ಮುಂಬೈನ ಆರೆ ಕಾಲೊನಿಯನ್ನು ಅರಣ್ಯವೆಂದು ಘೋಷಿಸಲು ನಿರಾಕರಿಸಿದ ಬಾಂಬೆ ಹೈಕೋರ್ಟ್

  ಮೆಟ್ರೊ ಕಾರ್ ಶೆಡ್‌ಗೆ ದಾರಿ ಮಾಡಿಕೊಡಲು 2,600 ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಉದ್ದೇಶದಿಂದ ಮುಂಬೈನ ಆರೆ ಕಾಲೊನಿಯನ್ನು ಅರಣ್ಯವೆಂದು ಘೋಷಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಮರಗಳನ್ನು ಕಡಿಯುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ನಾಲ್ಕು ಅರ್ಜಿಗಳನ್ನು ಇಂದು ನ್ಯಾಯಾಲಯ ರದ್ದುಪಡಿಸಿದೆ.

Last Updated : Oct 4, 2019, 03:39 PM IST
ಮುಂಬೈನ ಆರೆ ಕಾಲೊನಿಯನ್ನು ಅರಣ್ಯವೆಂದು ಘೋಷಿಸಲು ನಿರಾಕರಿಸಿದ ಬಾಂಬೆ ಹೈಕೋರ್ಟ್  title=
file photo (ANI Photo)

ನವದೆಹಲಿ:  ಮೆಟ್ರೊ ಕಾರ್ ಶೆಡ್‌ಗೆ ದಾರಿ ಮಾಡಿಕೊಡಲು 2,600 ಕ್ಕೂ ಹೆಚ್ಚು ಮರಗಳನ್ನು ಕಡಿಯುವ ಉದ್ದೇಶದಿಂದ ಮುಂಬೈನ ಆರೆ ಕಾಲೊನಿಯನ್ನು ಅರಣ್ಯವೆಂದು ಘೋಷಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಮರಗಳನ್ನು ಕಡಿಯುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ನಾಲ್ಕು ಅರ್ಜಿಗಳನ್ನು ಇಂದು ನ್ಯಾಯಾಲಯ ರದ್ದುಪಡಿಸಿದೆ.

ಐದು ಲಕ್ಷಕ್ಕೂ ಹೆಚ್ಚು ಮರಗಳನ್ನು ಹೊಂದಿರುವ ಆರೆನಲ್ಲಿ ಮುಂಬೈ ಮೆಟ್ರೊಗೆ ಕಾರ್ ಶೆಡ್ ನಿರ್ಮಿಸುವ ಮುಂಬೈನ ನಾಗರಿಕ ಸಂಸ್ಥೆಯ ಟ್ರೀ ಅಥಾರಿಟಿಯ ನಿರ್ಧಾರವನ್ನು ಪರಿಸರವಾದಿಗಳು ಕಳೆದ ಎರಡು ವರ್ಷಗಳಿಂದ ಪ್ರತಿಭಟಿಸುತ್ತಿದ್ದಾರೆ. 'ಈ ವಿಷಯವು ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮುಂದೆ ಬಾಕಿ ಉಳಿದಿದೆ. ಆದ್ದರಿಂದ ನಾವು ಅರ್ಜಿಯನ್ನು ಸಾಮಾನ್ಯತೆಯ ತತ್ವದ ಮೇರೆಗೆ ವಜಾಗೊಳಿಸುತ್ತಿದ್ದೇವೆ ಹೊರತು ಅರ್ಹತೆಗಳ ಮೇಲೆ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಪ್ರದೀಪ್ ನಂದ್ರಾಜೋಗ್ ಮತ್ತು ನ್ಯಾಯಮೂರ್ತಿ ಭಾರತಿ ದಂಗ್ರೆ ಅವರ ನ್ಯಾಯಪೀಠ ಹೇಳಿದೆ.

ಮುಂಬೈ ಮೆಟ್ರೋ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (ಎಂಎಂಆರ್ಸಿಎಲ್) ಆರಿಯಲ್ಲಿ 2,646 ಮರಗಳನ್ನು ಕಡಿಯಲು ಅನುಮತಿ ನೀಡುವ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಿದ ಪರಿಸರ ಕಾರ್ಯಕರ್ತ ಜೊರು ಬಾಥೆನಾ ಅವರು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸುವುದಾಗಿ ಹೇಳಿದ್ದಾರೆ.ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಅವರಂತಹ ಹಲವಾರು ಪ್ರಸಿದ್ಧ ವ್ಯಕ್ತಿಗಳು ಮುಂಬೈ ಮೆಟ್ರೋ ಯೋಜನೆಯನ್ನು ಹೊಗಳಿದ್ದು , ಪರಿಸರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು , ಇದರಿಂದಾಗಿ ಅವರಿ ಮುಂಬೈನಲ್ಲಿರುವ ಬಚ್ಚನ್ ಮನೆ ಹೊರಗೆ ಪ್ರತಿಭಟನೆ ನಡೆಸಿದ್ದರು.

Trending News