ರಾತ್ರಿ ಕೆಲಸ ಮುಗ್ಸಿ ಮನೆಗೆ 10 ಕಿ.ಮೀ. ಓಡಿಕೊಂಡೇ ಹೋಗ್ತಾನೆ ಈತ.. ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!

ಹುಡುಗ ಓಡುತ್ತ ಹೋಗುವ ವಿಡಿಯೋವನ್ನು ಸಿನಿಮಾ ನಿರ್ಮಾಪಕ, ಲೇಖಕ ವಿನೋದ್​ ಕಪ್ರಿ ತಮ್ಮ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

Written by - MADHUMALA | Edited by - Chetana Devarmani | Last Updated : Mar 21, 2022, 06:26 PM IST
  • ಬೆನ್ನಿಗೊಂದು ಬ್ಯಾಗ್​ ಹಾಕಿಕೊಂಡ ಯುವಕನೊಬ್ಬ ಮಧ್ಯರಾತ್ರಿ ನೋಯ್ಡಾದ ರಸ್ತೆಯಲ್ಲಿ ಓಡುವ ವಿಡಿಯೋ ವೈರಲ್
  • ಈ ಯುವಕ ರಾತ್ರಿ ಕೆಲಸ ಮುಗಿಸಿ ವಾಪಸ್​ ಮನೆಗೆ ಹೋಗುವಾಗ ಓಡಿಕೊಂಡೇ ಹೋಗುತ್ತಾನಂತೆ
  • ಹುಡುಗ ಓಡುತ್ತ ಹೋಗುವ ವಿಡಿಯೋವನ್ನು ಸಿನಿಮಾ ನಿರ್ಮಾಪಕ, ಲೇಖಕ ವಿನೋದ್​ ಕಪ್ರಿ ತಮ್ಮ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ
ರಾತ್ರಿ ಕೆಲಸ ಮುಗ್ಸಿ ಮನೆಗೆ 10 ಕಿ.ಮೀ. ಓಡಿಕೊಂಡೇ ಹೋಗ್ತಾನೆ ಈತ.. ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ!  title=
ಪ್ರದೀಪ್​ ಮೆಹ್ರಾ

ನವದೆಹಲಿ: ಬೆನ್ನಿಗೊಂದು ಬ್ಯಾಗ್​ ಹಾಕಿಕೊಂಡ ಯುವಕನೊಬ್ಬ ಮಧ್ಯರಾತ್ರಿ ನೋಯ್ಡಾದ (Noida) ರಸ್ತೆಯಲ್ಲಿ ಓಡುವ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ (Video Viral) ಆಗುತ್ತಿದೆ. ಈ ಯುವಕ ರಾತ್ರಿ ಕೆಲಸ ಮುಗಿಸಿ ವಾಪಸ್​ ಮನೆಗೆ ಹೋಗುವಾಗ ಓಡಿಕೊಂಡೇ ಹೋಗುತ್ತಾನಂತೆ. ಹುಡುಗ ಓಡುತ್ತ ಹೋಗುವ ವಿಡಿಯೋವನ್ನು ಸಿನಿಮಾ ನಿರ್ಮಾಪಕ, ಲೇಖಕ ವಿನೋದ್​ ಕಪ್ರಿ ತಮ್ಮ ಟ್ವಿಟರ್​​ನಲ್ಲಿ (Twitter) ಶೇರ್​ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ.. ಸಚಿವ ಸುಧಾಕರ್‌ ರಾಜೀನಾಮೆಗೆ ಎಎಪಿ ಪಟ್ಟು

ವಿನೋದ್​ ಕಪ್ರಿ ಕಾರಿನಲ್ಲಿ ಕುಳಿತೇ, ಓಡುತ್ತಿದ್ದ ಹುಡುಗನ ಜತೆ ಸಾಗುತ್ತ ಆತನನ್ನು ಸಂದರ್ಶಿಸಿದ್ದಾರೆ. ಬಾ, ನಾನು ನಿನ್ನ ಮನೆಗೆ ಡ್ರಾಪ್​ ಮಾಡುತ್ತೇನೆ. ಯಾಕೆ ಹೀಗೆ ಈ ರಾತ್ರಿಯಲ್ಲಿ ಓಡಿ ಹೋಗುತ್ತಿದ್ದೀಯಾ ಎಂದು ಕೇಳಿದ್ದಕ್ಕೆ, ಆ ಹುಡುಗ ತಿರುಗಿ ನೀಡಿದ ಉತ್ತರಕ್ಕೆ ವಿನೋದ್ ಕಪ್ರಿ ಮಾತ್ರವಲ್ಲ, ಇದೀಗ ನೆಟ್ಟಿಗರೂ ಫುಲ್​ ಫಿದಾ ಆಗಿದ್ದಾರೆ.
 
ಈ ಯುವಕನ ಹೆಸರು ಪ್ರದೀಪ್​ ಮೆಹ್ರಾ (Pradeep Mehra). ಈ ಯುವಕ ಒಂದೇ ಸಮ ಓಡುತ್ತಲೇ ಹೋಗುತ್ತಿರುತ್ತಾನೆ. ಅದೇ ವೇಳೆ ವಿನೋದ್​ ಕಪ್ರಿ ಕೂಡ ಅದೇ ದಾರಿಯಲ್ಲಿ ಕಾರಿನಲ್ಲಿ ಹೊಗುತ್ತಿರುತ್ತಾರೆ. ಆಗ ಆ ಯುವಕನನ್ನು ಕಂಡ ವಿನೋದ್​ ಕಪ್ರಿ ಬಾ ನಿನ್ನನ್ನು ಮನೆಗೆ ಬಿಡುತ್ತೇನೆ  ಎಂದು ಕೇಳುತ್ತಾರೆ. ಆದ್ರೆ ಯುವಕ ಬೇಡ, ನಾನು ಓಡಬೇಕು ಎನ್ನುತ್ತಾನೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಆಗ ವಿನೋದ್ ಕಪ್ರಿ, ಯಾಕೆ ಓಡಬೇಕು  ಎಂದು ಕೇಳಿದಾಗ, ನಾನು ಸೇನೆಗೆ ಸೇರಬೇಕು. ನನಗೆ ಹಗಲಿನಲ್ಲಿ ಓಡಲು ಸಮಯ ಸಿಗುವುದಿಲ್ಲ. ಹೀಗಾಗಿ ಕೆಲಸ ಮುಗಿಸಿ ಮಧ್ಯರಾತ್ರಿ ಓಡಿಯೇ ಮನೆಗೆ ಹೋಗುತ್ತೇನೆ ಎಂದು ಯುವಕ ಹೇಳಿದ್ದಾನೆ.

ಯುವಕನ ಈ ಮಾತನ್ನು ಕೇಳಿ ವಿನೋದ್​ ಕಪ್ರಿ ಸಿಕ್ಕಾಪಟೆ ಖುಷಿಯಾಗಿದ್ದಾರೆ. ಹಾಗೇ, ಯುವಕನ ಬಳಿ ಆತನ ಬಗ್ಗೆ ವಿಚಾರಿಸಿದ್ದಾರೆ. ನಾನು ಮನೆಗೆ 10 ಕಿ.ಮೀ. ದೂರ ಪ್ರತಿದಿನ ಓಡಿಕೊಂಡೇ ಹೋಗುವುದು. ಸದ್ಯ ನಾನು ನನ್ನ ಅಣ್ಣನೊಂದಿಗೆ ಇದ್ದೇನೆ. ತಾಯಿಗೆ ಹುಷಾರಿಲ್ಲ, ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ ಎಂದು ವಿನೋದ್​ ಕಪ್ರಿಯವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾನೆ. ಇನ್ನು ಊಟ ಆಗಿದೆಯಾ, ಬಾ ನನ್ನೊಂದಿಗೆ ಊಟ ಮಾಡು ಎಂದಿದ್ದಕ್ಕೆ, ಇಲ್ಲ ಈಗ ನಾನು ಮನೆಗೆ ಹೋಗಿ ಅಡುಗೆ ಮಾಡಬೇಕು. ಮನೆಯಲ್ಲಿರುವ ನನ್ನ ಅಣ್ಣ ಹಸಿದುಕೊಂಡೇ ಇರಬೇಕಾಗುತ್ತದೆ ಎಂದು ಪ್ರದೀಪ್ ಹೇಳುತ್ತಾರೆ. ಯಾಕೆ ಅವರು ಅಡುಗೆ ಮಾಡುವುದಿಲ್ಲವಾ ಎಂದು ವಿನೋದ್​ ಕಪ್ರಿ ಕೇಳಿದ್ದಕ್ಕೆ, ಇಲ್ಲ ಅವರಿಗೆ ಈಗ ನೈಟ್ ಡ್ಯೂಟಿ ಇದೆ. ನಾನು ಹೋಗಿ ಅಡುಗೆ ಮಾಡಬೇಕು ಎಂದು ಹೇಳುತ್ತಾನೆ.

ಇದನ್ನೂ ಓದಿ:  ಯಡಿಯೂರಪ್ಪ ಬಿಟ್ರೆ ಇನ್ಯಾರಿಗೂ ಜವಾಬ್ದಾರಿ ಇಲ್ಲ: ಸಿದ್ದರಾಮಯ್ಯ

ಇನ್ನು ನೀನು ಓಡುತ್ತಿರುವ ಈ ವಿಡಿಯೋ ಸಿಕ್ಕಾಪಟೆ ವೈರಲ್​ ಆಗುತ್ತೆ ಎಂದಾಗ, ಯಾರು ನನ್ನನ್ನು ಗುರುತಿಸುತ್ತಾರೆ? ಇರಲಿ ವೈರಲ್​ ಆಗಲಿ ಬಿಡಿ. ಯಾಕೆಂದರೆ ನಾನೇನೂ ತಪ್ಪು ಮಾಡುತ್ತಿಲ್ಲ ಎಂದು ಯುವಕ ಹೇಳುತ್ತಾನೆ. ಆ ವಿಡಿಯೋಗೆ ವಿನೋದ್​ ಕಪ್ರಿ This is PURE GOLD ಎಂದು ಕ್ಯಾಪ್ಷನ್​ ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈಗ ಈ ವಿಡಿಯೋವಂತೂ (Viral Video) ಫುಲ್ ವೈರಲ್​ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News