ಭಾರತದಲ್ಲಿ ಟಿಬಿ-ಎಚ್‌ಐವಿ ಸಂಬಂಧಿತ ಸಾವಿನ ಪ್ರಕರಣಗಳಲ್ಲಿ ಕುಂಠಿತ

ಭಾರತದಲ್ಲಿ ಟಿಬಿ-ಎಚ್‌ಐವಿಯಿಂದ ಉಂಟಾಗುವ ಸಾವುಗಳು 2010 ರಲ್ಲಿ 63,000 ದಿಂದ ಶೇ 85 ರಷ್ಟು ಕಡಿಮೆಯಾಗಿ 2018 ರಲ್ಲಿ 9,700 ಕ್ಕೆ ಇಳಿದಿದೆ, ಇದು ವರ್ಷಗಳಲ್ಲಿ ಭಾರತದಲ್ಲಿ ಎಚ್‌ಐವಿ ಸಂಬಂಧಿತ ಸಾವುಗಳು ಕಡಿಮೆಯಾಗುವುದಕ್ಕೆ ಬಹುಮಟ್ಟಿಗೆ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

Last Updated : Nov 29, 2019, 08:52 PM IST
ಭಾರತದಲ್ಲಿ ಟಿಬಿ-ಎಚ್‌ಐವಿ ಸಂಬಂಧಿತ ಸಾವಿನ ಪ್ರಕರಣಗಳಲ್ಲಿ ಕುಂಠಿತ title=
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಲ್ಲಿ ಟಿಬಿ-ಎಚ್‌ಐವಿಯಿಂದ ಉಂಟಾಗುವ ಸಾವುಗಳು 2010 ರಲ್ಲಿ 63,000 ದಿಂದ ಶೇ 85 ರಷ್ಟು ಕಡಿಮೆಯಾಗಿ 2018 ರಲ್ಲಿ 9,700 ಕ್ಕೆ ಇಳಿದಿದೆ, ಇದು ವರ್ಷಗಳಲ್ಲಿ ಭಾರತದಲ್ಲಿ ಎಚ್‌ಐವಿ ಸಂಬಂಧಿತ ಸಾವುಗಳು ಕಡಿಮೆಯಾಗುವುದಕ್ಕೆ ಬಹುಮಟ್ಟಿಗೆ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

ಶುಕ್ರವಾರ ಲಿಖಿತ ಉತ್ತರದಲ್ಲಿ ಲೋಕಸಭೆಗೆ ತಿಳಿಸಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ 'ಇದೇ ಅವಧಿಯಲ್ಲಿ, ಕ್ಷಯರೋಗದಿಂದ ಸಾವನ್ನಪ್ಪಿದ ಒಟ್ಟು ಸಾವುಗಳ ಸಂಖ್ಯೆ 2010 ರಲ್ಲಿ 5,57,000 ದಿಂದ 2018 ರಲ್ಲಿ 4,49,000 ಕ್ಕೆ ಇಳಿದಿದೆ ಎಂದು ಹೇಳಿದರು. ಪ್ರಕರಣ ಗುರುತಿಸುವಿಕೆ ಮತ್ತು ವರದಿಯಲ್ಲಿನ ವೇಗದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ, ಇದರ ಪರಿಣಾಮವಾಗಿ 2017 ರಲ್ಲಿ (18,27,959) ಹೋಲಿಸಿದರೆ ಟಿಬಿ ರೋಗಿಗಳ ಸಂಖ್ಯೆ 2018 ರಲ್ಲಿ 18% (21,55,894) ಹೆಚ್ಚಾಗಿದೆ.

ಇದರ ಸಂಖ್ಯೆಯಲ್ಲಿ ಕಡಿತ ಕೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು 'ಸಕ್ರಿಯವಾಗಿ ಕಂಡುಹಿಡಿಯುವುದು, ಖಾಸಗಿ ವಲಯವನ್ನು ತೊಡಗಿಸಿಕೊಳ್ಳುವುದು, ಸಮುದಾಯದ ತೊಡಗಿಸಿಕೊಳ್ಳುವಿಕೆ. ಟಿಬಿ ಉಪಕ್ರಮಗಳನ್ನು ಪ್ರತಿ ಹಂತದಲ್ಲೂ ಮೇಲ್ವಿಚಾರಣೆ ಮಾಡಲಾಗುತ್ತಿದೆ, ಎಂದು ತಿಳಿಸಿದರು.

2025 ರ ವೇಳೆಗೆ ಕ್ಷಯ ರೋಗವನ್ನು ತೊಡೆದುಹಾಕುವುದು ಸರ್ಕಾರದ ಗುರಿಯಾಗಿದೆ, ಅಲ್ಲದೆ ಜಾಗತಿಕ ಸುಸ್ಥಿರ ಅಭಿವೃದ್ಧಿ ಗುರಿಗಳ ನಿರ್ಮೂಲನೆ ಗೊಳಿಸುವ ರೋಗಗಳಲ್ಲಿ ಇದು ಸೇರಿದೆ ಎನ್ನಲಾಗಿದೆ. ಮರಣ ಪ್ರಮಾಣ (ಸಾವು) 2015 ರಲ್ಲಿ ಒಂದು ಲಕ್ಷ ಜನಸಂಖ್ಯೆಗೆ 36 ರಿಂದ 2018 ರಲ್ಲಿ ಒಂದು ಲಕ್ಷ ಜನಸಂಖ್ಯೆಗೆ 33 ಕ್ಕೆ ಇಳಿದಿದೆ. ಗುರಿಗಳನ್ನು ಮತ್ತಷ್ಟು ಸಾಧಿಸಲು ಆರೋಗ್ಯ ಸಚಿವಾಲಯವು ರಾಷ್ಟ್ರೀಯ ಕಾರ್ಯತಂತ್ರದ ಯೋಜನೆಯನ್ನು (2017-25) ಜಾರಿಗೆ ತರುತ್ತಿದೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಆರೋಗ್ಯ ಸಚಿವಾಲಯವು ದೇಶದಲ್ಲಿ ನಿಖರವಾದ ರೋಗದ ಹೊರೆ ತಿಳಿಯಲು ರಾಷ್ಟ್ರೀಯ ಮಟ್ಟದ ಟಿಬಿ ಹರಡುವಿಕೆಯ ಸಮೀಕ್ಷೆಯನ್ನು ಪ್ರಾರಂಭಿಸಿತು.

Trending News