ಹೌದು, ಆಫೀಸ್ ಪೀಠೋಪಕರಣಗಳನ್ನು ಮನೆಗೆ ತಂದಿದ್ದೇನೆ!- ಆಂಧ್ರಪ್ರದೇಶದ ಮಾಜಿ ಸ್ಪೀಕರ್

ಆಂಧ್ರಪ್ರದೇಶದ ಮಾಜಿ ಸ್ಪೀಕರ್ ಹಾಗೂ ತೆಲುಗು ದೇಶಂನ ಹಿರಿಯ ನಾಯಕ ಶಿವಪ್ರಸಾದ್ ರಾವ್ ಕೊಡೆಲಾ ತಮ್ಮ ಅವಧಿಯಲ್ಲಿ ಆಫೀಸ್ ಪೀಠೋಪಕರಣಗಳನ್ನು ಮನೆಗೆ ತಂದಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಘನತೆವೆತ್ತ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. 

Last Updated : Aug 23, 2019, 07:51 PM IST
ಹೌದು, ಆಫೀಸ್ ಪೀಠೋಪಕರಣಗಳನ್ನು ಮನೆಗೆ ತಂದಿದ್ದೇನೆ!- ಆಂಧ್ರಪ್ರದೇಶದ ಮಾಜಿ ಸ್ಪೀಕರ್ title=

ನವದೆಹಲಿ:  ಆಂಧ್ರಪ್ರದೇಶದ ಮಾಜಿ ಸ್ಪೀಕರ್ ಹಾಗೂ ತೆಲುಗು ದೇಶಂನ ಹಿರಿಯ ನಾಯಕ ಶಿವಪ್ರಸಾದ್ ರಾವ್ ಕೊಡೆಲಾ ತಮ್ಮ ಅವಧಿಯಲ್ಲಿ ಆಫೀಸ್ ಪೀಠೋಪಕರಣಗಳನ್ನು ಮನೆಗೆ ತಂದಿರುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಘನತೆವೆತ್ತ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. 

ಕೇವಲ ಅಷ್ಟೇ ಅಲ್ಲದೆ ತಮ್ಮ ಹೇಳಿಕೆಗೆ ಯಾವುದೇ ಪಶ್ಚಾತಾಪಪಡದೆ ಆಂಧ್ರಪ್ರದೇಶದ ಅಸೆಂಬ್ಲಿ ಸೆಕ್ರೆಟರಿಯಟ್ ಪೀಠೋಪಕರಣಗಳನ್ನು ಹಿಂತಿರುಗಿಸುವುದಾಗಿ ಇಲ್ಲವೇ ಅಥವಾ ದರವನ್ನು ಉಲ್ಲೇಖಿಸಿದರೆ ಅದನ್ನು ಖರೀದಿಸುವುದಾಗಿ ಹೇಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ, ಆಂಧ್ರಪ್ರದೇಶದ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈ.ಎಸ್.ಆರ್.ಸಿ.ಪಿ ಸರ್ಕಾರವು ಈ ವಿಚಾರವಾಗಿ ಕೊಡೆಲಾ ಅವರ ಮೇಲೆ ಗರಂ ಆಗಿತ್ತು, ರಾಜ್ಯ ವಿಭಜನೆಯ ನಂತರ ಹೈದರಾಬಾದ್ ನಿಂದ ವಿಜಯವಾಡಕ್ಕೆ ಸ್ಥಳಾಂತರಿಸಲ್ಪಟ್ಟ ಕೆಲವು ಅಧಿಕೃತ ಪೀಠೋಪಕರಣಗಳು ಕಂಡುಬಂದಿಲ್ಲ ಎನ್ನುವುದು ತಿಳಿದುಬಂದಿತ್ತು. ಇದಕ್ಕೆ ಪ್ರಮುಖ ಕಾರಣ ಮಾಜಿ ಸ್ಪೀಕರ್ ಕೊಡೆಲಾ ಶಿವಪ್ರಸಾದ ರಾವ್.

2014 ರಲ್ಲಿ ಆಂಧ್ರಪ್ರದೇಶವನ್ನು ವಿಭಜಿಸಿದಾಗ ಮತ್ತು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಆಯಾ ಸರ್ಕಾರಗಳು ರಚನೆಯಾದ ನಂತರ ಅಧಿಕೃತ ಪೀಠೋಪಕರಣಗಳನ್ನು ವಿತರಿಸಲಾಯಿತು. ಆಂಧ್ರಕ್ಕೆ ಮೀಸಲಿಟ್ಟ ಪೀಠೋಪಕರಣಗಳನ್ನು ರಾಜಧಾನಿ ವಿಜಯವಾಡ ಮತ್ತು ಆ ರಾಜ್ಯದ ಇತರ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.ಆ ಸಮಯದಲ್ಲಿ ಹೊಸ ಸ್ಪೀಕರ್ ಕಚೇರಿಗೆ ಹೊಸ ಪೀಠೋಪಕರಣಗಳನ್ನು ನೀಡಲಾಗಿದ್ದರಿಂದ ಸ್ಪೀಕರ್ ಕಚೇರಿಗೆ ಮೀಸಲಿಟ್ಟ ಪೀಠೋಪಕರಣಗಳು ನೇರವಾಗಿ ಕೋಡೆಲಾ ಶಿವಪ್ರಸಾದ ರಾವ್ ಅವರ ಮನೆಗೆ ಹೋದವು. ಆ ಸಮಯದಲ್ಲಿ ಯಾರೂ ಪ್ರಶ್ನಿಸಲಿಲ್ಲ ಮತ್ತು ಯಾರಿಗೂ ಧೈರ್ಯವಿರಲಿಲ್ಲ ಏಕೆಂದರೆ ಅವರು ಸ್ಪೀಕರ್ ಮಾತ್ರವಲ್ಲದೆ ತೆಲುಗು ದೇಶಂ ಪಕ್ಷದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು.

ಮೂಲಗಳ ಪ್ರಕಾರ, ಕೊಡೆಲಾ ಬಳಿ ಇರುವ  ಅಧಿಕೃತ ಪೀಠೋಪಕರಣಗಳ ಪಟ್ಟಿ (ಪರಿಶೀಲನೆಗೆ ಒಳಪಟ್ಟಿರುತ್ತದೆ):

ಪ್ಲಾಸ್ಟಿಕ್ ಕುರ್ಚಿಗಳು - 27
ಬಿಎಸಿ (ವ್ಯವಹಾರ ಸಲಹಾ ಸಮಿತಿ) ಹಾಲ್ ಕುರ್ಚಿಗಳು - 8
ಭೋಜನ ಹಾಲಿನ  ಕುರ್ಚಿಗಳು - 8
ಕಾರ್ಯನಿರ್ವಾಹಕ ಕುರ್ಚಿಗಳು - 2
ಏಕ ಆಸನ ಸೋಫಾಸ್ - 2
ಮೂರು ಆಸನಗಳ ಸೋಫಾ - 1
ಊಟದ ಟೇಬಲ್  - 1
ಸಂದರ್ಶಕರ ಕುರ್ಚಿಗಳು - 5
ಮರದ ವಿಶ್ರಾಂತಿ ಕುರ್ಚಿಗಳು -10

ಕೇವಲ ಇಷ್ಟೇ ಅಲ್ಲದೆ ಕೊಡೆಲಾ ತನ್ನ ಮಗ ಮತ್ತು ಮಗಳ ಬಳಕೆಗಾಗಿ ಕೆಲವು ಎ/ಸಿ, ಮತ್ತು ಫ್ಯಾನ್ ಗಳನ್ನು ಕಳುಹಿಸಿದ ಆರೋಪವೂ ಇದೆ.

ಕೆಲವು ಅಧಿಕೃತ ಪೀಠೋಪಕರಣಗಳು ನನ್ನೊಂದಿಗೆ ಇವೆ ಎಂದು ನಾನು ಅಲ್ಲಗಳೆಯುತ್ತಿಲ್ಲ. ಈ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಲು ಅಸೆಂಬ್ಲಿ ಸ್ಪೀಕರ್ ಮತ್ತು ಕಾರ್ಯದರ್ಶಿಗೆ ನಾನು ಪತ್ರ ಬರೆಯುತ್ತಿದ್ದೇನೆ ಅಥವಾ  ಮೊತ್ತವನ್ನು ಪಾವತಿಸುತ್ತೇನೆ ' ಎಂದು ಕೊಡೆಲಾ ಶಿವಪ್ರಸಾದ ರಾವ್ ಹೇಳಿದ್ದಾರೆ.

 
 

Trending News