ನಾಳೆ ಲೋಕಸಭಾ ಚುನಾವಣೆಗೆ ತೆರೆ; ಏಳನೇ ಹಂತದ ಚುನಾವಣೆ ವಿಶೇಷತೆಗಳೇನು?

ನಾಳೆ ಏಳನೇ ಹಾಗೂ ಅಂತಿಮ ಅಂತದ ಲೋಕಸಭಾ ಚುನಾವಣೆ ತೆರೆಬಿಳಲಿದೆ. ಪ್ರಧಾನಿ ನರೇಂದ್ರ ಮೋದಿಯವರ ವಾರಾಣಸಿ ಕ್ಷೇತ್ರ ಸೇರಿದಂತೆ 59 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.ಮೋದಿ ಈಗ ಎರಡನೇ ಬಾರಿಗೆ ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

Last Updated : May 18, 2019, 06:57 PM IST
 ನಾಳೆ ಲೋಕಸಭಾ ಚುನಾವಣೆಗೆ ತೆರೆ; ಏಳನೇ ಹಂತದ ಚುನಾವಣೆ ವಿಶೇಷತೆಗಳೇನು? title=
file photo

ನವದೆಹಲಿ: ನಾಳೆ ಏಳನೇ ಹಾಗೂ ಅಂತಿಮ ಅಂತದ ಲೋಕಸಭಾ ಚುನಾವಣೆ ತೆರೆಬಿಳಲಿದೆ. ಪ್ರಧಾನಿ ನರೇಂದ್ರ ಮೋದಿಯವರ ವಾರಾಣಸಿ ಕ್ಷೇತ್ರ ಸೇರಿದಂತೆ 59 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.ಮೋದಿ ಈಗ ಎರಡನೇ ಬಾರಿಗೆ ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಭಾನುವಾರದಂದು ಪಂಜಾಬ್ ನ ಎಲ್ಲ 13 ಕ್ಷೇತ್ರ, ಉತ್ತರ ಪ್ರದೇಶದಲ್ಲಿ 9, ಪಶ್ಚಿಮ ಬಂಗಾಳದಲ್ಲಿ 9, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ 8, ಹಿಮಾಚಲ ಪ್ರದೇಶದಲ್ಲಿ 4, ಜಾರ್ಖಂಡ್ ದಲ್ಲಿ 3,  ಹಾಗೂ ಚಂಡೀಗಢದಲ್ಲಿ ಏಕೈಕ ಸ್ಥಾನಕ್ಕಾಗಿ ಮತದಾನ ನಡೆಯಲಿದೆ.ನಾಳೆ ದಿನ 901 ಅಭ್ಯರ್ಥಿಗಳ ಭವಿಷ್ಯವನ್ನು 10.01 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.ಇದಕ್ಕಾಗಿ ಚುನಾವಣಾ ಆಯೋಗವು 1.12 ಲಕ್ಷ ಮತದಾನ ಕೇಂದ್ರಗಳನ್ನು ಸ್ಥಾಪಿಸಿದೆ.

ಭಾನುವಾರದಂದು ಮಾರ್ಚ್ ನಲ್ಲಿ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರ ಅಕಾಲಿಕ ಮರಣದಿಂದಾಗಿ ಖಾಲಿ ಇರುವ ಪಣಜಿ ಕ್ಷೇತ್ರಕ್ಕಾಗಿ ಉಪ ಚುನಾವಣೆ ನಡೆಯಲಿದೆ. ಇದೇ ವೇಳೆ ತಮಿಳುನಾಡಿನ ಸುಲೂರ್, ಅರಾವುಕುರಿಚಿ, ಒಟ್ಟಪಿದರ್ಶಂ (ಎಸ್ಸಿ) ಮತ್ತು ತಿರುಪರಾಂಕುಂದ್ರಾಮ್ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕೂಡ ಉಪಚುನಾವಣೆ ನಡೆಯಲಿದೆ. 

ಕಳೆದ ಆರು ಹಂತಗಳಲ್ಲಿ ಸರಾಸರಿ 66.88 ಮತದಾರರು ಮತವನ್ನು ಚಲಾಯಿಸಿದ್ದಾರೆ. ಚುನಾವಣಾ ಆಯೋಗವು ಎಲ್ಲ ಹಂತಗಳ ಚುನಾವಣೆ ಪ್ರಕ್ರಿಯೆ ನಡೆಯಲು 38 ದಿನಗಳನ್ನು ತೆಗೆದುಕೊಂಡಿದೆ.ಮೇ 23 ರಂದು ಮತ ಎಣಿಕೆ ನಡೆಯಲಿದೆ.

Trending News