ಮಧ್ಯಪ್ರದೇಶದಲ್ಲಿ ಹುಲಿ ಗಣತಿಗೆ ಚಾಲನೆ

    

Last Updated : Feb 6, 2018, 06:55 PM IST
ಮಧ್ಯಪ್ರದೇಶದಲ್ಲಿ ಹುಲಿ ಗಣತಿಗೆ ಚಾಲನೆ  title=

ಭೂಪಾಲ್: ಮಧ್ಯಪ್ರದೇಶದಲ್ಲಿ ಮೊದಲ ಹಂತದ ಅಖಿಲ ಭಾರತ ಮಟ್ಟದ ಹುಲಿ ಗಣತಿಗೆ ಸೋಮವಾರದಿಂದ ಚಾಲನೆ ನೀಡಲಾಗಿದೆ  ಎಂದು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹುಲಿ ಜೊತೆಗೆ, ಚಿರತೆಗಳು ಮತ್ತು ಇತರ ಕಾಡು ಮತ್ತು ಸಸ್ಯಾಹಾರಿ ಪ್ರಾಣಿಗಳ ಜನಸಂಖ್ಯೆಯನ್ನು ಸಹಿತ  ಮುಂದಿನ ಏಳು ದಿನಗಳವರೆಗೆ ಗಣತಿ ಮಾಡಬಹುದು ಎಂದು ಅವರು ತಿಳಿಸಿದರು.

ಈ ಹುಲಿ ಮತ್ತು ಕಾಡು ಪ್ರಾಣಿಗಳ ಹೊರತಾಗಿ ಅದರ ವಾಸಸ್ಥಾನ, ಆಹಾರ ಲಭ್ಯತೆ ಮತ್ತು ಸಸ್ಯಗಳ ಅಧ್ಯಯನ ಸಹ ನಡೆಸಲಾಗುತ್ತದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಉದ್ಯೋಗಿಗಳೊಂದಿಗೆ ವಿವಿಧ ರಾಜ್ಯಗಳ ಸ್ವಯಂಸೇವಕರು  ಈ ಗಣತಿಯಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯವು  ನಾಲ್ಕು ಹಂತಗಳಲ್ಲಿ ಫೆಬ್ರವರಿ 5 ರಿಂದ ಮಾರ್ಚ್ 26 ರ ವರೆಗೆ ನಡೆಯಲಿದೆ.

ಗುಜರಾತ್, ಕರ್ನಾಟಕ ಮತ್ತು ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ತರಬೇತಿ ಸ್ವಯಂಸೇವಕರು ಮತ್ತು ವಿಷಯ ತಜ್ಞರು ರಾಷ್ಟ್ರೀಯ ಹುಲಿ ಗಣತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಲ್ಲಿ ಸ್ವಯಂಸೇವಕರು ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಒಳಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

ವನ್ಯಜೀವಿ ನಿರ್ವಹಣೆಯಲ್ಲಿ ಸಾರ್ವಜನಿಕರ ಸದಸ್ಯರ ಪಾಲ್ಗೊಳ್ಳುವಿಕೆಯಿಂದಾಗಿ ಗಣತಿಯಲ್ಲಿ ಅಂಕಿ ಅಂಶಗಳ ಗುಣಮಟ್ಟದಲ್ಲಿ  ಹೆಚ್ಚಿಳ ಮತ್ತು ಪಾರದರ್ಶಕತೆ ತರಲು ಅವರನ್ನು ಒಳಗೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಮಾಹಿತಿಯ ಪ್ರಕಾರ, 2017 ರಲ್ಲಿ ಭಾರತದಲ್ಲಿ 98 ಹುಲಿಗಳ ಸಾವು ಸಂಭವಿಸಿವೆ ಅದರಲ್ಲ್ಲಿ  26 ಹುಲಿಗಳ ಸಾವು ಮಧ್ಯಪ್ರದೇಶದಿಂದ ವರದಿಯಾಗಿದೆ.

ಮಧ್ಯಪ್ರದೇಶವು ಅರ್ಧ ಡಜನ್ ಹುಲಿ ಮೀಸಲು ಪ್ರದೇಶಗಳನ್ನು ಹೊಂದಿದೆ ಅದರಲ್ಲಿ  ಕನ್ಹಾ, ಪನ್ನಾ, ಬಾಂದವ್ಘಡ್ ಮತ್ತು ಪೆಂಚ್ ಇವುಗಳಲ್ಲಿ ಪ್ರಮುಖವಾದವುಗಳು.

Trending News