ಸುಪ್ರೀಂಕೋರ್ಟ್ ನಲ್ಲಿ ಫೆಬ್ರವರಿ 26 ರಂದು ಅಯೋಧ್ಯೆ ಅರ್ಜಿ ವಿಚಾರಣೆ

ಅಯೋಧ್ಯೆಯ ರಾಮಜನ್ಮಭೂಮಿ ಬಾಬರಿ ಮಸೀದಿ ಭೂ ವಿವಾದದ ವಿಚಾರಣೆಯನ್ನು ಫೆಬ್ರವರಿ 26 ರಂದು ಸುಪ್ರೀಂಕೋರ್ಟ್ ನಡೆಸಲಿದೆ. 

Last Updated : Feb 20, 2019, 05:46 PM IST
 ಸುಪ್ರೀಂಕೋರ್ಟ್ ನಲ್ಲಿ ಫೆಬ್ರವರಿ 26 ರಂದು ಅಯೋಧ್ಯೆ ಅರ್ಜಿ ವಿಚಾರಣೆ title=

ಹೊಸದಿಲ್ಲಿ: ಅಯೋಧ್ಯೆಯ ರಾಮಜನ್ಮಭೂಮಿ ಬಾಬರಿ ಮಸೀದಿ ಭೂ ವಿವಾದದ ವಿಚಾರಣೆಯನ್ನು ಫೆಬ್ರವರಿ 26 ರಂದು ಸುಪ್ರೀಂಕೋರ್ಟ್ ನಡೆಸಲಿದೆ. 

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಈ ಪ್ರಕರಣದ ವಿಚಾರಣೆ ನಡೆಸಲಿದೆ.ಜನವರಿ 27 ರಂದು ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಎಸ್. ಎ.ಬೋಬ್ಡೆ ಲಭ್ಯವಿಲ್ಲದ ಕಾರಣ ಜನವರಿ 29 ರಂದು ನಿಗದಿತ ವಿಚಾರಣೆಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತ್ತು. ಸಿಜೆಐ ಮತ್ತು ಜಸ್ಟಿಸ್ ಬೊಬ್ಡೆ ಅವರಲ್ಲದೆ ನ್ಯಾಯಮೂರ್ತಿಗಳಾದ ಡಿ. ವೈ ಚಂದ್ರಚೂದ್, ಅಶೋಕ್ ಭೂಷಣ್ ಮತ್ತು ಎಸ್.ಎ.ನಜೀರ್ ಸಂವಿಧಾನಿಕ ಪೀಠದಲ್ಲಿರುವ ಇತರ ನ್ಯಾಯಾಧೀಶರಾಗಿದ್ದಾರೆ.

2010 ರಲ್ಲಿ ಅಲಹಾಬಾದ್ ಹೈಕೋರ್ಟ್ ಅಯೋಧ್ಯೆಯ 2.77 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರಾ ಮತ್ತು ರಾಮ್ ಲಲ್ಲಾ ಹೀಗೆ ಮೂರು ಭಾಗಗಳಾಗಿ ವಿಂಗಡಿಸಲಾಗಿತ್ತು. ಆದರೆ ತೀರ್ಪನ್ನು ಖಂಡಿಸಿ ಈಗ ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಹಿನ್ನಲೆಯಲ್ಲಿ ಇದರ ವಿಚಾರಣೆಯನ್ನು ಈಗ ಸುಪ್ರೀಕೋರ್ಟ್ ಫೆ.26ಕ್ಕೆ ನಡೆಸಲಿದೆ. ಕೆಲವು ವಾರಗಳ ಹಿಂದೆ ಸರ್ಕಾರ ಸ್ವಾಧೀನ ಪಡಿಸಿಕೊಂಡಿರುವ 67 ಎಕರೆ ಭೂಮಿಯನ್ನು ಮಾಲಿಕರಿಗೆ ಹಿಂದುರಿಗಿಸಬೇಕೆಂದು ಕೇಂದ್ರ ಸರ್ಕಾರವು ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿತ್ತು.

Trending News