ATM ನಿಂದ ಹಣ ವಿಥ್ ಡ್ರಾ ಮಾಡುವಾಗ ಈ ಚಿಕ್ಕ ಎಚ್ಚರಿಕೆ ವಹಿಸಿ ಫ್ರಾಡ್ ನಿಂದ ತಪ್ಪಿಸಿಕೊಳ್ಳಿ

ಬ್ಯಾಂಕ್ ಎಟಿಎಂನಿಂದ ಹಣವನ್ನು ವಿಥ್ ಡ್ರಾ ಮಾಡಲು ನಾವು ಪ್ರತಿ ತಿಂಗಳು 4-5 ಬಾರಿ ಹೋಗುತ್ತೇವೆ. ಆದರೆ, ಎಟಿಎಂಗಳಲ್ಲಿ ಹಣವನ್ನು ಹಿಂಪಡೆಯಲು ಹಲವು ರೀತಿಯ ನಿಯಮಗಳನ್ನು ಮಾಡಲಾಗಿದೆ, ಅದನ್ನು ಅನುಸರಿಸಬೇಕಾಗಿದೆ.

Last Updated : Sep 5, 2020, 07:44 PM IST
  • 1. ಹಣವನ್ನು ವಿಥ್ ಡ್ರಾ ಮಾಡಲು ವಿವಿಧ ನಿಯಮಗಳಿವೆ.
    2. ಏಕಾಂತ ಸ್ಥಳದಲ್ಲಿ ಇರುವ ಎಟಿಎಂ ಅನ್ನು ಬಳಸಬೇಡಿ
    3. ಪಾಸ್ವರ್ಡ್ ತಿಳಿಯಲು, ಹ್ಯಾಕರ್ಸ್ ಗಳು ಬೋರ್ಡ್ನಲ್ಲಿ ಸ್ಕ್ಯಾನರ್ ಇರಿಸಿರುತ್ತಾರೆ.
ATM ನಿಂದ ಹಣ ವಿಥ್ ಡ್ರಾ ಮಾಡುವಾಗ  ಈ ಚಿಕ್ಕ ಎಚ್ಚರಿಕೆ ವಹಿಸಿ ಫ್ರಾಡ್ ನಿಂದ ತಪ್ಪಿಸಿಕೊಳ್ಳಿ title=

ನವದೆಹಲಿ: ಬ್ಯಾಂಕ್ ಎಟಿಎಂ (ATM) ನಿಂದ ಹಣವನ್ನು ವಿಥ್ ಡ್ರಾ ಮಾಡಲು ನಾವು ಪ್ರತಿ ತಿಂಗಳು 4-5 ಬಾರಿ ಹೋಗುತ್ತೇವೆ. ಆದರೆ, ಎಟಿಎಂಗಳಲ್ಲಿ ಹಣವನ್ನು ಹಿಂಪಡೆಯಲು ಹಲವು ರೀತಿಯ ನಿಯಮಗಳನ್ನು ಮಾಡಲಾಗಿದೆ, ಅದನ್ನು ಅನುಸರಿಸಬೇಕಾಗಿದೆ. ಹ್ಯಾಕರ್‌ಗಳು ಇದರ ಲಾಭವನ್ನು ಪಡೆದುಕೊಳ್ಳುತ್ತಾರೆ ಮತ್ತು ಜನರ ಖಾತೆಯಿಂದ ಸಂಪೂರ್ಣ ಮೊತ್ತವನ್ನು ಖಾಲಿ ಮಾಡುತ್ತಾರೆ. ಇದರಿಂದ ಬಚಾವಾಗಲು ನೀವು ಚಿಕ್ಕ ಚಿಕ್ಕ ಎಚ್ಚರಿಕೆಗಳನ್ನು ವಹಿಸುವ ಆವಶ್ಯಕತೆ ಇದೆ.

ಪ್ರತಿ ವ್ಯವಹಾರದ ಬಳಿಕ ಕ್ಯಾನ್ಸಲ್ ಗುಂಡಿಯನ್ನು ಒತ್ತಿ
ಪ್ರತಿಯೊಂದು ATM ಯಂತ್ರಗಳ ಮೇಲೆ ಕ್ಯಾನ್ಸಲ್ ಗುಂಡಿ ಇರುತ್ತದೆ. ಪ್ರತಿಯೊಂದು ವ್ಯವಹಾರ ಪೂರ್ಣಗೊಳಿಸಿದ ಬಳಿಕ ಕ್ಯಾನ್ಸಲ್ ಗುಂಡಿಯನ್ನು ಒತ್ತಿ. ಇದರಿಂದ ನಿಮ್ಮ ಕಾರ್ಡ್ ಅನ್ನು ಯಾರೂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಕ್ಯಾನ್ಸಲ್ ಗುಂಡಿ ಒತ್ತಿದ ಬಳಿಕ ನಿಮ್ಮ ವಿವರಗಳು ಕೂಡ ಇತರರು ಪಡೆಯಲು ಸಾಧ್ಯವಿಲ್ಲ.

ಬ್ಯಾಂಕ್ ಅಥವಾ ಜನಸಂದಣಿ ಹೆಚ್ಚಾಗಿರುವ ATMಗಳ ಬಳಕೆ ಮಾಡಿ
ಯಾವಾಗಲು ಜನಸಂದಣಿ ಇರುವ ಅಥವಾ ಬ್ಯಾಂಕ್ ಶಾಖೆಯಲ್ಲಿರುವ ಎಟಿಎಂ ಅನ್ನು ಬಳಸಲು ಹೆಚ್ಚಾಗಿ ಪ್ರಯತ್ನಿಸಿ. ಏಕಾಂತ ಪ್ರದೇಶದಲ್ಲಿ ಇರುವ ಎಟಿಎಂಗಳನ್ನು ಬಳಸುವುದನ್ನು ತಪ್ಪಿಸಿ. ಏಕೆಂದರೆ ಹ್ಯಾಕರ್ ನಿರ್ಜನ ಸ್ಥಳದಲ್ಲಿರುವ ಎಟಿಎಂ ಅನ್ನು ಕ್ಲೋನಿಂಗ್ ಅಥವಾ ಫಿಶಿಂಗ್ಗಾಗಿ ಬಳಸಬಹುದು.

ವಾಸ್ತವವಾಗಿ, ಎಟಿಎಂ ಕಾರ್ಡ್ ಬಗ್ಗೆ ಮಾಹಿತಿಯನ್ನು ಕದ್ದು, ನಿಮ್ಮನ್ನು ಸುಲಭವಾಗಿ ಮೋಸಕ್ಕೆ ಗುರಿಯಾಗಿಸಬಹುದು. ಇದನ್ನು ಎಟಿಎಂ ಸ್ಕಿಮ್ಮಿಂಗ್ ಎಂದು ಕರೆಯಲಾಗುತ್ತದೆ. ಇದರಲ್ಲಿ, ಕಳ್ಳರು ಎಟಿಎಂ ಯಂತ್ರದ ಕಾರ್ಡ್ ರೀಡರ್‌ನಲ್ಲಿ ನಕಲಿ ಕಾರ್ಡ್ ರೀಡರ್‌ಗೆ ಹೊಂದಿಕೊಳ್ಳುತ್ತಾರೆ ಮತ್ತು ಪಾಸ್‌ವರ್ಡ್ ಹುಡುಕಲು ಕೀಬೋರ್ಡ್‌ನಲ್ಲಿ ಸ್ಕ್ಯಾನರ್ ಅನ್ನು  ಬಳಸುತ್ತಾರೆ.

ATMನಲ್ಲಿ ಒಳ ಪ್ರವೇಶಿಸುವ ವೇಳೆ ಕಂಪ್ಯೂಟರ್ ನಲ್ಲಿ ಹೋಂ ಸ್ಕ್ರೀನ್ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ. ಆಗ ಮಾತ್ರ ನಿಮ್ಮ ಕಾರ್ಡ್ ಅನ್ನು ಅಲ್ಲಿ ಬಳಸಿ. ಅಷ್ಟ ಅಲ್ಲ ವ್ಯವಹಾರ ಪೂರ್ಣಗೊಂಡ ಬಳಿಕ ಮತ್ತೆ ಹೋಮ್ ಸ್ಕ್ರೀನ್ ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಂಡು ATM ನಿಂದ ಹೊರಬೀಳಿ.

ಅಪರಿಚಿತರಿಂದ ಸಹಾಯ ಪಡೆಯಬೇಡಿ
ATM ಮೂಲಕ ವ್ಯವಹಾರ ಮಾಡುವಾಗ ಅಪರಿಚಿತ ವ್ಯಕ್ತಿಗಳ ಸಹಾಯ ಪಡೆಯಬೇಡಿ. ಒಂದು ವೇಳೆ ನಿಮಗೆ ATM ಬಳಸುವಲ್ಲಿ ಯಾವುದೇ ಕಷ್ಟ ಎದುರಾಗುತ್ತಿದ್ದರೆ. ATM ಹೊರಗಡೆ ಕುಳಿತಿರುವ ಗಾರ್ಡ್ ಸಹಾಯ ಪಡೆದುಕೊಳ್ಳಿ.

ATM ಕಾರ್ಡ್ ಮೇಲೆ PIN ನಮೂದಿಸಬೇಡಿ
ಹಲವು ಬಾರಿ ಮರೆತುಹೋಗುವ ಭಯದಿಂದ ಜನರು ಕಾರ್ಡ್ ಮೇಲೆ ತಮ್ಮ ATM ಪಿನ್ ನಮೂದಿಸುತ್ತಾರೆ. ಈ ರೀತಿ ಅಪ್ಪಿ-ತಪ್ಪಿಯೂ ಕೂಡ ಮಾಡಬೇಡಿ. ಇದರಿಂದ ನಿಮ್ಮ ಜೊತೆಗೆ ಫ್ರಾಡ್ ಆಗುವ ಸಾಧ್ಯತೆ ಹೆಚ್ಚಾಗುತ್ತದೆ. ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದಾದ ಪಿನ್ ರಚಿಸಿ.

ಕಾರ್ಡ್ ಲೆಸ್ ವ್ಯವಹಾರ ನಡೆಸಿ
ಇತ್ತೀಚಿಗೆ ಹಲವು ಬ್ಯಾಂಕ್ ಗಳು ಕಾರ್ಡ್ ಲೆಸ್ ವ್ಯವಹಾರದ ಸೌಲಭ್ಯ ಒದಗಿಸಿವೆ. ಒಂದು ವೇಳೆ ನಿಮ್ಮ ಬ್ಯಾಂಕ್ ಕೂಡ ಈ ಸೌಲಭ್ಯ ಒದಗಿಸಿದ್ದರೆ, ನೀವು ಕೂಡ ಆ ಸೌಲಭ್ಯದ ಲಾಭ ಪಡೆಯಬಹುದು. ಇದರಿಂದ ಕಾರ್ಡ್ ಸ್ಕಿಮ್ಮಿಂಗ್ ನಿಂದ ನೀವು ಪಾರಾಗಬಹುದು.

Trending News