ಹೆಣ್ಣು ಮಗು ಜನಿಸಿದರೆ 11 ಸಾವಿರ ರೂ. ನೀಡಲಿದೆ ಈ ಸಂಸ್ಥೆ

ದೇಶದಲ್ಲಿ ಜನಿಸಿದ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ 11 ಸಾವಿರ ರೂಪಾಯಿಗಳ ನಿಶ್ಚಿತ ಠೇವಣಿ (ಎಫ್ಡಿ) ಇಡುವುದಾಗಿ ಪ್ರಮುಖ ಆರೋಗ್ಯ ಸಂಸ್ಥೆ ಆಕ್ಸಿ(oxxy) ಹೇಳಿದೆ.

Last Updated : Apr 20, 2018, 05:19 PM IST
ಹೆಣ್ಣು ಮಗು ಜನಿಸಿದರೆ 11 ಸಾವಿರ ರೂ. ನೀಡಲಿದೆ ಈ ಸಂಸ್ಥೆ title=

ನವದೆಹಲಿ: ದೇಶದಲ್ಲಿ ಜನಿಸಿದ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ 11 ಸಾವಿರ ರೂಪಾಯಿಗಳ ನಿಶ್ಚಿತ ಠೇವಣಿ (ಎಫ್ಡಿ) ಇಡುವುದಾಗಿ ಪ್ರಮುಖ ಆರೋಗ್ಯ ಸಂಸ್ಥೆ ಆಕ್ಸಿ(oxxy) ಹೇಳಿದೆ. ಇದರ ಉದ್ದೇಶವು ದೇಶದಲ್ಲಿ ಲಿಂಗ ಅನುಪಾತದ ನಡುವಿನ ಅಂತರವನ್ನು ಕಡಿಮೆಗೊಳಿಸುವುದು ಮತ್ತು ಹೊಸದಾಗಿ ಹುಟ್ಟಿದ ಹುಡುಗಿಯ ಶಿಕ್ಷಣ ಮತ್ತು ವೃತ್ತಿಪರ ಗುರಿಗಳನ್ನು ಪಡೆಯುವುದು. ಇಡೀ ದೇಶದಲ್ಲಿ 'ಆಕ್ಸಿ ಮಹಿಳಾ ಶಿಶು ಅಭಿವೃದ್ಧಿ ಕಾರ್ಯಕ್ರಮ' ದಡಿಯಲ್ಲಿ ಹೆತ್ತವರು ಹೆಣ್ಣು ಮಗುವಿನ ಜನನವನ್ನು ನೊಂದಾಯಿಸಿದಲ್ಲಿ  ಮಗುವಿನ ಹೆಸರಿನಲ್ಲಿ 11 ಸಾವಿರ ರೂಪಾಯಿಗಳ ನಿಶ್ಚಿತ ಠೇವಣಿ (ಎಫ್ಡಿ) ಇಡುವುದಾಗಿ ಓಕ್ಸಿ ಸಂಸ್ಥೆ ಹೇಳಿದೆ.

ಹುಡುಗಿಯರನ್ನು ಆರ್ಥಿಕವಾಗಿ ಸ್ವತಂತ್ರಗೊಳಿಸಲು ಈ ಕಾರ್ಯಕ್ರಮ ರೂಪಿಸಲಾಗಿದ್ದು 'ಪೋಷಕರ ಸಾಮಾಜಿಕ ಸ್ಥಾನಮಾನ ಅಥವಾ ಭೌಗೋಳಿಕ ಇತ್ಯಾದಿಗಳ ತಾರತಮ್ಯವನ್ನು ಮೀರಿ ಎಲ್ಲರಿಗೂ ಈ ಸೌಲಭ್ಯ ನೀಡಲಾಗುವುದು' ಎಂದು ಸಂಸ್ಥೆ ತಿಳಿಸಿದೆ. 18 ವರ್ಷ ಪೂರ್ಣಗೊಳಿಸಿದ ನಂತರ ಹುಡುಗಿಯು ಈ ನಿಶ್ಚಿತ ಠೇವಣಿ ಮೊತ್ತವನ್ನು ತೆಗೆದುಕೊಳ್ಳಬಹುದು. ಈ ಹಣವನ್ನು ಅವರ ವಿದ್ಯಾಭ್ಯಾಸ ಅಥವಾ ಅವರ ವೃತ್ತಿಪರಾ ಗುರಿ ಸಾಧನೆಗೆ ಬಳಸಬಹುದು. ಈ ಹಣವನ್ನು ಅವರ ಭವಿಷ್ಯಕ್ಕಾಗಿ ಬಳಸಿಕೊಳ್ಳಬಹುದೇ ವಿನಃ, ಇದರ ಮೇಲೆ ಬೇರೆ ಯಾರಿಗೂ ಹಕ್ಕಿರುವುದಿಲ್ಲ ಎಂದು ಹೇಳಲಾಗಿದೆ.

ಏನಿದು ಆಕ್ಸಿ ಕೇರ್?
'ಆಕ್ಸಿ' ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವ ಕಂಪೆನಿ. 1500 ನಗರಗಳ ಆಕ್ಸಿ ಹೆಲ್ತ್ ಕೇರ್ ನಲ್ಲಿ ಸುಮಾರು 2 ಲಕ್ಷ ಕೇಂದ್ರಗಳಿವೆ. ಕಂಪನಿಯು 1.5 ಮಿಲಿಯನ್ ಹೆಲ್ತ್ ಕೇರ್ ನೆಟ್ವರ್ಕ್ ಪಾಲುದಾರರಿಂದ ಹಣವನ್ನು ಸಂಗ್ರಹಿಸುತ್ತದೆ.

ಆಕ್ಸಿ ಹೆಲ್ತ್ ಕೇರ್ ನ ಈ ಯೋಜನೆಯು ಮೂರು ತಿಂಗಳ ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯು ಅದನ್ನು ಆಕ್ಸಿ ಹೆಲ್ತ್ ಕೇರ್ ಅಪ್ಲಿಕೇಶನ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದರೆ, ಆಗ 11 ಸಾವಿರ ರೂಪಾಯಿ ಎಫ್ಡಿ ಅನ್ನು ಹುಡುಗಿಯ ಹೆಸರಿನಲ್ಲಿ ಇಡಲಾಗುತ್ತದೆ. ಇದು ಮಗುವಿನ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಆಗುತ್ತದೆ. 18 ವರ್ಷಗಳ ಪೂರ್ಣಗೊಂಡ ನಂತರ, ಅವರು ಯಾವುದೇ ಹಸ್ತಕ್ಷೇಪವಿಲ್ಲದೆ ಅದನ್ನು ಬಳಸಬಹುದು. 

Trending News