Delhi Blast Near Israeli Embassy, ದೆಹಲಿಯಲ್ಲಿ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಬ್ಲಾಸ್ಟ್

Delhi Blast Near Israeli Embassy - ಬ್ಲಾಸ್ಟ್ ಕುರಿತು ಮಾಡಲಾಗಿರುವ ಕರೆಯಲ್ಲಿ ಇಸ್ರೇಲ್ ಕುರಿತು ನಮೂದಿಸಲಾಗಿಲ್ಲ. ಇನ್ನೊಂದೆಡೆ ಈ ಸ್ಫೋಟ ಇಸ್ರೇಲ್ ದೂತಾವಾಸದ ಹತ್ತಿರ ಇರುವ ಕಟ್ಟಡವೊಂದರಲ್ಲಿ ಸಂಭವಿಸಿದೆ ಎನ್ನಲಾಗಿದೆ.

Written by - Nitin Tabib | Last Updated : Jan 29, 2021, 09:17 PM IST
  • ದೆಹಲಿ ಇಸ್ರೇಲಿ ದೂತಾವಾಸದ ಬಳಿ ಸ್ಫೋಟ
  • ಕಡಿಮೆ ತೀವ್ರತೆಯ ಸ್ಫೋಟ ಎಂದ ಪೊಲೀಸರು.
  • ಸ್ಫೋಟದಲ್ಲಿ ಯಾರಿಗೂ ಗಾಯಗಳಾಗಿಲ್ಲ.
Delhi Blast Near Israeli Embassy, ದೆಹಲಿಯಲ್ಲಿ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಬ್ಲಾಸ್ಟ್ title=
Delhi Police(File Photo)

ನವದೆಹಲಿ: Delhi Blast Near Israeli Embassy - ರಾಷ್ಟ್ರರಾಜಧಾನಿ ದೆಹಲಿಯ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇಸ್ರೇಲಿ ರಾಯಭಾರ (Isreli Embassy) ಕಚೇರಿಯ ಮುಂದೆ ಸ್ಫೋಟದ ವರದಿಯಾಗಿದೆ. ದೆಹಲಿ ಪೊಲೀಸರಿಗೆ ಸ್ಫೋಟದ ಕರೆ ಬಂದ ಕೂಡಲೇ ವಿಶೇಷ ಪೊಲೀಸರ ತಂಡ ಸ್ಥಳಕ್ಕೆ ತಲುಪಿದ್ದು, ಅಲ್ಲಿ ಹಲವಾರು ವಾಹನಗಳ ಗಾಜು ಪುಡಿಪುಡಿಯಾಗಿದ್ದು ಪತ್ತೆಯಾಗಿದೆ. ಸ್ಫೋಟದ ಬಗ್ಗೆ ಮಾಡಿದ ಫೋನ್ ಕರೆಗಳಲ್ಲಿ ಇಸ್ರೇಲ್ ಉಲ್ಲೇಖವಿಲ್ಲ ಎಂದು ಪೊಲೀಸರು (Delhi Police) ಹೇಳಿದ್ದಾರೆ. ದೂತಾವಾಸದ ಬಳಿಯ ಬಂಗಲೆಯಲ್ಲಿ ಸ್ಫೋಟ ಸಂಭವಿಸಿದೆ.

ಆದರೆ ಈ ಸ್ಫೋಟದಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ ಆದ ಕುರಿತು ವರದಿಯಾಗಿಲ್ಲ.  ಆದರೂ ಕೂಡ ಮೂರು ಅಗ್ನಿಶಾಮಕದಳದ ವಾಹನಗಳು ಸ್ಫೋಟದ ಸ್ಥಳಕ್ಕೆ  ಧಾವಿಸಿವೆ.  ಇದು ಕಡಿಮೆ ತೀವ್ರತೆಯ ಸ್ಫೋಟ (Low Intensity Blast 2021) ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಸ್ಫೋಟದಲ್ಲಿ ಯಾರಿಗೂ ಕೂಡ ಗಾಯಗಳಾಗಿಲ್ಲ. ಮೂರು ವಾಹನಗಳಿಗೆ ಹಾನಿ ತಲುಪಿದೆ. ಪೊಲೀಸರು ಇದನ್ನು ಒಂದು ಕುಚೇಷ್ಟೆ ಎಂದು ಬಣ್ಣಿಸಿದ್ದಾರೆ.

ಇದನ್ನು ಓದಿ- Afghanistan Blast: ಬಾಂಬ್ ವಿಸ್ಫೋಟಕ್ಕೆ ನಲುಗಿದ ಕಾಬೂಲ್, 9 ಮಂದಿ ದುರ್ಮರಣ

ಇನ್ನೊಂದೆಡೆ ಸ್ಫೋಟದ ಕುರಿತು ಮಾಹಿತಿ ನೀಡಿರುವ ಅಗ್ನಿಶಾಮಕ ದಳದ ಮೂಲಗಳು, ಘಟನಾ ಸ್ಥಳದಲ್ಲಿ ಐದು ವಾಹನಗಳ ಗಾಜುಗಳು ಪುಡಿಪುಡಿಯಾಗಿವೆ ಎಂದು ಹೇಳಿವೆ. ಈ ಸ್ಫೋಟ ದೂತಾವಾಸದ ಸಮೀಪ ಇರುವ 6 ನೇ ನಂಬರ್ ಬಂಗಲೆಯಲ್ಲಿ ಸಂಭವಿಸಿದೆ ಎಂದು ಹೇಳಿವೆ. ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೋಲೀಸರ ವಿಶೇಷ ತಂಡ (Delhi Police Special Team) ತನಿಖೆಯಲ್ಲಿ ತೊಡಗಿದೆ.

ಇದನ್ನು ಓದಿ-ಕಾಬೂಲ್‌ನಲ್ಲಿ ಮೂರು ಬಾಂಬ್‌ ಸ್ಫೋಟ; ಕನಿಷ್ಠ 12 ಜನ ಸಾವು

ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳು ಇಸ್ರೇಲಿ ನಾಗರಿಕರು ಹಾಗೂ ಚಬದ್ ಹೌಸ್ (Chabad House) ಹಾಗೂ ಅವರ ಉತ್ಸವಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ವರ್ತಿಸಿತ್ತು.

ಇದನ್ನು ಓದಿ-Dynamite blast : ಕಲ್ಲುಗಣಿಯಲ್ಲಿ ಮಧ್ಯರಾತ್ರಿಯ ಭೀಕರ ಸ್ಫೋಟ!8 ಕಾರ್ಮಿಕರು ಛಿದ್ರ ಛಿದ್ರ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News