'ಬಿಜೆಪಿ ವಿರುದ್ಧ ಜೊತೆಯಾಗಿ ಹೋರಾಡೋಣ'- ಕಾಂಗ್ರೆಸ್, ಸಿಪಿಎಂಗೆ ಮಮತಾ ಮನವಿ

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಹಿನ್ನಲೆಯಲ್ಲಿ ಈಗ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಬಿಜೆಪಿ ವಿರುದ್ಧ ಜೊತೆಯಾಗಿ ಹೋರಾಡಲು ಕಾಂಗ್ರೆಸ್ ಮತ್ತು ಸಿಪಿಎಂಗೆ ಮನವಿ ಮಾಡಿದ್ದಾರೆ. 

Last Updated : Jun 26, 2019, 05:58 PM IST
'ಬಿಜೆಪಿ ವಿರುದ್ಧ ಜೊತೆಯಾಗಿ ಹೋರಾಡೋಣ'- ಕಾಂಗ್ರೆಸ್, ಸಿಪಿಎಂಗೆ ಮಮತಾ ಮನವಿ     title=

ನವದೆಹಲಿ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಹಿನ್ನಲೆಯಲ್ಲಿ ಈಗ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಬಿಜೆಪಿ ವಿರುದ್ಧ ಜೊತೆಯಾಗಿ ಹೋರಾಡಲು ಕಾಂಗ್ರೆಸ್ ಮತ್ತು ಸಿಪಿಎಂಗೆ ಮನವಿ ಮಾಡಿದ್ದಾರೆ. 

ಪಶ್ಚಿಮ ಬಂಗಾಳ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ “ನೀವು ಬಿಜೆಪಿಗೆ ಮತ ಹಾಕಿದರೆ ಏನಾಗುತ್ತದೆ ಎಂದು ರಾಜ್ಯದ ಜನರು ಭಟ್ಪಾರದಲ್ಲಿ ನೋಡಿದ್ದಾರೆ. ಬಿಜೆಪಿ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ - ಟಿಎಂಸಿ, ಕಾಂಗ್ರೆಸ್ ಮತ್ತು ಸಿಪಿಐ (ಎಂ) ಒಟ್ಟಾಗಿ ಬರಬೇಕು ಎಂದು ನಾನು ಭಾವಿಸುತ್ತೇನೆ. ಇದರರ್ಥ ನಾವು ರಾಜಕೀಯವಾಗಿ ಕೈಜೋಡಿಸಬೇಕು ಎಂದಲ್ಲ , ಆದರೆ ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ವಿಷಯಗಳ ಬಗ್ಗೆ ನಾವು ಒಟ್ಟಿಗೆ ಸೇರಬಹುದು ”ಎಂದು ಹೇಳಿದರು.

ಈ ಹಿಂದೆ ಎಡಪಕ್ಷಗಳ ಕಟು ಟೀಕಾಕಾರರಾಗಿದ್ಧ ಮಮತಾ ಬ್ಯಾನರ್ಜಿ, 2011 ರ ವಿಧಾನಸಭಾ ಚುನಾವಣೆಯಲ್ಲಿ 34 ವರ್ಷಗಳ ಸಿಪಿಐ (ಎಂ) ಆಡಳಿತವನ್ನು ಕೊನೆಗೊಳಿಸಿದ ನಂತರ ಅಧಿಕಾರಕ್ಕೆ ಬಂದರು. ಈಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಂಗಾಳದಲ್ಲಿ ಉತ್ತಮ ಪ್ರದರ್ಶನ ನೀಡಿ 18 ಸ್ಥಾನಗಳನ್ನು ಗಳಿಸಿರುವುದು ಮಮಾತಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Trending News