ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆ - ಉಗ್ರರ ನಡುವೆ ಗುಂಡಿನ ಕಾಳಗ

ದಕ್ಷಿಣ ಕಾಶ್ಮೀರದ ಬಿಜ್ವಾರಾದ ಪಜಲ್ಪೋರಾದಲ್ಲಿ ಇಂದು ಮುಂಜಾನೆ 3 ಗಂಟೆಯಿಂದ ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗ ಮುಂದುವರೆದಿದೆ.

Last Updated : Oct 16, 2019, 08:35 AM IST
ದಕ್ಷಿಣ ಕಾಶ್ಮೀರದಲ್ಲಿ ಭದ್ರತಾ ಪಡೆ - ಉಗ್ರರ ನಡುವೆ ಗುಂಡಿನ ಕಾಳಗ title=

ಶ್ರೀನಗರ: ದಕ್ಷಿಣ ಕಾಶ್ಮೀರದ ಬಿಜ್ವಾರಾದ ಪಜಲ್ಪುರದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಕಾಳಗ ಮುಂದುವರೆದಿದೆ. ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸೇನೆ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ  2-3 ಭಯೋತ್ಪಾದಕರು ಗುಂಡಿನ ಮಳೆಗೈದಿದ್ದಾರೆ ಎಂಬ ವರದಿಗಳಿವೆ. 

ಮುಂಜಾನೆ 3 ಗಂಟೆ ಸುಮಾರಿಗೆ ಈ ಭಯೋತ್ಪಾದಕರು ತಲೆಮರೆಸಿಕೊಂಡಿರುವ ಬಗ್ಗೆ ಸೈನ್ಯಕ್ಕೆ ಮಾಹಿತಿ ದೊರೆತಿದೆ. ಇದಕ್ಕೂ ಮುನ್ನ ಸೋಮವಾರ, ಶೋಪಿಯಾನ್ ಪ್ರದೇಶದ ಸಿಂಧು ಶೆರ್ಮಲ್‌ನಲ್ಲಿ ರಾಜಸ್ಥಾನ್ ಟ್ರಕ್ ಚಾಲಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದು, ನಂತರ ದಕ್ಷಿಣ ಕಾಶ್ಮೀರದಲ್ಲಿ ಭೀತಿಯ ವಾತಾವರಣ ಉದ್ಭವಿಸಿದೆ. ಈ ಘಟನೆಯನ್ನು ಸ್ಥಳೀಯ ಜನರು ತೀವ್ರವಾಗಿ ಖಂಡಿಸಿದ್ದಾರೆ.

ಟ್ರಕ್ ಚಾಲಕನ ಹತ್ಯೆಗೆ ಸಂಬಂಧಿಸಿದಂತೆ 15 ಜನರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಅಪರಿಚಿತ ಬಂದೂಕುಧಾರಿಗಳು ಹಣ್ಣು ತುಂಬಿದ ಲಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಲಕನನ್ನು ಕೊಂದು ಸೇಬುಗಳನ್ನು ತುಂಬಿದ ಟ್ರಕ್‌ಗೆ ಬೆಂಕಿ ಹಚ್ಚಿದರು. ಚಾಲಕನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆತ ಮೃತಪಟ್ಟಿರುವುದಾಗಿ ಘೋಶಿಸಲಾಯಿತು. ಮೃತನನ್ನು ರಾಜಸ್ಥಾನ್ ನಿವಾಸಿ ಶರೀಫುದ್ದೀನ್ ಖಾನ್ ಎಂದು ಗುರುತಿಸಲಾಗಿದೆ.

ಘಟನೆಯ ನಂತರ, ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದು ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿದವು. ಈ ಘಟನೆಯು ದಕ್ಷಿಣ ಕಾಶ್ಮೀರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಹಣ್ಣು ಬೆಳೆಗಾರರಲ್ಲಿ ಭಯಭೀತರನ್ನಾಗಿಸಿದೆ. ದಕ್ಷಿಣ ಕಾಶ್ಮೀರದಲ್ಲಿ ಟ್ರಕ್ ಚಾಲಕನ ಹತ್ಯೆಯ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಉದ್ವಿಗ್ನವಾಗಿದೆ ಎಂದು ಜನರು ಹೇಳುತ್ತಾರೆ. ಶೋಪಿಯಾನ್‌ನ ಹಣ್ಣು ಬೆಳೆಗಾರ ಜೀಶಾನ್ ಅಹ್ಮದ್ (ಹೆಸರು ಬದಲಾಗಿದೆ) ಪ್ರಕಾರ, 'ಪರಿಸ್ಥಿತಿ ಆತಂಕಕಾರಿಯಾಗಿದೆ, ನಮ್ಮ ಹಣ್ಣುಗಳನ್ನು ಭಾರತದಾದ್ಯಂತ ಕಳುಹಿಸುತ್ತಿರುವುದರಿಂದ ನಮ್ಮನ್ನು ಗುರಿಯಾಗಿಸಲಾಗುತ್ತಿದೆ' ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಆಗಸ್ಟ್ 5 ರಂದು ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ತೆಗೆದುಹಾಕುವ ಮೊದಲು ಮುಂಗಡ ಹಣವನ್ನು ತೆಗೆದುಕೊಳ್ಳಲಾಗಿದೆ ಎಂಬ ಕಾರಣಕ್ಕೆ ದೇಶದ ಎಲ್ಲಾ ಭಾಗಗಳಿಗೆ ಹಣ್ಣುಗಳನ್ನು ಕಳುಹಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಅವರು ಹೇಳಿದರು. ಹಣ್ಣು ಬೆಳೆಗಾರರು ಯಾವುದೇ ತಪ್ಪು ಅಥವಾ ಕಾನೂನುಬಾಹಿರ ಕೆಲಸ ಮಾಡುತ್ತಿಲ್ಲ, ಅದಕ್ಕಾಗಿ ನಮ್ಮನ್ನು ಗುರಿಯಾಗಿಸಲಾಗುತ್ತಿದೆ. ರಾತ್ರಿಯ ಸಮಯದಲ್ಲಿ ನಾವು ನಮ್ಮ ಸರಕುಗಳನ್ನು ಸಾಗಿಸುತ್ತಿದ್ದೇವೆ. ಅದಾಗ್ಯೂ ನಾವು ಗುರಿಯಾಗಿರುವುದು ದುರದೃಷ್ಟಕರ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದ ಭಾರತ್ಪುರ ಜಿಲ್ಲೆಯ ಉಬಾ ಗ್ರಾಮದ ಶರೀಫ್ ಖಾನ್ ಎಂಬ ನಾಗರಿಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂದರ್ಭದಲಿ ಚಾಲಕನನ್ನು ರಕ್ಷಿಸಲು ಗ್ರಾಮಸ್ಥರು ಯತ್ನಿಸಿದರು ಎಂದು ತಿಳಿದುಬಂದಿದೆ. ಆದರೆ ಭಯೋತ್ಪಾದಕರು ಗ್ರಾಮಸ್ಥರನ್ನು ಕೂಡ ಹೊಡೆದು ಹೇಯ ಕೃತ್ಯ ಎಸಗಿದ್ದಾರೆ.  ಪ್ರಾಥಮಿಕ ತನಿಖೆಯ ಪ್ರಕಾರ, ಈ ಭಯೋತ್ಪಾದಕ ಕ್ರಮದ ಹಿಂದೆ ಜೈಶ್ ಮತ್ತು ಹಿಜ್ಬ್ ಅವರ ಭಯೋತ್ಪಾದಕ ಗುಂಪುಗಳ ಕೈವಾಡವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Trending News