟರ್ ಎಂದು ತಿಳಿಸಿದೆ.
ಟಿವಿಎಸ್ ಕ್ರಯಾನ್ ಪ್ರತಿ ಗಂಟೆಗೆ 60 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆ. ಅದೇ ಸಮಯದಲ್ಲಿ, ಸ್ಕೂಟರ್ ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ 80 ಕಿಲೋಮೀಟರ್ಗಳಷ್ಟು ಪ್ರಯಾಣಿಸಬಹುದು ಎಂದು ಕಂಪನಿ ತಿಳಿಸಿದೆ.
ಒಂದು ಗಂಟೆಯಲ್ಲಿ ಫುಲ್ ಚಾರ್ಜ್
ಕಂಪನಿಯ ಪ್ರಕಾರ, ಈ ವಿದ್ಯುತ್ ಸ್ಕೂಟರ್ ಕೇವಲ ಒಂದು ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ವಿಶೇಷವೆಂದರೆ ಈ ಸ್ಕೂಟರ್ ಪರಿಸರಕ್ಕೆ ಹಾನಿಕಾರಕವಲ್ಲ.
ಸ್ಕೂಟರ್ ವೈಶಿಷ್ಟ್ಯ
ಟಿವಿಎಸ್ ಕ್ರಯಾನ್ ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಈ ಸ್ಕೂಟರ್ ಒಂದು ಟಿಎಫ್ಟಿ ಸ್ಕ್ರೀನ್ ಅನ್ನು ಹೊಂದಿದೆ. ಇದು ಬಳಕೆದಾರರ ಸ್ಮಾರ್ಟ್ಫೋನ್ನಲ್ಲಿನ ಅಪ್ಲಿಕೇಶನ್ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಪರದೆಯಲ್ಲಿ ಎಲ್ಲಾ ಅಗತ್ಯ ಮಾಹಿತಿ ಇರುತ್ತದೆ. ಟಿವಿಎಸ್ ಕ್ಲೌಡ್ ಕನೆಕ್ಟಿವಿಟಿ ಸಂಪರ್ಕ, ಮೂರು ಪ್ರತ್ಯೇಕ ಸವಾರಿ ವಿಧಾನಗಳು, ರೀ ಜನರೆಟಿವ್ ಬ್ರೇಕಿಂಗ್ ಸಾಮರ್ಥ್ಯ, ಪಾರ್ಕ್ ಅಸಿಸ್ಟ್, Anti-theft feature, ಜಿಪಿಎಸ್ ಸಂಚರಣೆ ಮತ್ತು ಜಿಯೋ-ಫೆನ್ಸಿಂಗ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.
ಎಬಿಎಸ್ ಸಿಸ್ಟಮ್
ಟಿವಿಎಸ್ ಕ್ರಯಾನ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು, ಹಿಂಭಾಗದಲ್ಲಿ ಎಬಿಎಸ್ ಅನ್ನು ನೀಡಲಾಗಿದೆ. ಈ ಸ್ಕೂಟರ್ ಹೆಲ್ಮೆಟ್ಗಳನ್ನು ಇಡಲು ಶೇಖರಣಾ ಸ್ಲಾಟ್ ಮತ್ತು ಸ್ಮಾರ್ಟ್ಫೋನ್ ಹೊಂದಿದೆ. ಕಂಪೆನಿಯು ವಾಹನದ ಕುರಿತಾದ ವ್ಯಾರಂಟಿ ಹಾಗೂ ಅದರ ಮಾರುಕಟ್ಟೆ ಬೆಲೆ ಕುರಿತು ಯಾವುದೇ ವಿವರಗಳನ್ನು ನೀಡಿಲ್ಲ.