/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಮಹಾರಾಷ್ಟ್ರ(Maharashtra)ದಲ್ಲಿ ಜಾರಿಯಲ್ಲಿದ್ದ ರಾಷ್ಟ್ರಪತಿ ಆಡಳಿತವನ್ನುಏಕಾಏಕಿ ಹಿಂತೆಗೆದುಕೊಂಡು, ಬಿಜೆಪಿ ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಟ್ಟ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರ ನಡೆ ಪ್ರಶ್ನಿಸಿ ಶಿವಸೇನೆ(Shiv Sena), ಎನ್‌ಸಿಪಿ(NCP) ಹಾಗೂ ಕಾಂಗ್ರೆಸ್(Congress)  ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ(Supreme Court) ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠವು ನಾಳೆಗೆ(ನವೆಂಬರ್ 26) ತೀರ್ಪನ್ನು ಕಾದಿರಿಸಿದೆ. ಇದರಿಂದಾಗಿ ದೇವೇಂದ್ರ ಫಡ್ನವೀಸ್(Devendra Fadnavis) ಸರ್ಕಾರಕ್ಕೆ ಇನ್ನೂ ಒಂದು ದಿನ ರಿಲೀಫ್ ಸಿಕ್ಕಂತಾಗಿದೆ.

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಕುರಿತು ಎರಡನೇ ದಿನ ಸುಪ್ರೀಂ ಕೋರ್ಟ್‌ನಲ್ಲಿ ವಾದ-ವಿವಾದ ಮಂಡನೆಯಾಯಿತು. ಅರ್ಜಿ ವಿಚಾರಣೆಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಅಶೋಕ್ ಭೂಶನ್ ಮತ್ತು ಸಂಜೀವ್ ಖನ್ನಾ ನೇತೃತ್ವದ ತ್ರಿಸದಸ್ಯ ಪೀಠವು ಮಂಗಳವಾರ ಬೆಳಿಗ್ಗೆ 10:30;;ಎ ಆದೇಶ ನೀಡುವುದಾಗಿ ತಿಳಿಸಿತು.

ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟಿನ ಕುರಿತು ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ-ವಿವಾದ ಹೀಗಿತ್ತು:

* ಮೊದಲಿಗೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ದೇವೇಂದ್ರ ಫಡ್ನವಿಸ್ ಅವರು ಮೊನ್ನೆ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಸಲ್ಲಿಸಿದ್ದ ಪತ್ರ ಮತ್ತು ರಾಜ್ಯಪಾಲರ ಪತ್ರವನನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ(Solicitor General Tushar Mehta) ವಾದ ಮಂಡಿಸಿದರು. 

- ರಾಜ್ಯಪಾಲರು ಶಿವಸೇನೆ, ಬಿಜೆಪಿ ಮತ್ತು ಎನ್ ಸಿಪಿ ಪಕ್ಷಗಳನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಅವರು ಸರ್ಕಾರ ರಚಿಸಲು ವಿಫಲವಾದ ಹಿನ್ನಲೆಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲಾಯಿತು. ಸರ್ಕಾರ ರಚಿಸಲು ಯಾವ ಪಕ್ಷಕ್ಕೆ ಎಷ್ಟು ಶಾಸಕರ ಬೆಂಬಲವಿದೆ ಎಂದು ರಾಜ್ಯಪಾಲರು ನೋಡಿಕೊಂಡು ಕುಳಿತುಕೊಳ್ಳಬೇಕಾಗಿಲ್ಲ. ಶಿವಸೇನೆಗೆ 56, ಎನ್‌ಸಿಪಿ 54, ಐಎನ್‌ಸಿ(INC) 44 ಸ್ಥಾನಗಳಿವೆ. ಕುದುರೆ ವ್ಯಾಪಾರದ ಬಗ್ಗೆ ಮಾತುಕತೆ ನಡೆದಿತ್ತು. ಹೀಗೆ  ಚರ್ಚಿಸಬೇಕಾದ ಹಲವು ವಿಷಯಗಳಿರುವುಡರಿಂದ ನ್ಯಾಯಾಲಯಕ್ಕೆ ಉತ್ತರವನ್ನು ಸಲ್ಲಿಸಲು ನಾನು ಸಮಯವನ್ನು ಬಯಸುತ್ತೇನೆ. ನನ್ನ ಬಳಿ ನನ್ನೊಂದಿಗೆ ಮೂಲ ದಾಖಲೆಗಳು "ಎಂದು ಸಾಲಿಸಿಟರ್ ಜನರಲ್ ಮೆಹ್ತಾ ತನ್ನ ವಾದ ಮಂಡಿಸಿದರು. 

- ನವೆಂಬರ್ 22 ರಂದು ಅಜಿತ್ ಪವಾರ್ ಅವರು ಸಲ್ಲಿಸಿದ ಪತ್ರದ ಪ್ರತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಚುನಾಯಿತ ಎಲ್ಲ ಶಾಸಕರು ನನ್ನನ್ನು ಎನ್‌ಸಿಪಿ ಮುಖ್ಯಸ್ಥರಾಗಿ ಆಯ್ಕೆ ಮಾಡಿದ್ದಾರೆ ಎಂದು ಅಜಿತ್ ಪವಾರ್ ಪತ್ರದಲ್ಲಿ ತಿಳಿಸಲಾಗಿದೆ. ಚುನಾಯಿತ 54 ಎನ್‌ಸಿಪಿ ಶಾಸಕರ ಪಟ್ಟಿಯನ್ನು ಪತ್ರಕ್ಕೆ ಲಗತ್ತಿಸಲಾಗಿದೆ ಮತ್ತು ಎನ್‌ಸಿಪಿ ಬಿಜೆಪಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿರುವ ಬಗ್ಗೆ ಉಲ್ಲೇಖಿಸಿದರು.

ಇದೇ ಸಂದರ್ಭದಲ್ಲಿ ದೇವೇಂದ್ರ ಫಡ್ನವೀಸ್ ಅವರು ರಾಜ್ಯಪಾಲರ ಮುಂದೆ ಇಟ್ಟಿದ್ದ ಪತ್ರವನ್ನು ಓದಿದ ಎಸ್‌ಜಿ ತುಷಾರ್ ಮೆಹ್ತಾ, ಈ ಪತ್ರದಲ್ಲಿ 54 ಎನ್‌ಸಿಪಿ ಶಾಸಕರ ಬೆಂಬಲವನ್ನು ವಿಸ್ತರಿಸಿ ಅಜಿತ್ ಪವಾರ್ ಬರೆದ ಪತ್ರವನ್ನೂ ಉಲ್ಲೇಖಿಸಿದರು. ಈ ವಿಷಯವನ್ನು ಆಧರಿಸಿ, ಫಡ್ನವೀಸ್ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದಾಗಿ ಹೇಳಿಕೊಂಡರು. ಇದನ್ನು ಆಧರಿಸಿ  ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದರು ಮತ್ತು ಬಹುಮತವನ್ನು ಸಾಬೀತುಪಡಿಸಲು ಅವರಿಗೆ ನವೆಂಬರ್ 30 ರವರೆಗೆ ಕಾಲಾವಕಾಶ ನೀಡಿದ್ದಾರೆ. ಆದರೆ ಈಗ ಪ್ರತಿಪಕ್ಷಗಳು ಮೈತ್ರಿ ಸರ್ಕಾರವನ್ನು 24 ಗಂಟೆಗಳಲ್ಲಿ ಬಹುಮತ ಸಾಬೀತು ಪಡಿಸುವಂತೆ ಬಯಸುತ್ತಿವೆ ಎಂದು ಎಸ್‌ಜಿ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ

* ಬಳಿಕ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ವಾರಾಂತ್ಯದಲ್ಲಿ ಕೆಲವು ಎನ್‌ಸಿಪಿ ಶಾಸಕರು ಅಜಿತ್ ಪವಾರ್ ಮತ್ತು ಫಡ್ನವೀಸ್ ಅವರೊಂದಿಗೆ ಹೋದರು ಮತ್ತು ಈಗ ಈ ಶಾಸಕರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಬೆಂಬಲಿಸುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲರು ಸರ್ಕಾರ ರಚಿಸುವ ಬಗ್ಗೆ ತಮ್ಮ ಮುಂದಿದ್ದ ಪತ್ರಗಳ ಆಧಾರದ ಮೇಲೆ ವರ್ತಿಸಿದ್ದರಿಂದ ಅವರು ಸಮಂಜಸವಾಗಿ ವರ್ತಿಸಿದರು. ಅಸೆಂಬ್ಲಿಯ ಕಾರ್ಯವಿಧಾನದಂತೆ ಪ್ರೋಟೀಮ್ ಸ್ಪೀಕರ್ ಅವರನ್ನು ನೇಮಿಸಲಾಗುವುದು, ಅವರು ಶಾಸಕರಿಗೆ ಪ್ರಮಾಣ ವಚನ ಬೋಧಿಸುತ್ತಾರೆ. ನಂತರ ಅವರು ಸ್ಪೀಕರ್ ಅನ್ನು ಆಯ್ಕೆ ಮಾಡುತ್ತಾರೆ. ಬಳಿಕ ಬಹುಮತ ಸಾಬೀತು ಪಡಿಸಲಾಗುತ್ತದೆ ಎಂದು ನ್ಯಾಯಾಲಯದ ಮುಂದೆ ತಿಳಿಸಿದರು.

ಮಧ್ಯ ಪ್ರವೇಶಿಸಿದ ಎಸ್‌ಜಿ ತುಷಾರ್ ಮೆಹ್ತಾ, ಬಿಜೆಪಿಗೆ 54 ಎನ್‌ಸಿಪಿ ಶಾಸಕರ ಬೆಂಬಲವಿದೆ. ನಾವು ಹೇಗೋ ಎಲ್ಲರನ್ನೂ ಒಟ್ಟುಗೂಡಿಸಿದ್ದೇವೆ. 24 ಗಂಟೆಗಳಲ್ಲಿ Floor Test ನಡೆಯದಿದ್ದರೆ, ಅವರು ದೂರ ಹೋಗುತ್ತಾರೆ ಎಂದು ಒಂದು ಪಕ್ಷ ಹೇಳಬಹುದೇ? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ, ಇದೇ ರೀತಿಯ ಪ್ರಕರಣಗಳಲ್ಲಿ ನ್ಯಾಯಾಲಯದ ಹಿಂದಿನ ತೀರ್ಪನ್ನು ಉಲ್ಲೇಖಿಸಿ, ಹೆಚ್ಚಿನ ಪ್ರಕರಣಗಳಲ್ಲಿ 24 ಗಂಟೆಗಳಲ್ಲಿ, ಕೆಲವು - 48 ಗಂಟೆಗಳಲ್ಲಿ ಬಹುಮತ ಸಾಬೀತು ಪಡಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಮಹಾರಾಷ್ಟ್ರ ರಾಜ್ಯಪಾಲರು ಸಂಪೂರ್ಣ ವಿವೇಚನೆಯಿಂದ ನವೆಂಬರ್ 23 ರಂದು ಅತಿದೊಡ್ಡ ಪಕ್ಷವನ್ನು ಆಹ್ವಾನಿಸಿದ್ದಾರೆ. ನಮಗೆ 2-3 ದಿನಗಳ ಸಮಯವನ್ನು ನೀಡಿ ಮತ್ತು ಉತ್ತರವನ್ನು ಸಲ್ಲಿಸುತ್ತೇವೆ" ಎಂದು ಮನವಿ ಮಾಡಿದರು.

* ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಹಿರಿಯ ವಕೀಲ ಮನಿಂದರ್ ಸಿಂಗ್, ಅಜಿತ್ ಪವಾರ್ ಅವರು ಎನ್‌ಸಿಪಿಯ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ನವೆಂಬರ್ 22 ರಂದು ಅವರು ಎನ್‌ಸಿಪಿ ನಾಯಕನಲ್ಲ ಎಂದು ಬಿಂಬಿಸಲು ಯಾವುದೇ ಸಾಕ್ಷಿಯಿಲ್ಲ ಎಂದು ವಾದಿಸಿದರು.

* ಏತನ್ಮಧ್ಯೆ, ಕಾಂಗ್ರೆಸ್ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಘೋಷಣೆ ಮತ್ತು ಪ್ರಮಾಣವಚನಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತ್ತು ಶನಿವಾರದಂದು ನಡೆದ ಘಟನೆಗಳನ್ನು ನ್ಯಾಯಾಲಯದ ಮುಂದೆ ವಿವರಿಸಿದರು. "ಇಷ್ಟು ದಿನ ಕಾದಿದ್ದ ರಾಜ್ಯಪಾಲರು, ಶನಿವಾರ ಬೆಳಿಗ್ಗೆ 5.47 ಕ್ಕೆ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಳ್ಳುವ ಮತ್ತು ಬೆಳಿಗ್ಗೆ 8 ಗಂಟೆಗೆ ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ಸ್ಥಾಪಿಸುವ ಅಗತ್ಯತೆ ಏನು? ಎಂದು ಪ್ರಶ್ನಿಸಿದರು. ಶುಕ್ರವಾರ ಸಂಜೆ 7 ರಿಂದ ಶನಿವಾರ ಬೆಳಿಗ್ಗೆ 5 ಗಂಟೆಯ ನಡುವೆ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೂರು ಪಕ್ಷಗಳು ಮೈತ್ರಿ ಸರ್ಕಾರವನ್ನು ರಚಿಸುವುದನ್ನು ತಡೆಯುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ" ಎಂದು ಸಿಬಲ್ ಹೇಳಿದರು.

* ಎನ್‌ಸಿಪಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ, "ಇಂದು ನಮ್ಮ ಪ್ರಭುತ್ವದ ಮುಂದೆ ಒಂದು ವಿಶಿಷ್ಟವಾದ ಪ್ರಕರಣವಿದೆ, ಅದು Floor Test ಇರಬೇಕೆಂದು ಎರಡೂ ಕಡೆಯವರು ಒಪ್ಪುತ್ತಾರೆ. ಪ್ರಶ್ನೆ ಒಂದೇ - ಯಾವಾಗ ಬಹುಮತ ಸಾಬೀತು ನಡೆಯಬೇಕು? ಅಲ್ಲಿ ಒಂದು ಸಹಿಗಳ ಪಟ್ಟಿ (54 ಎನ್‌ಸಿಪಿ ಶಾಸಕರಲ್ಲಿ) ಇದೆ. ಆದರೆ ಶಾಸಕರು ಬಿಜೆಪಿಯನ್ನು ಬೆಂಬಲಿಸಲು ಒಪ್ಪುತ್ತಿದ್ದಾರೆ ಎಂದು ಹೇಳಿದ್ದಾರಾ? ಕವರ್ ಲೆಟರ್ ಇಲ್ಲದೆ ಸಹಿಗಳಿರಬಹುದು. ಇದು ಪ್ರಜಾಪ್ರಭುತ್ವದ ಕೊಲೆ! " ಎಂದು ತಿಳಿಸಿದರು.

ಬಹುಮತ ಸಾಬೀತು ಪಡಿಸುವುದು ಪ್ರಸ್ತುತ ಪ್ರಕರಣದಲ್ಲಿ "ಹೇಗೆ" ಮುಖ್ಯವಾಗಿದೆ ಎಂಬುದನ್ನು ವಿವರಿಸಿದ ಸಿಂಘ್ವಿ, ಪಕ್ಷದ ಹೊರತಾಗಿಯೂ, ಸದನದ ಹೆಚ್ಚಿನ ಸದಸ್ಯರನ್ನು ಪ್ರೋಟೀಮ್ ಸ್ಪೀಕರ್ ಆಗಿ ನೇಮಿಸಬೇಕು. ಬಹುಮತವನ್ನು ತಕ್ಷಣವೇ ನಡೆಸಬೇಕು. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಪ್ರತಿಯೊಂದು ಆದೇಶವು ಪ್ರಜಾಪ್ರಭುತ್ವದ ಶುದ್ಧತೆಯನ್ನು ಕಾಪಾಡಿಕೊಳ್ಳಲು  24 ಗಂಟೆಗಳ  ಒಳಗೆ ಬಹುಮತ ಸಾಬೀತು ಪಡಿಸುವಂತೆ ತೀರ್ಪು ನೀಡಿದೆ" ಎಂದು ಉಲ್ಲೇಖಿಸಿದರು.

ಎರಡೂ ಕಡೆಯ ವಾದ-ವಿವಾದ ಆಲಿಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟಿಗೆ ಸಂಬಂಧಿಸಿದ ಪ್ರಕರಣದ ತನ್ನ ಆದೇಶವನ್ನು  ಮಂಗಳವಾರ (ನವೆಂಬರ್ 26) ಬೆಳಿಗ್ಗೆ 10.30 ಕ್ಕೆ ಕಾಯ್ದಿರಿಸಿದೆ.

Section: 
English Title: 
Supreme Court reserves order on Maharashtra floor test for Tomorrow at 10.30 am
News Source: 
Home Title: 

ನಾಳೆಗೆ ತೀರ್ಪು ಕಾದಿರಿಸಿದ ಸುಪ್ರೀಂಕೋರ್ಟ್: ಫಡ್ನವೀಸ್ ಸರ್ಕಾರಕ್ಕೆ ಇನ್ನೂ 1 ದಿನ ರಿಲೀಫ್

ನಾಳೆಗೆ ತೀರ್ಪು ಕಾದಿರಿಸಿದ ಸುಪ್ರೀಂಕೋರ್ಟ್: ಫಡ್ನವೀಸ್ ಸರ್ಕಾರಕ್ಕೆ ಇನ್ನೂ 1 ದಿನ ರಿಲೀಫ್
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ನಾಳೆಗೆ ತೀರ್ಪು ಕಾದಿರಿಸಿದ ಸುಪ್ರೀಂಕೋರ್ಟ್:ಫಡ್ನವೀಸ್ ಸರ್ಕಾರಕ್ಕೆ ರಿಲೀಫ್
Publish Later: 
No
Publish At: 
Monday, November 25, 2019 - 12:49
Created By: 
Yashaswini V
Updated By: 
Yashaswini V
Published By: 
Yashaswini V