ತ್ರಿಪುರಾ: ಪತ್ರಕರ್ತನ ಹತ್ಯೆ ಖಂಡಿಸಿ ಸಂಪಾದಕೀಯ ಖಾಲಿ ಬಿಟ್ಟ ಪತ್ರಿಕೆಗಳು!

    

Last Updated : Nov 23, 2017, 04:42 PM IST
ತ್ರಿಪುರಾ: ಪತ್ರಕರ್ತನ ಹತ್ಯೆ ಖಂಡಿಸಿ ಸಂಪಾದಕೀಯ ಖಾಲಿ ಬಿಟ್ಟ ಪತ್ರಿಕೆಗಳು! title=

ಅಗರ್ತಲಾ:  ಗುರುವಾರದಂದು ತ್ರಿಪುರಾದ ಬಹುತೇಕ ಪತ್ರಿಕೆಗಳು ಸಂಪಾದಕೀಯ ವಿಭಾಗವನ್ನು ಖಾಲಿ ಬಿಡುವ ಮೂಲಕ ಪತ್ರಕರ್ತ ಸುದೀಪ್ ದತ್ತಾ ಭೌಮಿಕ್ ಅವರ ಹತ್ಯೆಯನ್ನು ಸಾಂಕೇತಿಕವಾಗಿ ಪ್ರತಿಭಟಿಸಿದರು.

ಈ ವಿಷಯದ ಕುರಿತಾಗಿ ಮಾತನಾಡಿದ ತ್ರಿಪುರಾ ಟೈಮ್ಸ್ ನ ಸಂಪಾದಕರಾದ ಮಾನಸ್ ಪೌಲ್ ಈ ಸಾಂಸ್ಥಿಕ ಪ್ರತಿಭಟನೆಯ ಕುರಿತು ಹೇಳುವುದಾದರೆ ಇಂದು ನಮ್ಮ ಪತ್ರಿಕೆಗಳ ಸಂಪಾದಕೀಯ ಪುಟವನ್ನು ಖಾಲಿ ಬಿಟ್ಟಿದ್ದೇವೆ. ಇದು ಕಳೆದ ಎರಡು ತಿಂಗಳಲ್ಲಿ 2 ಪತ್ರಕರ್ತರ ಹತ್ಯೆ, ನಿಜಕ್ಕೂ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಾದ ವಿಷಯವೆಂದ ಅವರು ಇತ್ತೀಚಿಗೆ ಹೆಚ್ಚುತ್ತಿರುವ ಸರಣಿ ಪತ್ರಕರ್ತರ ಹತ್ಯೆಗಳ ಕುರಿತು ಈ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದರು.  

ಮಂಗಳವಾರದಂದು 48 ವರ್ಷದ ಸುದೀಪ್ ದತ್ತಾ ಭೌಮಿಕ್ ಮಧ್ಯಾನ 2 ಗಂಟೆಯ ಸುಮಾರಿಗೆ ಅಗರ್ತಲಾದ ಆರ್.ಕೆ.ನಗರದಲ್ಲಿರುವ ತ್ರಿಪುರಾ ಸ್ಟೇಟ್ ಬಟಾಲಿಯನ್ ಕೇಂದ್ರ ಕಚೇರಿಯಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು. ನಂತರ ತಪನ್ ದೆಬ್ಬರ್ಮಾ ಎನ್ನುವು ತ್ರಿಪುರಾ ಸ್ಟೇಟ್ ರೈಫಲ್ಸ್ ನ ಕಮಾಂಡೋವನ್ನು ಭೌಮಿಕ್ ಹತ್ಯೆಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು.

'ಸ್ಯಂದನ ಪತ್ರಿಕಾ' ದ ಸಂಪಾದಕರಾದ ಸುಭಾಲ್ ಡೇ ಹೇಳುವಂತೆ ಭೌಮಿಕ್ರನ್ನು ತಪನ್ ದೆಬ್ಬರ್ಮಾ ನಿಂದಲೇ ಹತ್ಯೆಮಾಡಲಾಗಿದೆ.ಏಕೆಂದರೆ ಭೌಮಿಕ್ ಅಧಿಕಾರಿಗಳ ಭ್ರಷ್ಟಾಚಾರದ ಕುರಿತಾಗಿ ಸರಣಿ ರೂಪದ ಲೇಖನಗಳನ್ನು ಅವರು ಪ್ರಕಟಿಸಿದ್ದರು ಎಂದು ಡೇ ತಿಳಿಸಿದರು. ಸ್ವತಃ ದೆಬ್ಬರ್ಮಾನೆ  ಭೌಮಿಕರನ್ನು  ಬಟಾಲಿಯನ್ನ ಕೇಂದ್ರ ಕಚೇರಿಗೆ ಕರೆದಿದ್ದು,ಮತ್ತು ಅವರಿಗೆ ಸಂಬಂಧಿಸಿದ ಮೊಬೈಲ್ ಪೋನ್ ಮಾತ್ರ ಕಣ್ಮರೆಯಾಗಿ,ಉಳಿದೆಲ್ಲಾ ಅವರ ಹಣದ ಬ್ಯಾಗ್ ಮತ್ತು ಪೆನ್ ಡ್ರೈವ್ ಗಳೆಲ್ಲವೂ ಸಿಕ್ಕಿರುವುದು  ಅನುಮಾನಾಸ್ಪದದಿಂದ ಕೂಡಿವೆ ಎಂದು ಈ ಸಂದರ್ಭದಲ್ಲಿ ಸಂಶಯ ವ್ಯಕ್ತಪಡಿಸಿದರು.

ಈ ಘಟನೆಯನ್ನು ಖಂಡಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಸಹಿತ ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಿದ್ದವು.ಈ ಘಟನೆಗೆ ಸಂಬಂಧಿಸಿದಂತೆ  ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ರವರು ರಾಜ್ಯ ಪೋಲಿಸ ನಿರ್ದೇಶಕರಿಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.ಈ ಹಿಂದೆ ಸೆಪ್ಟಂಬರ್ 20 ರಂದು ಟಿವಿ ಪತ್ರಕರ್ತ ಸಂತನು ಭೌಮಿಕ್ ಹತ್ಯೆಯಾಗಿದ್ದನು ನಾವಿಲ್ಲಿ ಸ್ಮರಿಸಬಹುದು.

 

 

Trending News