ದೆಹಲಿ-NCR ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ!

ನೈರುತ್ಯ ಮಾನ್ಸೂನ್ ಉತ್ತರ ಭಾರತಕ್ಕೆ ವೇಗವಾಗಿ ತಲುಪುತ್ತಿದೆ. ಇಂದು ಮಾನ್ಸೂನ್ ಮಹಾರಾಷ್ಟ್ರವನ್ನು ತಲುಪಲಿದೆ.

Last Updated : Jun 6, 2018, 08:00 AM IST
ದೆಹಲಿ-NCR ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ!  title=

ನವದೆಹಲಿ: ದೆಹಲಿ- NCR ನಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಳೆಯೊಂದಿಗೆ ಪ್ರಬಲವಾದ ಚಂಡಮಾರುತದ ಸಾಧ್ಯತೆಯೂ ಇದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಬೆಳಿಗ್ಗೆ ನಿರಂತರವಾದ ಗಾಳಿ ವಾತಾವರಣವಿದೆ ಮತ್ತು ಆಕಾಶದಲ್ಲಿ ದಟ್ಟವಾದ ಮೋಡವಿತ್ತು. ಹವಾಮಾನ ಇಲಾಖೆಯ ಅಧಿಕಾರಿಗಳ ಪ್ರಕಾರ, ದೆಹಲಿ-ಎನ್ಸಿಆರ್, ఝಜ್ಜರ್, ಕರ್ನಾಲ್, ಕುರುಕ್ಷೇತ್ರ, ಪಾಣಿಪತ್ ಮತ್ತು ಮೀರತ್ ಪ್ರಮುಖ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೇ ಎನ್ನಲಾಗಿದೆ.

ಅದೇ ಸಮಯದಲ್ಲಿ ನೈರುತ್ಯ ಮಾನ್ಸೂನ್ ವೇಗವಾಗಿ ಉತ್ತರ ಭಾರತಕ್ಕೆ ಸಮೀಪಿಸುತ್ತಿದೆ. ಇಂದು ಮಾನ್ಸೂನ್ ಮಹಾರಾಷ್ಟ್ರವನ್ನು ತಲುಪಲಿದೆ. ಜೂನ್ 7 ರಂದು ನೈರುತ್ಯ ಮಾನ್ಸೂನ್ ಮುಂಬೈ, ಗೋವಾ ಮತ್ತು ಮಹಾರಾಷ್ಟ್ರದ ಭಾಗಗಳನ್ನು ತಲುಪಲಿದೆ ಎಂದು ಈ ಮೊದಲೇ ನಿರೀಕ್ಷಿಸಲಾಗಿತ್ತು.

ಮುನ್ಸೂಚನೆಯ ಪ್ರಕಾರ ಮುಂದಿನ 48 ಗಂಟೆಗಳಲ್ಲಿ ಮಾನ್ಸೂನ್ ದಕ್ಷಿಣ ಕೊಂಕಣ, ಗೋವಾ ಮತ್ತು ಮುಂಬೈ ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. "ಮುಂದಿನ 24 ಗಂಟೆಗಳಲ್ಲಿ ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ" ಎಂದು ಅವರು ಹೇಳಿದರು.

Trending News