1994 ರಲ್ಲಿ ಪ್ರಥಮ ಬಾರಿಗೆ ಜಾರಿಗೆ ಬಂತು 'ಸೇವಾ ತೆರಿಗೆ'

ಸೇವಾ ತೆರಿಗೆಯನ್ನು ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ಜಾರಿಗೆ ತಂದರು. ಆ ಬಜೆಟ್ ಉದಾರೀಕರಣದ ಪ್ರಯೋಜನಗಳನ್ನು ಒಳಗೊಂಡಿತ್ತು. ಆ ಮೂಲಕ ಉದಾರೀಕರಣವು ಜಾಗತಿಕ ಆರ್ಥಿಕತೆಯೊಂದಿಗೆ ಹೆಜ್ಜೆ ಹಾಕುತ್ತಾ 21 ನೇ ಶತಮಾನದಲ್ಲಿ ಭಾರತ ಮುಂದುವರೆಯುತ್ತಿರುವ ರಾಷ್ಟ್ರವಾಗಲು ಸಾಧ್ಯವಾಯಿತು.

Last Updated : Jan 31, 2018, 03:55 PM IST
1994 ರಲ್ಲಿ ಪ್ರಥಮ ಬಾರಿಗೆ ಜಾರಿಗೆ ಬಂತು 'ಸೇವಾ ತೆರಿಗೆ' title=

ನವದೆಹಲಿ: 1994ರಲ್ಲಿ ಡಾ. ಮನಮೋಹನ್ ಸಿಂಗ್ 'ಸೇವಾ ತೆರಿಗೆ'ಯನ್ನು ಪ್ರಥಮ ಬಾರಿಗೆ ಜಾರಿಗೆ ತಂದರು. ಸೇವಾ ತೆರಿಗೆಯನ್ನು ಅನುಷ್ಠಾನಗೊಳಿಸುವಾಗ ಉದಾರೀಕರಣ ವ್ಯವಸ್ಥೆಯನ್ನು ಅಳವಡಿಸಿದ್ದರು. ಅವರು ದೇಶದಲ್ಲಿ 5% ಸೇವಾ ತೆರಿಗೆಯನ್ನು ಶಿಫಾರಸು ಮಾಡಿದರು. ಅದು ದೇಶದಲ್ಲಿ 40% ಜಿಡಿಪಿಯನ್ನು ಕೊಡುಗೆಯಾಗಿ ನೀಡಿತು. ಕಡಿಮೆ ಹಣದುಬ್ಬರ ಮತ್ತು ಆರ್ಥಿಕತೆಯ ಉತ್ತಮ ದಿನಗಳನ್ನು ಸೂಚಿಸುತ್ತದೆ. ಉದಾರಕರಣವು ವಿಶ್ವದ ಮಾರುಕಟ್ಟೆಯನ್ನು ತಲುಪಲು ಸುಲಭವಾಗಿಸುತ್ತದೆ ಎಂದು ಅವರು ಹೇಳಿದ್ದರು. ಇದರ ಅಡಿಯಲ್ಲಿ, ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ನಿಯಮಗಳು ಸರಳೀಕೃತಗೊಂಡವು. ಆ ಮೂಲಕ ಉದಾರೀಕರಣವು ಜಾಗತಿಕ ಆರ್ಥಿಕತೆಯೊಂದಿಗೆ ಹೆಜ್ಜೆ ಹಾಕುತ್ತಾ 21 ನೇ ಶತಮಾನದಲ್ಲಿ ಭಾರತ ಮುಂದುವರೆಯುತ್ತಿರುವ ರಾಷ್ಟ್ರವಾಗಲು ಸಾಧ್ಯವಾಯಿತು.

 

 

Trending News