ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತಿಯಾದ ನಂತರ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಮಾಜಿ ಮುಖ್ಯ ನ್ಯಾಯಮೂರ್ತಿ ದಿಪಾಕ್ ಮಿಶ್ರಾ ಅವರ ನೇತೃತ್ವದಲ್ಲಿ ಸರಿಯಾದ ಮಾರ್ಗದಲ್ಲಿ ಸುಪ್ರೀಂಕೋರ್ಟ್ ಕಾರ್ಯನಿರ್ವಹಿಸಲಿಲ್ಲ ಎಂದು ಹೇಳಿದ್ದಾರೆ.
ಈ ಕುರಿತಾಗಿ ಎಎನ್ಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಅವರು "ನಾವು ಸುಪ್ರೀಂಕೋರ್ಟ್ ಸರಿಯಾದ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎನ್ನುವ ವಿಚಾರವಾಗಿ ಹಲವು ಬಾರಿ ನಾವು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಗಮನಕ್ಕೆ ತಂದಿದ್ದೇವೆ.ಆದರೆ ಯಾವಾಗ ಅದರಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲವೋ ಆಗ ನಾವು ದೇಶದ ಮುಂದೆ ಈ ವಿಷಯವನ್ನು ತಂದಿಟ್ಟೆವು ಎಂದು ಈ ಹಿಂದೆ ತಾವು ಸಿಜೆಐ ವಿರುದ್ದ ಬಂಡಾಯವೆದ್ದಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು.
ಈ ಕಾರಣಕ್ಕಾಗಿಯೇ ಜನವರಿ 12 ರಂದು ಭಾರತೀಯ ನ್ಯಾಯ್ಯಾಂಗ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ಅಂತಹ ಕ್ರಮವನ್ನು ತೆಗೆದುಕೊಳ್ಳಲಾಯಿತು ಎಂದು ತಿಳಿಸಿದರು. ಇನ್ನು ಮುಂದುವರೆದು " ಇದಕ್ಕೆ ಇನ್ನೊಂದು ಕಾರಣವು ಇದೇ ನನ್ನ ನಿಲುವು ಎರಡು ಕಾವಲು ನಾಯಿಗಾಗಿ ,ಒಂದು ಮಾಧ್ಯಮ ಇನ್ನೊಂದು ಜನರಿಗೆ ಅರಿವು ಮೂಡಿಸುವುದು. ಇನ್ನೊಂದು ಯಾವಾಗ ಇದಕ್ಕೂ ಜಗ್ಗದಿದ್ದಾಗ ನಾವು ಕಚ್ಚಲು ನಿರ್ಧರಿಸಿದೆವು" ಎಂದು ಅವರು ಹೇಳಿದರು.
ಇದೇ ವೇಳೆ ಸುಪ್ರೀಂಕೋರ್ಟ್ ಇತರ ಮೂವರು ನ್ಯಾಯಾಧೀಶರು ಜಸ್ಟಿ ಚೆಲಾಮೇಶ್ವರ್, ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿ ಎಂ.ಬಿ ಲೋಕೂರ್ ರೊಂದಿಗೆ ಸೇರಿ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ದ ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ನ್ಯಾ ಜೋಸೆಫ್ ಯಾವುದೇ ವಿಷಾದ ವ್ಯಕ್ತಪಡಿಸಲಿಲ್ಲ.