ಜನರ ಸಾವಿನಲ್ಲಿ ಸಂಭ್ರಮಿಸುತ್ತಿದ್ದೀರಿ ಎಂದೆನಿಸುತ್ತಿಲ್ಲವೇ? ಪ್ರಧಾನಿಗೆ 'ಏಕತಾಮೂರ್ತಿ' ಸಂತ್ರಸ್ತರ ಅಳಲು

ಇದೇ ಅಕ್ಟೋಬರ್ 31ರಂದು ಸರ್ದಾರ್ ವಲ್ಲಬಾಯ್ ಪಟೇಲ್ ಅವರ 182 ಮೀಟರ್ ಎತ್ತರದ ಮೂರ್ತಿ ಅನಾವರಣಗೊಳ್ಳುತ್ತಿದೆ. ಆದರೆ ಈಗ ಈ ಮೂರ್ತಿ ನಿರ್ಮಾಣಕ್ಕಾಗಿ ಅಲ್ಲಿನ ನೂರಾರು ಗ್ರಾಮಸ್ಥರನ್ನು ಒಕ್ಕಲೆಬ್ಬಿಸಲಾಗಿದೆ, ಅಲ್ಲದೆ ಈ ಮೂರ್ತಿ ನಿರ್ಮಾಣಕ್ಕಾಗಿ ಸುತ್ತಲಿನ ನೈಸರ್ಗಿಕ ಸಂಪನ್ಮೂಲವನ್ನು ನಾಶಮಾಡಲಾಗಿದೆ.

Last Updated : Oct 30, 2018, 01:37 PM IST
ಜನರ ಸಾವಿನಲ್ಲಿ ಸಂಭ್ರಮಿಸುತ್ತಿದ್ದೀರಿ ಎಂದೆನಿಸುತ್ತಿಲ್ಲವೇ? ಪ್ರಧಾನಿಗೆ 'ಏಕತಾಮೂರ್ತಿ' ಸಂತ್ರಸ್ತರ ಅಳಲು title=

ಕೇವಾಡಿಯಾ: ಇದೇ ಅಕ್ಟೋಬರ್ 31ರಂದು ಸರ್ದಾರ್ ವಲ್ಲಬಾಯ್ ಪಟೇಲ್ ಅವರ 182 ಮೀಟರ್ ಎತ್ತರದ ಮೂರ್ತಿ ಅನಾವರಣಗೊಳ್ಳುತ್ತಿದೆ. ಆದರೆ ಈಗ ಈ ಮೂರ್ತಿ ನಿರ್ಮಾಣಕ್ಕಾಗಿ ಅಲ್ಲಿನ ನೂರಾರು ಗ್ರಾಮಸ್ಥರನ್ನು ಒಕ್ಕಲೆಬ್ಬಿಸಲಾಗಿದೆ, ಅಲ್ಲದೆ ಈ ಮೂರ್ತಿ ನಿರ್ಮಾಣಕ್ಕಾಗಿ ಸುತ್ತಲಿನ ನೈಸರ್ಗಿಕ ಸಂಪನ್ಮೂಲವನ್ನು ನಾಶಮಾಡಲಾಗಿದೆ.

ಈಗ ಪಿಟಿಐ ವರದಿ ಪ್ರಕಾರ ಸರ್ದಾರ್ ಸರೋವರ್ ಆಣೆಕಟ್ಟು ಹತ್ತಿರವಿರುವ ಸುಮಾರು 22 ಗ್ರಾಮಗಳ ಮುಖ್ಯಸ್ಥರು ಈಗ ಪ್ರಧಾನಿಗೆ ಈ ಮೂರ್ತಿ ಅನಾವರಣವನ್ನು ವಿರೋಧಿಸಿ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಗ್ರಾಮಸ್ಥರು "ಅರಣ್ಯ, ನದಿಗಳು, ಜಲಪಾತಗಳು, ಭೂಮಿ ಮತ್ತು ಕೃಷಿಯು ಇಲ್ಲಿ ಹಲವಾರು ಪೀಳಿಗೆಗಳಿಂದ ನಮಗೆ ಬೆಂಬಲವಾಗಿ ನಿಂತಿವೆ. ನಾವು ಅದರ ಮೇಲೆಯೇ ಜೀವಿಸಿದ್ದೇವೆ, ಆದರೆ ಈಗ ಎಲ್ಲವು ನಾಶವಾಗಿಹೋಗಿದೆ, ನಿಮಗೆ ಇನ್ನೊಬ್ಬರ ಸಾವಿನ ಮೂಲಕ ಸಂಭ್ರಮಾಚರಣೆ ಪಡುತ್ತಿದ್ದಿರಿ ಎಂದು ಅನಿಸುತ್ತಿಲ್ಲವೇ? ಎಂದು ಗ್ರಾಮಸ್ಥರು ಪ್ರಧಾನಿಗೆ ಪತ್ರದ ಮೂಲಕ ಅಳಲು ತೋಡಿಕೊಂಡಿದ್ದಾರೆ.

ಇನ್ನು ಮುಂದುವರೆದು "ನಾವೆಲ್ಲಾ ಗ್ರಾಮಸ್ಥರು ನಾವು ದುಃಖದಿಂದ ಹೇಳುತ್ತಿದ್ದೇವೆ ಅಕ್ಟೋಬರ್ 31 ರಂದು ನಿಮ್ಮನ್ನು ಸ್ವಾಗತಿಸುವುದಿಲ್ಲ, ಒಂದು ವೇಳೆ ನೀವು ಇಲ್ಲಿಗೆ ಅಪರಿಚಿತ ಅತಿಥಿಯಂತೆ ಬಂದರೂ ಕೂಡ ನಿಮಗೆ ಇಲ್ಲಿ ಸ್ವಾಗತವಿಲ್ಲ" ಎಂದು ಗ್ರಾಮದ ಮುಖ್ಯಸ್ಥರುಗಳು ಪತ್ರ ಬರೆದಿದ್ದಾರೆ.

ಇನ್ನು ಈ ಪ್ರದೇಶದಲ್ಲಿ ಬಹುತೇಕ ಗ್ರಾಮಗಳಿಗೆ ಶಾಲೆ, ಆಸ್ಪತ್ರೆ, ಹಾಸ್ಪಿಟಲ್, ಮತ್ತು ಕುಡಿಯುವ ನೀರಿನ ಸೌಲಭ್ಯ ಇಲ್ಲದ ಸಂದರ್ಭದಲ್ಲಿ ಏಕತಾ ಮೂರ್ತಿಯಿಂದಾಗಿ ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗಿದೆ."ಒಂದು ವೇಳೆ ಸರ್ದಾರ್ ಪಟೇಲ್ ನಮಗಾದ ಅನ್ಯಾಯ ಮತ್ತು ನೈಸರ್ಗಿಕ ಸಂಪನ್ಮೂಲ ಹಾನಿಯನ್ನು ನೋಡಿದ್ದರೆ ಅವರು ಕಣ್ಣೀರು ಹಾಕುತ್ತಿದ್ದರು" ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

 

Trending News