ನಾಲ್ಕು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸ್ಸು

ದೆಹಲಿ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್ ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಈಗ ಸುಪ್ರೀ ಕೋರ್ಟಿನ ಕೊಲ್ಜಿಯಂ ನಾಲ್ವರು ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. 

Last Updated : May 13, 2019, 05:38 PM IST
ನಾಲ್ಕು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸ್ಸು  title=

ನವದೆಹಲಿ: ದೆಹಲಿ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್ ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಈಗ ಸುಪ್ರೀ ಕೋರ್ಟಿನ ಕೊಲ್ಜಿಯಂ ನಾಲ್ವರು ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. 

ಈಗ ಹೈಕೋರ್ಟ್ ಗಳಿಗೆ ಕೊಲಿಜಿಯಂ ಮೂಲಕ  ಮುಖ್ಯನ್ಯಾಯಾಧೀಶರಾಗಿ ಶಿಫಾರಸ್ಸು ಮಾಡಿರುವವರಲ್ಲಿ ಡಿ.ಎನ್.ಪಟೇಲ್ (ದೆಹಲಿ ಹೈಕೋರ್ಟ್) ಎ.ಎ.ಕುರೇಷಿ (ಮಧ್ಯಪ್ರದೇಶ ಹೈಕೋರ್ಟ್)  ವಿ. ರಾಮಸುಬ್ರಮಣಿಯನ್  (ಹಿಮಾಚಲ ಪ್ರದೇಶ ಹೈಕೋರ್ಟ್) ಮತ್ತು ಆರ್.ಎಸ್.ಚೌಹಾನ್ (ತೆಲಂಗಾಣ ಹೈಕೋರ್ಟ್) ರು  ಪ್ರಮುಖ ನ್ಯಾಯಾಧೀಶರಾಗಿದ್ದಾರೆ. 

ಕಳೆದ ತಿಂಗಳು ಸುಪ್ರೀಂಕೋರ್ಟ್ ನ  ಕೊಲ್ಜಿಯಂ ಜಸ್ಟಿಸ್ ಕೃಷಾ ಮುರಾರಿಯನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗೆ ಮೇಘಾಲಯ ಹೈಕೋರ್ಟ್ ಗೆ ನ್ಯಾಯಮೂರ್ತಿ ಯಾಕುಬ್ ಮಿರ್ ಮತ್ತು ಮಣಿಪುರ ಹೈಕೋರ್ಟ್ ಗೆ ಜಸ್ಟಿಸ್ ರಾಮಲಿಂಗ ಸುಧಾಕರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು.   

Trending News