TMC Party: ಪ. ಬಂಗಾಳ ಚುನಾವಣೆಯ ಸ್ಲೋಗನ್ ಬಿಡುಗಡೆ ಮಾಡಿದ ಟಿಎಂಸಿ..!

ತೀವ್ರ ಜಿದ್ದಾಜಿದ್ದಿ ಕಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಆಡಳಿತಾರೂಢ ಟಿಎಂಸಿ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.

Last Updated : Feb 20, 2021, 06:22 PM IST
  • ಇನ್ನೇನು ಕೆಲವೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದೆ
  • ತೀವ್ರ ಜಿದ್ದಾಜಿದ್ದಿ ಕಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಆಡಳಿತಾರೂಢ ಟಿಎಂಸಿ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.
  • ಹಿನ್ನೆಲೆಯಲ್ಲಿ ಈ ಸಾರಿ ಚುನಾವಣೆಯ ಸ್ಲೋಗನ್ ಬಿಡುಗಡೆ ಮಾಡಿರುವ ಟಿಎಂಸಿ, ಬಿಜೆಪಿಗೆ ಎದಿರೇಟು ನೀಡಿದೆ.
TMC Party: ಪ. ಬಂಗಾಳ ಚುನಾವಣೆಯ ಸ್ಲೋಗನ್ ಬಿಡುಗಡೆ ಮಾಡಿದ ಟಿಎಂಸಿ..! title=

ಕಲ್ಕತ್ತಾ: ಇನ್ನೇನು ಕೆಲವೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದೆ. ತೀವ್ರ ಜಿದ್ದಾಜಿದ್ದಿ ಕಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಆಡಳಿತಾರೂಢ ಟಿಎಂಸಿ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.

ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಹವಣಿಸುತ್ತಿರುವ ಬಿಜೆಪಿ, ತನ್ನ ಸಿಎಂ ಅಭ್ಯರ್ಥಿಯಲ್ಲಿ ಗೊಂದಲ ಮೂಡಿಸಿದೆ. ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಹೊರಗಿನವರು ಸಿಎಂ ಆಗುತ್ತಾರೆ ಎಂದು ಊಹಾಪೋಹ ಎದ್ದಿದೆ. ಈ ಹಿನ್ನೆಲೆಯಲ್ಲಿ ಈ ಸಾರಿ ಚುನಾವಣೆಯ ಸ್ಲೋಗನ್ ಬಿಡುಗಡೆ ಮಾಡಿರುವ ಟಿಎಂಸಿ, ಬಿಜೆಪಿಗೆ ಎದಿರೇಟು ನೀಡಿದೆ.

ಹೋರಾಟಗಾರ್ತಿ ದಿಶಾ ರವಿಗೆ ಅಮೆರಿಕಾದ ಅಲೆಕ್ಸಾಂಡ್ರಿಯಾ ವಿಲ್ಲಾಸೆರ್ ಬೆಂಬಲ

'Bengal Wants Its Own Daughter' ಎಂಬ ಸ್ಲೋಗನ್ ಟಿಎಂಸಿ(TMC Party) ಅನಾವರಣಗೊಳಿಸಿದೆ. ಬಂಗಾಳಕ್ಕೆ ತನ್ನ ಮನೆ ಮಗಳು ಬೇಕೆ ಹೊರತು ಹೊರಗಿನವರು ಅಲ್ಲ ಎಂಬ ಸಂದೇಶವನ್ನು ಇದು ರವಾನಿಸಿದೆ. ಈ ಸ್ಲೋಗನ್ ಇರುವ ಬ್ಯಾನರ್ ಹೋರ್ಡಿಂಗ್ಸ್​ಗಳು ಕಲ್ಕತ್ತದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿವೆ.

"ದೇಶವು ಚುನಾವಣಾ ಮೂಡ್ ನಿಂದ ಹೊರಬರಲು ಇದು ಸೂಕ್ತ ಸಮಯ"

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾರ್ಥ್ ಚಟರ್ಜಿ ಅವರು, ಬಂಗಾಳಕ್ಕೆ ಹೊರಗಿನವರ ಅವಶ್ಯಕತೆ ಇಲ್ಲ. ಹೊರಗಿನವರು ಇಲ್ಲಿ ಅಶಾಂತಿ ಸೃಷ್ಟಿಸಲು ಬಿಡುವುದಿಲ್ಲ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ್ ಚಟರ್ಜಿ ಹೇಳಿದ್ದಾರೆ.

ಐದು ರಾಜ್ಯಗಳಲ್ಲಿ ಏಕಾಏಕಿ ಹೆಚ್ಚಳಗೊಂಡ ಕೊರೊನಾ ಪ್ರಕರಣಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News