ನವದೆಹಲಿ: ಪಶ್ಚಿಮ ಬಂಗಾಳದ ದಿನಜಪುರ್ ದಲ್ಲಿ ಹದಿನೆಂಟು ವರ್ಷದ ಬುಡುಕಟ್ಟು ಸಮುದಾಯದ ಬುದ್ದಿಮಾಂಧ್ಯ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.
ಈ ಘಟನೆಯು ಫೆಬ್ರುವರಿ 17 ರಂದು ನಡೆದಿದ್ದು, ಆದರೆ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅತ್ಯಾಚಾರ ವೆಸಗಿದ ನಂತರ ಆ ಮಹಿಳೆಯು ಗ್ರಾಮದ ಸೇತುವೆ ಹತ್ತಿರ ಪ್ರಜ್ನಾಹಿನ ಸ್ಥಿತಿಯಲ್ಲಿ ಬಿದ್ದಿದ್ದಳು ಎಂದು ತಿಳಿದುಬಂದಿದೆ.
ಸದ್ಯ ಆ ಮಹಿಳೆಯು ಮಾಲ್ಡಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಪೊಲೀಸರು ಈ ಘಟನೆಯ ಕುರಿತಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಹೇಳಲಾಗಿದೆ.