ದೆಹಲಿ ಸರ್ಕಾರಕ್ಕೆ ಥ್ಯಾಂಕ್ಯೂ, ಕೋರ್ಟ್ ನಲ್ಲಿ ವಿಚಾರಣೆ ತ್ವರಿತವಾಗಲಿ, ಟಿವಿಯಲ್ಲಿ ಅಲ್ಲ- ಕನ್ನಯ್ಯ ಕುಮಾರ್

ದೆಹಲಿಯ ಆಡಳಿತಾರೂಢ ಕೇಜ್ರಿವಾಲ್ ನೇತೃತ್ವದ ಸರ್ಕಾರವು ದೀರ್ಘಕಾಲದವರೆಗೆ ಬಾಕಿ ಇರುವ ದೇಶದ್ರೋಹ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ನೀಡಿದ ಕೆಲವೇ ಗಂಟೆಗಳ ನಂತರ ಪ್ರತಿಕ್ರಿಯಿಸಿರುವ ಕನ್ನಯ್ಯ ಕುಮಾರ್ ದೆಹಲಿ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

Last Updated : Feb 28, 2020, 11:17 PM IST
ದೆಹಲಿ ಸರ್ಕಾರಕ್ಕೆ ಥ್ಯಾಂಕ್ಯೂ, ಕೋರ್ಟ್ ನಲ್ಲಿ ವಿಚಾರಣೆ ತ್ವರಿತವಾಗಲಿ, ಟಿವಿಯಲ್ಲಿ ಅಲ್ಲ- ಕನ್ನಯ್ಯ ಕುಮಾರ್  title=
Photo courtesy: facebook

ನವದೆಹಲಿ: ದೆಹಲಿಯ ಆಡಳಿತಾರೂಢ ಕೇಜ್ರಿವಾಲ್ ನೇತೃತ್ವದ ಸರ್ಕಾರವು ದೀರ್ಘಕಾಲದವರೆಗೆ ಬಾಕಿ ಇರುವ ದೇಶದ್ರೋಹ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ನೀಡಿದ ಕೆಲವೇ ಗಂಟೆಗಳ ನಂತರ ಪ್ರತಿಕ್ರಿಯಿಸಿರುವ ಕನ್ನಯ್ಯ ಕುಮಾರ್ ದೆಹಲಿ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಕನ್ನಯ್ಯ ಕುಮಾರ್ "ದೇಶದ್ರೋಹ ಪ್ರಕರಣಕ್ಕೆ ಅನುಮತಿ ನೀಡಿದ್ದಕ್ಕಾಗಿ ದೆಹಲಿ ಸರ್ಕಾರಕ್ಕೆ ಧನ್ಯವಾದಗಳು. ಪೋಲಿಸ್ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಕೋರಲಾಗಿದೆ. ಟಿವಿಯಲ್ಲಿ ವಿಚಾರಣೆ ನಡೆಸುವ ಬದಲಾಗಿ ತ್ವರಿತ ನ್ಯಾಯಾಲಯದಲ್ಲಿ ಬೇಗ ವಿಚಾರಣೆಯನ್ನು ನಡೆಸಬೇಕು' ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ 2016 ರ ಫೆಬ್ರವರಿಯಲ್ಲಿ ನಡೆದ ಕ್ಯಾಂಪಸ್ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗಿದ ಮೆರವಣಿಗೆಯನ್ನು ಮುನ್ನಡೆಸಿದ ಆರೋಪ ಕನ್ನಯ್ಯ ಕುಮಾರ್ ಮೇಲಿದೆ.ದೇಶದ್ರೋಹ ಕಾನೂನನ್ನು ಭಾರತದಲ್ಲಿ ರಾಜಕೀಯ ಲಾಭಕ್ಕಾಗಿ ಮತ್ತು ಜನರನ್ನು ಬಾಧಿಸುವ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ತಪ್ಪಾಗಿ ಬಳಸಲಾಗಿದೆ ಎಂದು ಆರೋಪಿಸಿದ ಕನ್ನಯ್ಯ ಕುಮಾರ್, ಅವರ ತ್ವರಿತ ವಿಚಾರಣೆಯು ಅಂತಹ ಸಮಸ್ಯೆಗಳನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ದೇಶದ್ರೋಹದ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಕಳವಳವನ್ನು ಕಾನೂನು ಆಯೋಗವು 2018 ರಲ್ಲಿ ಸಮಾಲೋಚನಾ ಪತ್ರಿಕೆಯಲ್ಲಿ ವ್ಯಕ್ತಪಡಿಸಲಾಗಿತ್ತು , ದೇಶದ ಟೀಕೆ ದೇಶದ್ರೋಹಕ್ಕೆ ಕಾರಣವಾಗುವುದಿಲ್ಲ ಎಂದು ಹೇಳಿದೆ. ಮೂಲತಃ  ಈ ವಿಭಾಗವನ್ನು ಪರಿಚಯಿಸಿದ ಬ್ರಿಟನ್ ನಲ್ಲಿ ಇಂತಹ ಕಠಿಣ ಕಾನೂನುಗಳನ್ನು ರದ್ದುಗೊಳಿಸಿದೆ ಎಂದು ಸೂಚಿಸಲಾಯಿತು.

ದೆಹಲಿ ಪೊಲೀಸರ ವಿಶೇಷ ಸೆಲ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರಕ್ಕೆ ಕಳೆದ ವಾರ ಪತ್ರ ಬರೆದ ನಂತರ ರಾಷ್ಟ್ರ ವಿರೋಧಿ ಘೋಷಣೆಗಳ ಬಗ್ಗೆ ಕನ್ನಯ್ಯ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಲಾಯಿತು.

 

Trending News